Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಅಣ್​​ತಮ್ಮಾ..! ಏನೇ ಪ್ರಾಬ್ಲಂ ಬಂದ್ರೂ bro4u.com ಇದೆ..!

ಚೈತ್ರ ಎನ್​​.

ಅಣ್​​ತಮ್ಮಾ..! ಏನೇ ಪ್ರಾಬ್ಲಂ ಬಂದ್ರೂ bro4u.com ಇದೆ..!

Saturday October 24, 2015 , 3 min Read

ಈ ಬೆಂಗಳೂರಲ್ಲಿ ಏನ್ ಬೇಕಾದ್ರೂ ಸಿಗುತ್ತೆ ನಿಜ. ಆದ್ರೆ ಎಲ್ಲಿ ಸಿಗುತ್ತೆ ಅನ್ನೋದು ಮಾತ್ರ ದೊಡ್ಡ ತಲೆ ನೋವಿನ ವಿಷಯ. ಅಪ್ಪಿ ತಪ್ಪಿ ಟಾಯ್ಲೆಟ್ ಬ್ಲಾಕ್ ಆದ್ರೆ ನಮ್ಮ ಏರಿಯಾದಲ್ಲಿ ಪ್ಲಂಬರ್ ಎಲ್ಲಿ ಹುಡುಕೋದು..? ಈಗ ತಾನೇ ಫ್ರೆಂಡ್ ಬರ್ತ್‍ಡೇ ಅಂತಾ ಗೊತ್ತಾಯ್ತು ಆಫೀಸಿಂದ ಗಿಫ್ಟ್ ಮತ್ತು ಬೊಕ್ಕೆ ಕಳ್ಸೋದು ಹೇಗೆ..? ನಾಳಿದ್ದು ಪೂಜೆ ಇದೆ. ಕಾರ್ ವಾಶ್ ಮಾಡೊದಕ್ಕೆ ಹುಡುಗರೇ ಸಿಕ್ತಿಲ್ಲ.. ಎಲ್ಲಿ ಅಂತ ಹುಡುಕೊಂಡು ಹೋಗೋದು? ಅಬ್ಬಬ್ಬಾ ಈ ವಿಕೆಂಡ್ ಬಂದ್ರೆ ಬಟ್ಟೆ ಒಗೆಯೋಷ್ಟರಲ್ಲಿ ರಜೆ ಮಜಾ ಮುಗಿದು ಹೋಗಿರತ್ತೆ. ಇನ್ನು ಲಾಂಡ್ರಿಗೆ ಯಾರು ಇದನ್ನೆಲ್ಲಾ ಹೊತ್ಕೊಂಡು ಹೋಗೋದು? ಮನೆ ಖಾಲಿ ಮಾಡೋಕೆ ನಮ್ ಏರಿಯಾ ಪ್ಯಾಕರ್ಸ್ ಅಂಡ್ ಮೂವರ್ಸ್ ಎಲ್ಲಿ ಸಿಗ್ತಾರೆ..? ಅಂತಾ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳೋದು ಬಿಡಿ. ಅಣ್ಣನಂತೆ ನಿಮ್ಮ ಕೆಲಸಕ್ಕೆ ನಿಮ್ಮ ಮನೆಯಲ್ಲೆ ನಿಮ್ಮ ಲ್ಯಾಪ್‍ಟಾಪ್, ಕಂಪ್ಯೂಟರ್ ಒಳಗೆ ಕುಳಿತ್ತಿದ್ದಾನೆ ಬ್ರೋ ಫಾರ್ ಯೂ.ಕಾಂ(bro4u.com).

image


ಯೆಸ್ ನಿಮ್ಮೆಲ್ಲಾ ಸರ್ವಿಸ್ ಒರಿಯೆಂಟೆಡ್ ಸಮಸ್ಯೆಗಳಿಗೆ ಇಲ್ಲಿದೆ ಸಲ್ಯೂಷನ್ ಬ್ರೋ ಫಾರ್ ಯೂ.ಕಾಂ(bro4u.com).

ಏನಿದು ಬ್ರೋ ಫಾರ್ ಯೂ. ಕಾಂ(bro4u.com)..?

ಸಿಂಪಲ್! ಬೆಂಗಳೂರಲ್ಲಿ ಹಣ್ಣು, ತರಕಾರಿ, ಬಟ್ಟೆ , ಅಡುಗೆ ಮನೆ, ಚಿನ್ನ , ಬೆಳ್ಳಿಗೆ ಸಂಬಂಧಿಸಿದಂತೆ "ಉತ್ಪನ್ನ ಅಥವಾ ಪ್ರಾಡಕ್ಟ್​​ಗಳಿಗೆ" ನೂರಾರು ಶಾಪಿಂಗ್ ವೆಬ್‍ಸೈಟ್‍ಗಳ ದರ್ಬಾರು. ಆದ್ರೆ "ಸೇವೆ ಆಧಾರಿತ ಅಥವಾ ಸರ್ವೀಸ್" ಒರಿಯೆಂಟೆಡ್ ವೆಬ್ ಪೋರ್ಟಲ್‍ಗಳು ಇಲ್ಲವೇ ಇಲ್ಲ. ಕರ್ನಾಟಕದಲ್ಲೇ ಮೊದಲ ಸರ್ವೀಸ್ ಒರಿಯೆಂಟೆಡ್ ವೆಬ್ ಪೋರ್ಟಲ್ ಎಂಬ ಹೆಗ್ಗಳಿಕೆ ಬ್ರೋ ಫಾರ್ ಯೂ. ಕಾಂ (bro4u.com)ನದ್ದು. ನಮ್ಮಲ್ಲಿ ಸರ್ವಿಸ್‍ಗಳು ಆರ್ಗನೈಸ್ಡ್ ಆಗಿ ಇಲ್ಲ. ಒಂದು ಸೇವೆ ಬೇಕೆಂದರೆ ದಿನಪೂರ್ತಿ ಅಲೆದಾಟ ಮತ್ತು ತೃಪ್ತಿದಾಯಕ ಸೇವೆಗೂ ಕೊರತೆ. ಇದನ್ನೆಲ್ಲಾ ಮನಗಂಡು ಕರ್ನಾಟಕದ ಶೃಂಗೇರಿ, ಕೊಪ್ಪ, ಹೊಸಪೇಟೆಯ ಹುಡುಗರು ಹುಟ್ಟುಹಾಕಿದ ಆನ್‍ಲೈನ್ ಸಂಸ್ಥಯೇ ಬ್ರೋ ಫಾರ್‍ಯೂ.ಕಾಂ(bro4u.com).

ಬ್ರೋ ಫಾರ್ ಯೂ.ಕಾಂ (bro4u.com) ಮೊದಲ ಹೆಜ್ಜೆ

ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ನಿರ್ವಹಿಸಲು ಎಮ್‍ಬಿಎ, ಎಂಜಿನಿಯರಿಂಗ್, ಸಿಎ ಮುಗಿಸಿ ಬೆಂಗಳೂರಿಗೆ ಬಂದ ರಜತ್ ಮತ್ತು ಪ್ರಮೋದ್ ಹೆಗಡೆ ಮತ್ತು ಸ್ನೇಹಿತರು ಮೊದ ಮೊದಲು ಲಾಂಡ್ರಿ, ಪ್ಲಂಬರ್‍ಗಳಂತಹ ಸೇವೆಗಳ ಹುಡುಕಾಟಕ್ಕೆ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಯಾರನ್ನು ಕೇಳಬೇಕು? ಏನು ಮಾಡಬೇಕು ಎಂದು ತೋಚದೇ ಬಹಳ ಸಲ ಕೈ ಕೈ ಹಿಚುಕಿಕೊಂಡಿದ್ದಾರೆ. ಹೀಗೆ ಬಹಳ ಅತಂತ್ರದ ಸ್ಥಿತಿಯನ್ನು ಗಮನಿಸಿದ ಈ 17 ಜನ ಸ್ಕೂಲ್, ಕ್ಲಾಸ್‍ಮೇಟ್ಸ್ ಒಂದು ದಿನ ಸುಮ್ಮನೇ ಭೇಟಿಯಾಗಿದ್ದಾರೆ. ಅಲ್ಲಿ ಈ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ನಂತರ ತಾವೇ ಯಾಕೆ ಈ ಕೊರತೆಗಳನ್ನು ನೀಗಿಸಬಾರದು ಎಂದು ನಿರ್ಧರಿಸಿದಾರೆ. ಹೀಗೆ ಇಲ್ಲ ಇಲ್ಲ ಅಂದ ಜಾಗವನ್ನೆಲ್ಲಾ ತಾವೇ ತುಂಬಿಕೊಳ್ಳಲು ಮುಂದಾಗಿದ್ದಾರೆ. ಆಗಲೇ ಚಿಗುರೊಡೆದದ್ದು ಬ್ರೋ ಫಾರ್ ಯೂ.ಕಾಂ.

image


17 ಕಾಂಬಿನೇಷನ್ ಒಂದು ಆರ್ಗನೈಸೇಷನ್

ಈ ಹದಿನೇಳು ಬಾಲ್ಯ ಮಿತರ್ರು ಓದಿದದ್ದು ವಿಭಿನ್ನ ವಿಷಯ, ಮಾರ್ಕೆಟಿಂಗ್, ಎಮ್‍ಬಿಎ, ಸಾಫ್ಟ್​​ವೇರ್, ಪತ್ರಿಕೊದ್ಯಮ, ಸಿಎ, ಮೋದಿಯವರ ಮೇಕ್ ಇನ್ ಇಂಡಿಯಾ ಕನಸನ್ನು ನನಸು ಮಾಡಲು ಆನ್‍ಲೈನ್ ಉದ್ಯಮದ ಆಳ ಅಗಲ ಅರಿತವರು ಜೊತೆಗೆ ಗ್ರಾಹಕರ ಅಗತ್ಯತೆಗಳನ್ನು ಮನಗಂಡು ಬ್ರೋ ಫಾರ್ ಯೂಗೆ ಮುನ್ನುಡಿ ಬರೆದರು. ಅಕ್ಷಯ್ 4-5 ತಿಂಗಳಲ್ಲಿ ಸಾಫ್ಟ್​​​ವೇರ್ ಡೆವೆಲಪ್ ಮಾಡಿದ್ರು, ಪತ್ರಿಕೋದ್ಯಮ ಪದವಿಧರೆ ಮತ್ತು ಇಂಗ್ಲಿಷ್ ಅಧ್ಯಾಪಕಿ ಪೃಥ್ವಿ ಕಂಟೆಂಟ್ ಬರೆದರು, ಮಂಜುನಾಥ್ ಅಕೌಂಟ್ಸ್ ಹೊಣೆ ಹೊತ್ತರು, ಆಶ್ರಿತ್, ರಜತ್ ಮಾರ್ಕೆಟಿಂಗ್ ಜವಬ್ದಾರಿ ತೆಗೆದುಕೊಂಡರು. ಸರಿ ಇನ್ನು ಈ ತಂಡ ಒಂದಾಗಿ ಎಲ್ಲಾ ಏರಿಯಾಗಳಿಗೂ ಭೇಟಿ ನೀಡಿ ಅಲ್ಲಿನ ಲಾಂಡ್ರಿ, ಎಲೆಕ್ಟ್ರಿಷಿಯನ್ಸ್​​ ಜೊತೆ ಮಾತನಾಡಿದರು. ಈ ಹೊಸ ಬಗೆಯ ಉದ್ಯಮಕ್ಕೆ ಕೆಲವರು ಆಸಕ್ತಿ ತೋರಿದರು, ಮತ್ತೆ ಕೆಲವರು ನಿರಾಕರಿಸಿದರು. ಅಂತೂ ಇಂತೂ ಸತತ ಪ್ರಯತ್ನ ಓಡಾಟ ಮತ್ತು ಶ್ರಮದ ಮೂಲಕ ಬ್ರೋ ಫಾರ್‍ಯೂ. ಕಾಂ ಫೆಬ್ರವರಿಯಲ್ಲಿ ಅಧಿಕೃತವಾಗಿ ಲಾಂಚ್ ಆಯಿತು.

image


ಕ್ಲಿಕ್ ಆಗೇ ಬಿಡ್ತು ಹೊಸ ಐಡಿಯಾ!

ಆರಂಭದಲ್ಲಿ 4-5 ಆರ್ಡರ್ಸ್ ಅಷ್ಟೇ ಬರುತ್ತಿತ್ತು. ಆ ಸಂತಸ ಹೇಳ ತೀರದು, ಎಲ್ಲರೂ ಖುಷಿ ಪಡುತ್ತಿದ್ದೆವು, ಈಗಂತೂ ದಿನಕ್ಕೆ 80 ಆರ್ಡರ್ಸ್ ಬರ್ತಿವೆ. ನಿಜಕ್ಕೂ ಖುಷಿಯಾಗ್ತಿದೆ ಅಂತಾರೆ" ಕಂಟೆಂಟ್ ಬರಹಗಾರ್ತಿ ಪೃಥ್ವಿ ಭಾರ್ಗವ್. "ಇದಕ್ಕೆಲ್ಲಾ ಮೂಲ ಕಾರಣ ಗ್ರಾಹಕರ ತೃಪ್ತಿ. ಕ್ವಾಲಿಟಿಯಲ್ಲಿ ನೋ ಕಾಂಪ್ರಮೈಸ್, ಗ್ರಾಹಕರಿಗೆ ತೃಪ್ತಿ ಇಲ್ಲವೆಂದರೇ ವೆಂಡರ್ಸ್ ಜೊತೆ ನಮ್ಮ ಟೀಂ ಚರ್ಚೆ ಮಾಡಿ ಸಮಸ್ಯೆಗಳನ್ನು ಬಗೆ ಹರಿಸುತ್ತೆ" ಅಂತಾರೆ ಬ್ರೋ ಫಾರ್ ಯೂ.ಕಾಂ ಸದಸ್ಯ ಶಿಶಿರ್.

"ಬೆಂಗಳೂರಿನಲ್ಲೆ ಪ್ರಾರಂಭವಾದ ಫ್ಲಿಪ್ ಕಾರ್ಟ್ ಇಂದು ಭಾರತದಾದ್ಯಂತ ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ಹಾಗೇಯೇ ಬ್ರೋ ಫಾರ್ ಯೂ.ಕಾಂ ಅನ್ನು ಭಾರತದಾದ್ಯಂತ ಕಾಣುವಾಸೆ "ಅಂತಾರೆ ಈ ಯುವ ಎಂಟರ್‍ಪ್ರೈನರ್ಸ್. ಸದ್ಯ 17 ಸರ್ವಿಸ್‍ಗಳನ್ನು ನೀಡುತ್ತಿದ್ದು, 700 ಜನ ಮಾರಟಗಾರರು ಈ ಪೋರ್ಟಲ್‍ನಲ್ಲಿದ್ದಾರೆ. ಇದನ್ನು ಇನ್ನು ಹೆಚ್ಚುಗೊಳಿಸೋ ಕನಸಲ್ಲಿದಾರೆ. ಲಾಂಡ್ರಿ, ಫ್ಲವರ್, ಕಂಪ್ಯೂಟರ್, ಕಾರ್‍ವಾಶ್ ಸರ್ವಿಸ್‍ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸದ್ಯ ಈ ತಂಡ ಹೈದ್ರಬಾದ್‍ಗೆ ತೆರಳಿ ಅಲ್ಲಿ ತನ್ನ ಸೇವೆ ಆರಂಭಿಸಲು ಎಲ್ಲ ಸಿದ್ದತೆ ನಡೆಸಿಕೊಂಡಿದೆ. ಆ ಮೂಲಕ ಎಲ್ಲಾ ಮೆಟ್ರೋ ಸಿಟಿಗಳನ್ನು ತಲುಪುವ ಯೋಜನೆ ಇದೆ.

ಮಾರ್ಕೆಟ್ ಸ್ಟ್ರಾಟರ್ಜಿ

"ಸದ್ಯ ಪ್ರಾಡಕ್ಟ್​​​ಗಳಿಗೆ ಹೆಚ್ಚಿನ ಕಾಂಪಿಟೇಷನ್ ಇದೆ. ಸರ್ವಿಸ್‍ಗಳಲ್ಲಿ ಕಾಂಪಿಟೇಷನ್ ಅಷ್ಟಾಗಿ ಇಲ್ಲ. ನಾವೇ ಕರ್ನಾಟಕಕ್ಕೆ ಮೊದಲಿಗರು ಆದ ಕಾರಣ ಸದ್ಯಕ್ಕೆ ಸಮಸ್ಯೆ ಇಲ್ಲ. ಇನ್ನು ನಮ್ಮ ನಂತರ ಕೆಲವು ಪೋರ್ಟಲ್‍ಗಳು ಹುಟ್ಟಿಕೊಂಡಿದ್ದು, ನಮ್ಮಲ್ಲಿ ಹೆಚ್ಚಿನ ಸೇವಾ ಸೌಲಭ್ಯಗಳಿವೆ. ಎಲ್ಲಕ್ಕೂ ಮಿಗಿಲಾಗಿ ನಮ್ಮ ವೆಬ್‍ಸೈಟ್ ಎಲ್ಲರನ್ನು ಸೆಳೆಯುತ್ತಿದೆ. ವೆಬ್‍ಸೈಟ್ ತೆರಯುತ್ತಿದ್ದಂತೆ, ಏರಿಯಾ ಹೆಸರು ಟೈಪ್ ಮಾಡಿದರೆ, ಕಿಲೋಮೀಟರ್​​​ ಜೊತೆಗೆ ನಮ್ಮ ಸುತ್ತಮುತ್ತಲಿನ ಎಲ್ಲಾ ಶಾಪ್‍ಗಳ ಮಾಹಿತಿ ಸಿಕ್ಕಿಬಿಡುತ್ತದೆ. ಇನ್ನು 24 ಗಂಟೆಗಳ ಕಾಲವೂ ಚಾಟಿಂಗ್ ವ್ಯವಸ್ಥೆ ಇದ್ದು, ನಿಮ್ಮ ಸಮಸ್ಯೆ ತಿಳಿಸಿದರೆ ಕೂಡಲೇ ಗೈಡ್ ಮಾಡುತ್ತಾರೆ. ಬೆಲೆಯೂ ಅಷ್ಟೆ ರೀಸನಬಲ್ ಆಗಿದೆ." ಅಂತಾರೆ ಆಶ್ರಿತ್ ಮತ್ತು ರಜತ್.

image


ಸಾಮಾಜಿಕ ಕಾಳಜಿ

ಮಂಗಳ ಮುಖಿಯರನ್ನು ಮುಖ್ಯವಾಹಿನಿಗೆ ತರಲು ಮತ್ತು ಸ್ವಾವಲಂಬಿಗಳನ್ನಾಗಿ ಮಾಡಲು ಬ್ರೋಫಾರ್‍ಯೂ ಪ್ರಮೋಷನ್‍ನಲ್ಲಿ ಕೆಲಸ ನೀಡಿದ್ದಾರೆ. "ಲೈಫ್‍ನಲ್ಲಿ ಛಲವಿದ್ರೆ ಗೆಲ್ತಿವಿ, ಸೋಲಿನ ಪ್ರಶ್ನೆ ಆಮೇಲೆ ಇರ್ಲಿ, ಕೆಲಸ ಮೊದಲಿರಲಿ. ಮುಖ್ಯವಾಗಿ ಮಾರ್ಕೆಟಿಂಗ್ ವಿಶ್ಲೆಷಣೆ, ಗ್ರಾಹಕರ ಬೇಡಿಕೆ ಮತ್ತು ಅದಕ್ಕೆ ಸೂಕ್ತ ಸ್ಪಂದನೆ ಕೊಟ್ರೆ ಹಮ್ ಹೊಂಗೆ ಕಾಂ ಯಾಬ್ " ಅನ್ನೋದು ಬ್ರೋ ಟಿಂನ ಸ್ಟ್ರಾಂಗ್ ಥೀಂ. ಯೆಸ್, ಲೆಟ್ಸ್ ಥಮ್ಸ್ ಅಪ್, ಅಂಡ್ ಸೇ ಬ್ರೋಸ್ ವಿ ಆರ್ ವಿಥ್‍ಯೂ ಯಾಸ್ ಎ ಕಸ್ಟಮರ್ಸ್..!