Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ನಮ್ಮ ಬೆಂಗಳೂರಿನಲ್ಲಿ ಆರೋಗ್ಯದ ಬಗ್ಗೆ ಯಾಕಿಷ್ಟು ಕಾಳಜಿ ಅನ್ನೋದಿಕೆ ಇಲ್ಲಿದೆ ಕಾರಣಗಳು

ಟೀಮ್​ ವೈ.ಎಸ್​. ಕನ್ನಡ

ನಮ್ಮ ಬೆಂಗಳೂರಿನಲ್ಲಿ ಆರೋಗ್ಯದ ಬಗ್ಗೆ ಯಾಕಿಷ್ಟು ಕಾಳಜಿ ಅನ್ನೋದಿಕೆ ಇಲ್ಲಿದೆ ಕಾರಣಗಳು

Thursday April 27, 2017 , 3 min Read

ಭಾರತದಲ್ಲಿ ಆನ್​ಲೈನ್ ಯುಗ ಆರಂಭವಾಗಿ ವರ್ಷಗಳೇ ಕಳೆದಿವೆ. ಗ್ರಾಹಕರ ಆಯ್ಕೆಗಳೇನು ಅನ್ನುವುದು ಆನ್​ಲೈನ್ ಮೂಲಕವೇ ಎಲ್ಲವೂ ಸರಿಯಾಗಿ ಅರ್ಥವಾಗುತ್ತದೆ. ಗ್ರಾಹಕರ ಮನಸ್ಥಿತಿಗಳನ್ನು ಅರ್ಥಮಾಡಿಕೊಂಡ ಇ-ಕಾಮರ್ಸ್ ಪೋರ್ಟಲ್​ಗಳು ಇವತ್ತು ಗ್ರಾಹಕರ ಫೆವರೀಟ್ ಆಗಿ ಬಿಟ್ಟಿವೆ. ಭಾರತದ ಆನ್​ಲೈನ್ ದೈತ್ಯ ಫ್ಲಿಪ್​ಕಾರ್ಟ್ ಇತ್ತೀಚೆಗೆ ಭಾರತದ ಶಾಪಿಂಗ್ ಟ್ರೆಂಡ್​ಗಳ ಬಗ್ಗೆ ಅಧ್ಯಯನ ನಡೆಸಿತ್ತು. ಫ್ಲಿಪ್​ಕಾರ್ಟ್ ಸರ್ವೇ ಆಧರಿಸಿ ನೋಡಿದ್ರೆ ಬೆಂಗಳೂರಿನ ಜನ ಅತೀ ಹೆಚ್ಚಾಗಿ ಆರೋಗ್ಯದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ದೆಹಲಿಯ ಈ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನ ಪಡೆದುಕೊಳ್ಳುತ್ತದೆ. ಏರ್ ಪ್ಯೂರಿಫೈಯರ್ ಮತ್ತು ಫಿಟ್ನೆಸ್ ಬ್ರಾಂಡ್​ಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಆಧರಿಸಿ ಫ್ಲಿಪ್ ಕಾರ್ಟ್ ಈ ಅಂಶವನ್ನು ಹೊರಹಾಕಿದೆ.

image


ಆದ್ರೆ ಪ್ರಶ್ನೆ ಇದಲ್ಲ. ನಗರ ಪ್ರದೇಶಗಳ ಜನರಿಗೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಆರೋಗ್ಯದ ಕಾಳಜಿ ಬಗ್ಗೆ ಹೇಗೆ ಮನವರಿಕೆ ಮಾಡಿಕೊಡುತ್ತಿದೆ ಅನ್ನುವುದು..! ಬೆಂಗಳೂರಿನ ಅಧ್ಯಯನದ ಆಧಾರದಲ್ಲಿ ಈ ಕೆಳಗಿನ ಅಂಶಗಳು ಹೆಚ್ಚಿನ ಮಹತ್ವ ಪಡೆಯುತ್ತಿವೆ.

ಬೆಂಗಳೂರು ದೇಶದ ಮೊತ್ತ ಮೊದಲ ಸಾವಯವ ಕೃಷಿ ಧಾನ್ಯಗಳ ಮೇಳವನ್ನು ಆಯೋಜಿಸಿದೆ. ಈ ಮೂಲಕ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ಸಾವಯವ ಸಿರಿಧಾನ್ಯಗಳಲ್ಲಿ ಅಧಿಕ ಪೋಷಕಾಂಶಗಳು ಒಳಗೊಂಡಿರುತ್ತದೆ. ಕಡಿಮೆ ಪ್ರಮಾಣದ ಗ್ಲೇಮಿಕ್ ಇಂಡೆಕ್ಸ್, ಹೆಚ್ಚು ಫೈಬರ್ ಅಂಶಗಳು ಇರುವುದರಿಂದ ಇವರು ಆರೋಗ್ಯಕ್ಕೆ ಪೂರಕವಾಗಿದೆ. ಸ್ಥೂಲಕಾಯ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೈಪರ್ ಟೆನ್ಷನ್ ಮತ್ತು ಅನಿಮಿಯಾಗಳ ವಿರುದ್ಧ ಈ ಮಿಲ್ಲೆಟ್ಸ್ ಹೋರಾಡುತ್ತವೆ. ಗ್ರಾಹಕರಿಗೆ ಮತ್ತು ಕೃಷಿಕರಿಗೆ ಸಾವಯವ ಕೃಷಿ ಮತ್ತು ಅದರ ಉಪಯೋಗದ ಬಗ್ಗೆ ತಿಳಿಸುವ ಉದ್ದೇಶ ಹೊಂದಲಾಗಿದೆ. ಸಾವಯವ ಕೃಷಿ ಧಾನ್ಯಗಳ ಬೇಡಿಕೆ ಮತ್ತು ಪೂರೈಕೆಗಳ ಕುರಿತು ಕೂಡ ಯೋಜನೆ ರೂಪಿಸಲಾಗಿದೆ. ಇದು ಕೃಷಿಕರನ್ನು ಸಾವಯವ ಕೃಷಿಯತ್ತ ಗಮನಹರಿಸುವಂತೆ ಮಾಡಲಿದೆ.

- ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಸುಮಾರು 160ಕ್ಕೂ ಅಧಿಕ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಕೇವಲ ಸಾವಯವ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. 400ಕ್ಕೂ ಅಧಿಕ ಮಳಿಗೆಗಳಲ್ಲಿ ಸಾವಯವ ಆಹಾರ ವಸ್ತುಗಳಿಗೆ ವಿಶೇಷ ಸೆಕ್ಷನ್​ಗಳನ್ನು ಮಾಡಲಾಗಿದೆ. ಬಹುತೇಕ ಮಾರಾಟ ಕೇಂದ್ರಗಳು ಕೃಷಿಕರ ಜೊತೆ ನೇರ ಸಂಪರ್ಕವನ್ನು ಇಟ್ಟುಕೊಂಡಿದೆ. ಈ ಮೂಲಕ ಸಾವಯವ ವಸ್ತುಗಳು ಫ್ರೆಶ್ ಇರುವಂತೆ ನೋಡಿಕೊಳ್ಳಲಾಗುತ್ತದೆ. ಕಡಿಮೆ ಬೆಲೆ ಹಾಗೂ ಕಡಿಮೆ ತ್ಯಾಜ್ಯ ಸಾವಯವ ಧಾನ್ಯಗಳ ವಿಶೇಷವಾಗಿದೆ.

ಇದನ್ನು ಓದಿ: ಯಾರಿಗೂ ಬಿಟ್ಟುಕೊಡಬೇಡಿ ನಿಮ್ಮಗುಟ್ಟು- ಸ್ಯಾಲರಿ ಸ್ಲಿಪ್​ನಲ್ಲಿ ಅಡಗಿದೆ ಭವಿಷ್ಯದ ಕನಸು

- ಇತ್ತೀಚಿನ ದಿನಗಳಲ್ಲಿ ಸಾವಯವ ಆಹಾರ ಪದ್ಧತಿಯನ್ನೇ ಅಳವಡಿಸಿಕೊಂಡಿರುವ ಹಲವು ರೆಸ್ಟೋರೆಂಟ್​ಗಳು, ಕೆಫೆಗಳು ಆರಂಭವಾಗಿದೆ. ಇದಕ್ಕೊಂದು ಉದಾಹರಣೆ ಹೆಚ್. ಆರ್. ಜಯರಾಮ್ ಆರಂಭಿಸಿರುವ "ದಿ ಗ್ರೀನ್ ಪಾಥ್ ಎಕೋ" ರೆಸ್ಟೋರೆಂಟ್. ಬೆಂಗಳೂರಿನಲ್ಲಿರುವ ಗ್ರೀನ್ ಪಾತ್ ಮಳಿಗೆ ಚಿಕ್ಕ ಚಿಕ್ಕ ಸಾವಯವ ಕೃಷಿಕರ ಮತ್ತು ಗ್ರಾಹಕರ ನಡುವಿನ ಸೇತುವೆಯಾಗಿದೆ. ಕೃಷಿಕರು ಬೆಳೆದ ವಸ್ತುಗಳು ಗ್ರಾಹಕರಿಗೆ ಸಿಗುವಂತೆ ಮಾಡುತ್ತಿದೆ.

- ಬೆಂಗಳೂರಿಗೆ ಫಿಟ್ನೆಸ್ ರಾಜಧಾನಿ ಅನ್ನುವ ಖ್ಯಾತಿ ಕೂಡ ಇದೆ. ಬೆಂಗಳೂರಿನಲ್ಲಿ ವರ್ಷವೊಂದಕ್ಕೆ ಸರಿಸುಮಾರು 100ಕ್ಕೂ ಅಧಿಕ ಮ್ಯಾರಾಥಾನ್​ಗಳು ನಡೆಯುತ್ತಿವೆ. ಸಿಲಿಕಾನ್ ಸಿಟಿ ಭಾರತದಲ್ಲೇ ಅತೀ ಹೆಚ್ಚು ಮ್ಯಾರಾಥಾನ್​ಗಳಿಗೆ ಆತಿಥ್ಯ ನೀಡುತ್ತಿದೆ. ಮಿಡ್​ನೈಟ್ ಮ್ಯಾರಾಥಾನ್​ ಏಷ್ಯಾದಲ್ಲೇ ಮೊದಲ ಬಾರಿಗೆ ನಡೆದಿದ್ದು ಬೆಂಗಳೂರಿನಲ್ಲೇ ಅನ್ನುವುದು ಮತ್ತೊಂದು ವಿಶೇಷ. ವಿದೇಶಿ ಅಥ್ಲೀಟ್​ಗಳನ್ನು ಕೂಡ ಆಕರ್ಷಿಸುವ ಮಿಡ್​ನೈಟ್ ಮ್ಯಾರಾಥಾನ್​ನಲ್ಲಿ ಸುಮಾರು 10,000ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುತ್ತಾರೆ.

- ಸಿಲಿಕಾನ್ ಸಿಟಿ ರಾಗಿಯಿಂದ ಬಿಯರ್ ತಯಾರಿಸಿದ ಮೊದಲ ರಾಜ್ಯ ಅನ್ನುವ ಖ್ಯಾತಿ ಪಡೆದುಕೊಂಡಿದೆ. ಈ ರಾಗಿಯನ್ನು ಕೂಡ ಸಾವಯವ ಕೃಷಿ ಮೂಲಕವೇ ಬೆಳೆಯಲಾಗುತ್ತದೆ ಅನ್ನುವುದು ಮತ್ತೊಂದು ವಿಶೇಷ. ಸಾವಯವ ಧಾನ್ಯಗಳ ಮೂಲಕ ತಯಾರಿಸಿದ ಬಿಯರ್ ಅನ್ನು ಮಾರಾಟ ಮಾಡುವ ಪದ್ಧತಿಯನ್ನು ಹಲವು ಪಬ್​ಗಳು ಆರಂಭಿಸಿವೆ.

- ಐಟಿ ಕ್ಯಾಪಿಟಲ್ ನಲ್ಲಿ ಉದ್ಯೋಗಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇದೆ. ಕಾರ್ಪೋರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಯೋಗದ ಮಹತ್ವವನ್ನು ಸಾರುತ್ತಿವೆ. ಯುವ ಜನರಿಗೆ ಯೋಗದ ಬಗ್ಗೆ ಹೆಚ್ಚು ಅರಿವು ಮೂಡಿದೆ.

- ಕೊನೆಯದಾಗಿ ಬೆಂಗಳೂರು ಹೆಲ್ತ್ ಅಂಡ್ ಫಿಟ್ನೆಸ್ ವಲಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾರ್ಟ್ ಅಪ್ ಸಂಸ್ಥೆಗಳನ್ನು ಹೊಂದಿದೆ. ಬೆಂಗಳೂರಿನ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರು ಎಲ್ಲಾ ರಾಜ್ಯದ ಜನರಿಗೂ ಮಾದರಿ ಆಗುತ್ತಿದೆ. ಆರೋಗ್ಯದಿಂದ ಹಿಡಿದು, ಅಭಿವೃದ್ಧಿ ಮಂತ್ರದ ತನಕ ಎಲ್ಲದರಲ್ಲೂ ಬೆಂಗಳೂರಿಗೆ ಮೊದಲ ಸ್ಥಾನ.

ಇದನ್ನು ಓದಿ:

1. ಮರೆತುಹೋಗಿದ್ದ ಆರೋಗ್ಯಕರ ಆಹಾರ : ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಕರ್ನಾಟಕ ಸರ್ಕಾರ

2. ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!

3. ಬೆಂಗಳೂರಲ್ಲಿ ಸಾವಯವ ಮತ್ತು ರಾಷ್ಟ್ರೀಯ ಸಿರಿಧಾನ್ಯ ಮೇಳ…