Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಸೌರಶಕ್ತಿ ಬಳಕೆ ಬಗ್ಗೆ ಹೆಚ್ಚು ಜಾಗೃತಿ- ಪವರ್​ ಕಟ್​ ಪ್ರಾಬ್ಲಂಗೆ ಶೀಘ್ರದಲ್ಲೇ ಸಿಗಲಿದೆ ಮುಕ್ತಿ

ಟೀಮ್​ ವೈ.ಎಸ್​. ಕನ್ನಡ

ಸೌರಶಕ್ತಿ ಬಳಕೆ ಬಗ್ಗೆ ಹೆಚ್ಚು ಜಾಗೃತಿ- ಪವರ್​ ಕಟ್​ ಪ್ರಾಬ್ಲಂಗೆ ಶೀಘ್ರದಲ್ಲೇ ಸಿಗಲಿದೆ ಮುಕ್ತಿ

Tuesday April 11, 2017 , 2 min Read

ಸೌರಶಕ್ತಿ ಬಳಸಿಕೊಳ್ಳುವ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ನೀರಿನ ಅಭಾವದಿಂದ ವಿದ್ಯುತ್ ಉತ್ಪಾದನೆ ಕೊರತೆ ಆಗಿರುವ ಹಿನ್ನಲೆಯಲ್ಲಿ ಸೌರಶಕ್ತಿಯ ಬಳಕೆ ಬಗ್ಗೆ ಹೆಚ್ಚು ಅರಿವು ಮೂಡುತ್ತಿದೆ. ಭಾರತದಲ್ಲಂತೂ ಸೌರಶಕ್ತಿಯ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ನವೀಕರಿಸಬಹುದಾದ ಇಂಧನವನ್ನು ಬಳಸಿಕೊಳ್ಳುವುದರಲ್ಲಿ ಭಾರತ ಐರೋಪ್ಯ ರಾಷ್ಟ್ರಗಳಿಗೆ ಸವಾಲೊಡ್ಡುವ ಸೂಚನೆ ನೀಡುತ್ತಿದೆ. 2016-17ರಲ್ಲಿ ಭಾರತ ಸುಮಾರು 5,525.98 ಮೆಗಾವ್ಯಾಟ್ ಸೊಲಾರ್ ಶಕ್ತಿಯನ್ನು ಉತ್ಪಾದಿಸಿ ಬಳಸಿಕೊಂಡಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಪ್ರಕಾರ ಭಾರತ ಕಳೆದ ವರ್ಷಕ್ಕಿಂತ ಸುಮಾರು 3010 ಮೆಗಾವ್ಯಾಟ್ ಹೆಚ್ಚು ಸೌರಶಕ್ತಿಯನ್ನು ಉತ್ಪಾದಿಸಿದೆ. ಈ ಮೂಲಕ ನವೀಕರಿಸಬಹುದಾದ ಇಂಧನವನ್ನು ಬಳಸಿಕೊಳ್ಳುವ ಬಗ್ಗೆ ಹೆಚ್ಚು ಜಾಗೃತಿಯನ್ನು ಕೂಡ ಮೂಡಿಸುತ್ತಿದೆ.

image


ಭಾರತ ಮಾರ್ಚ್ 2016ರ ವೇಳೆಗೆ ಸುಮಾರು 12,228.93 ಮೆಗಾವ್ಯಾಟ್ ಸೌರಶಕ್ತಿಯನ್ನು ಬಳಸಿಕೊಂಡಿತ್ತು. ಭಾರತದ ಈ ಸಾಧನೆ ಉತ್ತಮವಾಗಿದ್ದರೂ ಅಂದುಕೊಂಡ ಗುರಿ ಮುಟ್ಟಲು ಸಾಧ್ಯವಾಗಿಲ್ಲ.

“ ಮುಂದಿನ ವರ್ಷದ ಅಂತ್ಯಕ್ಕೆ ಸುಮಾರು 20,000 ಮೆಗಾವ್ಯಾಟ್ ಸೋಲಾರ್ ಶಕ್ತಿಯನ್ನು ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ. 2017-18ರಲ್ಲಿ ಸುಮಾರು 7750 ಮೆಗಾವ್ಯಾಟ್ ಹೆಚ್ಚುವರಿ ಸೊಲಾರ್ ಶಕ್ತಿಯನ್ನು ಬಳಸಿಕೊಳ್ಳಬೇಕಿದೆ. ಈ ಗುರಿ ಮುಟ್ಟಿದರೆ 2 ವರ್ಷಕ್ಕೆ ಮೊದಲೇ ಜವಹಾರ್ ಲಾಲ್ ನೆಹರು ನ್ಯಾಷನಲ್ ಸೊಲಾರ್ ಮಿಷನ್ ಗುರಿಯನ್ನು ಮುಟ್ಟಿದಂತಾಗುತ್ತದೆ.”
- ಸಂತೋಷ್ ವೈದ್ಯ, ಜಂಟಿ ಕಾರ್ಯದರ್ಶಿ ಮಿನಿಸ್ಟ್ರಿ ಆಫ್ ನ್ಯೂ ಅಂಡ್ ರಿನಿವೇಬಲ್ ಎನರ್ಜಿ

ಕೇಂದ್ರ ಇಂಧನ ಸಚಿವಾಲಯ 2016-17ರ ಅಂತ್ಯಕ್ಕೆ ಸುಮಾರು 17000ಮೆಗಾವ್ಯಾಟ್ ಸೌರಶಕ್ತಿ ಉತ್ಪಾದನೆಗೆ ಯೋಜನೆ ರೂಪಿಸಿತ್ತು. ಜವಹಾರ್ ಲಾಲ್ ನೆಹರು ನ್ಯಾಷನಲ್ ಸೊಲಾರ್ ಮಿಷನ್ ಆರಂಭದಲ್ಲಿ 20000 ಮೆಗಾವ್ಯಾಟ್ ಉತ್ಪಾದನೆಯ ಟಾರ್ಗೆಟ್ ನೀಡಿತ್ತು. ಆದ್ರೆ ನರೇಂದ್ರ ಮೋದಿ ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿಕೊಂಡ ಮೇಲೆ ಇದನ್ನು 100000 ಮೆಗಾವ್ಯಾಟ್​ಗೆ ಏರಿಸಲಾಗಿತ್ತು. ಮಾರ್ಚ್ 2017ರ ವೇಳೆಗೆ ಕೇವಲ 2803 ಮೆಗಾವ್ಯಾಟ್ ಸೌರಶಕ್ತಿಯನ್ನು ಮಾತ್ರ ಉತ್ಪಾದಿಸಲಾಗಿದೆ. ಸೌರ ಶಕ್ತಿಯನ್ನು ಬಳಸಿಕೊಂಡರೆ ಮುಂದಿನ ದಿನಗಳಲ್ಲಿ ವಿದ್ಯುತ್ ದರದಲ್ಲೂ ಕಡಿತ ಕಂಡುಬರಲಿದೆ. ಯಾಕಂದ್ರೆ ಉತ್ಪಾದನೆಗೊಂಡ ಸೌರಶಕ್ತಿಯನ್ನು ಪವರ್ ಗ್ರಿಡ್​ಗಳಿಗೆ ಸರಬರಾಜು ಮಾಡುವ ಯೋಜನೆ ಇಟ್ಟುಕೊಳ್ಳಲಾಗಿದೆ.

2016-17ರಲ್ಲಿ ಆಂಧ್ರ ಪ್ರದೇಶ ಒಟ್ಟು 1294.26 ಮೆಗಾವ್ಯಾಟ್ ಸೌರಶಕ್ತಿಯನ್ನು ಉತ್ಪಾದಿಸಿದೆ. 2ನೇ ಸ್ಥಾನದಲ್ಲಿರುವ ಕರ್ನಾಟಕ 882.38 ಮೆಗಾವ್ಯಾಟ್ ಸೌರಶಕ್ತಿಯನ್ನು ಉತ್ಪಾದಿಸಿದೆ. ತೆಲಂಗಾಣ 759.13 ಮೆಗಾವ್ಯಾಟ್ ಸೌರಶಕ್ತಿಯನ್ನು ಉತ್ಪಾದನೆ ಮಾಡಿದೆ. ರಾಜಸ್ಥಾನ 543 ಮೆಗಾವ್ಯಾಟ್, ತಮಿಳುನಾಡು 630.01 ಮೆಗಾವ್ಯಾಟ್, ಪಂಜಾಬ್ 388 ಮೆಗಾವ್ಯಾಟ್, ಉತ್ತರ ಪ್ರದೇಶ 193.24 ಮೆಗಾವ್ಯಾಟ್ ಮತ್ತು ಉತ್ತರಾಖಂಡ್ 192.35 ಮೆಗಾವ್ಯಾಟ್ ಸೌರಶಕ್ತಿಯನ್ನು ಉತ್ಪಾದಿಸಿದೆ.

ಕಳೆದ ಮೂರು ವರ್ಷಗಳಲ್ಲಿ ರಾಜಸ್ಥಾನ ಅತೀ ಹೆಚ್ಚು ಸೌರಶಕ್ತಿ ಉತ್ಪಾದನೆ ಮಾಡುವ ರಾಜ್ಯ ಅನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿತ್ತು. ಆದ್ರೆ ಈಗ ರಾಜಸ್ಥಾನ ಸಾಕಷ್ಟು ಹಿಂದಿ ಬಿದ್ದಿದೆ. ಇತ್ತೀಚೆಗೆ ರೈಲ್ವೈ ಸಚಿವ ಸುರೇಶ್ ಪ್ರಭು “ಮಿಷನ್ 41ಕೆ” ಮೂಲಕ ರೈಲ್ವೇಯಲ್ಲಿ ಸುಮಾರು 41000 ಕೋಟಿ ರೂಪಾಯಿಗಳನ್ನು ವಿದ್ಯುತ್ ಬದಲು ಸೌರಶಕ್ತಿ ಬಳಸಿಕೊಳ್ಳುವ ಮೂಲಕ ಉಳಿತಾಯ ಮಾಡುವ ಯೋಜನೆ ಆರಂಭಿಸಿತ್ತು. ಒಟ್ಟಿನಲ್ಲಿ ಸೌರಶಕ್ತಿಯ ಬಳಕೆ ಪರಿಸರ ಸಂರಕ್ಷಣೆಗೂ ಸಹಾಯ ಮಾಡುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಗಾಸಿಪ್​ಗಳಿಗೆ ಗುಡ್ ಬೈ-ಫ್ಲಿಪ್​ಕಾರ್ಟ್ ತೆಕ್ಕೆಗೆ ಬಿತ್ತು ಇ-ಬೇ

2. ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!

3. ಮನೆ ಬಾಗಿಲಿಗೆ ಮಾವು- ಹಣ್ಣುಗಳ ರಾಜನ ಮಾರಾಟಕ್ಕೆ ಹೊಸ ಪ್ಲಾನ್