Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಪ್ಲಾಸ್ಟಿಕ್​ ಮರುಬಳಕೆಗೆ ಮತ್ತೊಂದು ಪ್ರಯತ್ನ- ಡಿಸೇಲ್​ ತಯಾರಿಗೆ ಅನ್ವೇಷಣೆ

ಟೀಮ್​ ವೈ.ಎಸ್​. ಕನ್ನಡ

ಪ್ಲಾಸ್ಟಿಕ್​ ಮರುಬಳಕೆಗೆ ಮತ್ತೊಂದು ಪ್ರಯತ್ನ- ಡಿಸೇಲ್​ ತಯಾರಿಗೆ ಅನ್ವೇಷಣೆ

Friday June 02, 2017 , 3 min Read

ಪ್ಲಾಸ್ಟಿಕ್​​ ಪರಿಸರಕ್ಕೆ ಎಷ್ಟು ಮಾರಕ ಅನ್ನುವುದು ಎಲ್ಲರಿಗೂ ಗೊತ್ತಾಗಿದೆ. ಪ್ಲಾಸ್ಟಿಕ್​​ ದೂರ ಮಾಡಿದ್ರೆ ಎಷ್ಟು ಕಷ್ಟ ಅನ್ನುವ ಅರಿವು ಕೂಡ ಇದೆ. ಇದರ ಜೊತೆಗೆ ಪ್ಲಾಸ್ಟಿಕ್​ ಬಳಕಗೆ ಕಡಿವಾಣ ಹಾಕುವುದು ಕಷ್ಟದ ಮಾತು ಕೂಡ ಹೌದು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ಲಾಸ್ಟಿಕ್​ ನಿಷೇಧ ಮಾಡಿ, ವರ್ಷ ಕಳೆದ್ರೂ ಅದಿನ್ನೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಟ್ಟೆ ಬ್ಯಾಗ್​, ಮರು ಬಳಕೆಯ ಬ್ಯಾಗ್​ ಬಗ್ಗೆ ಜಾಗೃತಿ ಮೂಡಿಸಿದರೂ, ಅದರ ಪ್ರಯೋಜನ ಅಂದುಕೊಂಡ ಮಟ್ಟದಲ್ಲಿಲ್ಲ. ಈ ಮಧ್ಯೆ ಪ್ಲಾಸ್ಟಿಕ್​ನಿಂದ ಮರುಬಳಕೆ ಹೇಗೆ ಮಾಡಬಹುದು ಅನ್ನುವ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಕೆಲವು ಎನ್​ಜಿಒಗಳು ಮತ್ತು ಪರಿಸರವಾದಿಗಳು ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್​ನಿಂದ ಎಷ್ಟು ಹಾನಿಯಾಗುತ್ತಿದೆ ಅನ್ನುವುದನ್ನು ಜನರಿಗೆ ತಿಳಿಸಿಕೊಡುತ್ತಿದ್ದಾರೆ. ಈ ನಡುವೆ ವಿಜ್ಞಾನಿಗಳು, ಪ್ಲಾಸ್ಟಿಕ್​ನಿಂದ ಡಿಸೇಲ್​ ತಯಾರಿ ಮಾಡಬಹುದು ಅನ್ನುವ ವಿಚಾರವನ್ನು ಕಂಡುಹಿಡಿದ್ದಾರೆ. 

image


ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕ ಅನ್ನೋದು ಸುಳ್ಳಲ್ಲ. ಹಾಗಾಗಿಯೇ ಅದೆಷ್ಟೋ ಕಡೆಗಳಲ್ಲಿ ಪ್ಲಾಸ್ಟಿಕ್‍ಗೆ ನಿಷೇಧ ಹೇರಲಾಗಿದೆ. ಆದ್ರೆ ಪ್ಲಾಸ್ಟಿಕ್‍ನಿಂದ ಸಂಪೂರ್ಣವಾಗಿ ದೂರವಿರೋದು ಅಸಾಧ್ಯದ ಮಾತು. ನಮ್ಮ ನಿತ್ಯ ಬಳಕೆಯಲ್ಲಿ ಪ್ಲಾಸ್ಟಿಕ್ ಬೇಕೇ ಬೇಕು ಎಂಬಂತಾಗಿದೆ. ಹಾಗಿದ್ರೆ ಬಳಸಿ ಬಿಸಾಡಿದ ಪ್ಲಾಸ್ಟಿಕ್‍ನ ಮರುಬಳಕೆ ಹೇಗೆ? ಪರಿಸರಕ್ಕೆ ಪೂರಕವಾಗಿ ಅದನ್ನು ಹೇಗೆ ಪರಿವರ್ತಿಸುವುದು ಅನ್ನೋ ತಲೆನೋವು ಎಲ್ಲರನ್ನೂ ಕಾಡ್ತಾ ಇತ್ತು. ಆದ್ರೆ ಇನ್ನು ಮುಂದೆ ಪ್ಲಾಸ್ಟಿಕ್ ಬಹುಪಯೋಗಿ ಎನಿಸಿಕೊಳ್ಳಲಿದೆ. ಎಲ್ಲ ರಾಷ್ಟ್ರಗಳನ್ನೂ ಕಾಡುತ್ತಿರುವ ಇಂಧನ ಸಮಸ್ಯೆಗೆ ಪ್ಲಾಸ್ಟಿಕ್ ಪರಿಹಾರ ಒದಗಿಸಲಿದೆ. ಹೌದು ಪ್ಲಾಸ್ಟಿಕ್‍ನಿಂದ ಇಂಧನ ತಯಾರಿಸಬಹುದು ಅನ್ನೋದನ್ನು ವಿಜ್ಞಾನಿಗಳು ಸಂಶೋಧನೆ ಮೂಲಕ ದೃಢಪಡಿಸಿದ್ದಾರೆ.

ಇದನ್ನು ಓದಿ: ಕೇರಳ ಈಗ 100% ವಿದ್ಯುತ್ ಸಂಪರ್ಕ ಹೊಂದಿದ ರಾಜ್ಯ..!

ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನೆಯ ಮೂಲಕ ಪ್ಲಾಸ್ಟಿಕ್ ಅನ್ನು ಬಳಕೆಗೆ ಯೋಗ್ಯ ಇಂಧನವನ್ನಾಗಿ ಪರಿವರ್ತಿಸಬಹುದು ಅಂತಾ ವಿಜ್ಞಾನಿಗಳು ಹೇಳಿದ್ದಾರೆ. ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಜಂಟಿಯಾಗಿ ನಡೆಸಿದ ಸಂಶೋಧನೆಯ ಫಲ ಇದು. "ಸೈನ್ಸ್ ಅಡ್ವಾನ್ಸಸ್" ಎಂಬ ಪತ್ರಿಕೆಯಲ್ಲಿ ಈ ಕುರಿತ ಲೇಖನವೂ ಪ್ರಕಟವಾಗಿದೆ. ಇದುವರೆಗೂ ಪ್ಲಾಸ್ಟಿಕ್ ಅನ್ನು ಜೈವಿಕ ಅಥವಾ ರಾಸಾಯನಿಕವಾಗಿ ಪರಿವರ್ತಿಸಬಲ್ಲ ಯಾವುದೇ ತಂತ್ರಜ್ಞಾನವನ್ನು ಜಗತ್ತಿನ ಯಾವ ರಾಷ್ಟ್ರವೂ ಅಭಿವೃದ್ಧಿಪಡಿಸಿರಲಿಲ್ಲ. ಹಾಗಾಗಿ ಈ ಸಂಶೋಧನೆ ಪರಿಣಾಮಕಾರಿ ಬದಲಾವಣೆಯ ಮೂಲವಾಗುವುದರಲ್ಲಿ ಅನುಮಾನವಿಲ್ಲ.

"ಸೈನ್ಸ್ ಅಡ್ವಾನ್ಸಸ್‍"ನ ಸೈ-ಟೆಕ್ ಟುಡೇ ವರದಿಯ ಪ್ರಕಾರ ಅತ್ಯಂತ ಕಡಿಮೆ ವಿದ್ಯುತ್ ಬಳಸಿ ಈ ಪ್ರಕ್ರಿಯೆ ನಡೆಸಲಾಗುತ್ತದೆ, ಅಂತಿಮವಾಗಿ ಪರಿಶುದ್ಧವಾದ ಇಂಧನ ದೊರೆಯುವುದು ವಿಶೇಷ. ನಮ್ಮ ಪ್ಲಾಸ್ಟಿಕ್ ಕಸದ ಸದುಪಯೋಗಕ್ಕೆ ಇದೊಂದು ಅತ್ಯುತ್ತಮ ಮಾರ್ಗ ಅನ್ನೋ ವಿಶ್ವಾಸ ಅವರದ್ದು. ಇದಕ್ಕೆ ಅತಿ ಹೆಚ್ಚು ಬಿಸಿ ಅಥವಾ ವಿದ್ಯುತ್ ಅಗತ್ಯವಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಮುರಿಯಲು ಸಾಧ್ಯವಾಗದ ಕೇವಲ ಪಾಲಿಮರ್ ಬಳಕೆಗೆ ಉಪಯೋಗಿಸುತ್ತಿದ್ದ ಅನುಪಯುಕ್ತ ಪ್ಲಾಸ್ಟಿಕ್‍ಗಳಿಂದ ಇಂಧನ ತಯಾರಿಸಬಹುದು.

ಶಾಪಿಂಗ್ ಬ್ಯಾಗ್, ಪ್ಲಾಸ್ಟಿಕ್ ಬಾಟಲ್‍ಗಳು, ಕವರ್‍ಗಳಂತಹ ಫಾಲಿಥಿನ್ ಆಧಾರದ ಪ್ಲಾಸ್ಟಿಕ್‍ಗಳ ಮರುಬಳಕೆಗೆ ಹೈಡೋಕಾರ್ಬನ್‍ಗಳ ಜೊತೆಗೆ ಎರಡು ಬಗೆಯ ವೇಗವರ್ಧಕಗಳನ್ನು ವಿಜ್ಞಾನಿಗಳು ಬಳಸಿಕೊಂಡಿದ್ದಾರೆ. ಮೊದಲನೆಯ ವೇಗವರ್ಧಕ ಒಂದು ಇರಿಡಿಯಮ್ ಆಧಾರಿತ ಸಂಯುಕ್ತ, ಪ್ಲಾಸ್ಟಿಕ್‍ನಲ್ಲಿರುವ ಇಂಗಾಲದ ಅಣುಗಳಿಗೆ ಜೋಡಿಸಲಾದ ಹೈಡೋಜನ್ ಕಡೆಗೆ ಆಕರ್ಷಿತವಾಗುತ್ತದೆ. ಆ ಎರಡು ಕಾರ್ಬನ್ ಆಟಮ್‍ಗಳು ತಮ್ಮ ಸಹಚರರೊಂದಿಗೆ ಪರಸ್ಪರ ಎರಡು ಬಂಧಕಗಳನ್ನು ಸೃಷ್ಟಿಸುತ್ತವೆ. ಆ ದ್ವಿಬಂಧಗಳು ಏಕಬಂಧಕ್ಕಿಂತ ಎರಡನೇ ವೇಗವರ್ಧಕಕ್ಕೆ ಹೆಚ್ಚು ಒಳಗಾಗುತ್ತವೆ. ಅದು ದೀರ್ಘ ಸರಣಿಯನ್ನು ಮುರಿಯಲು ದುರ್ಬಲ ಸ್ಪಾಟ್ ಅನ್ನು ಬಳಸಿಕೊಳ್ಳುತ್ತದೆ. ನಂತರ ಮೊದಲ ವೇಗವರ್ಧಕ ಪಡೆದುಕೊಂಡ ಜಲಜನಕದೊಂದಿಗೆ ಕೂಡಿಕೊಳ್ಳುತ್ತದೆ. ಉದ್ದವಾದ ಪಾಲಿಮರ್ ಮಧ್ಯಮ ಗಾತ್ರದ ಆಲ್ಕೇನ್ಸ್​​ಗಳಾಗಿ ಸಂಪೂರ್ಣ ಚೂರಾಗುವವರೆಗೆ ಈ ಪ್ರಕ್ರಿಯೆ ನಡೆಯುತ್ತದೆ. ಅವುಗಳ ಅಣುಗಳು ಡೀಸೆಲ್ ಇಂಧನವನ್ನಾಗಿ ಪರಿವರ್ತಿಸಲು ಸಾಕಷ್ಟು ಇಂಗಾಲವನ್ನು ಹಿಡಿದಿಟ್ಟುಕೊಳ್ಳುತ್ತವೆ. ಕ್ರಿಯೆಯ ಸಮಯ, ಆಲ್ಕೇನ್ಸ್​​ಗಳನ್ನು ಇಂಧನವನ್ನಾಗಿ ಅಥವಾ ಮೇಣವನ್ನಾಗಿ ಪರಿವರ್ತಿಸುವಲ್ಲಿ ವಿಜ್ಞಾನಿಗಳು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಅನ್ನೋದೇ ಸದ್ಯಕ್ಕಿರುವ ಕುತೂಹಲ. 

"ವೇಗವರ್ಧಕಗಳನ್ನು ಇಷ್ಟು ಉತ್ತಮವಾಗಿ, ಸಮಾಜಕ್ಕೆ ಅನುಕೂಲಕರವಾದ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಅಚ್ಚರಿ ಹಾಗೂ ಸಂತೋಷದ ವಿಚಾರ'' 

ಒಟ್ಟಿನಲ್ಲಿ ವಿಜ್ಞಾನಿಗಳ ಈ ಹೊಸ ಸಂಶೋಧನೆ ಎಲ್ಲ ರಾಷ್ಟ್ರಗಳಲ್ಲೂ ಆಶಾಕಿರಣ ಮೂಡಿಸಿದೆ. ಪ್ಲಾಸ್ಟಿಕ್ ಸದುಪಯೋಗಕ್ಕೆ ಅವಕಾಶ ಸಿಕ್ಕಂತಾಗಿದೆ. ಈ ಪ್ರಯೋಗ ಸಂಪೂರ್ಣ ಯಶಸ್ವಿಯಾದಲ್ಲಿ ಇಂಧನ ಸಮಸ್ಯೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. 

ಇದನ್ನು ಓದಿ:

1. 9ನೇ ತರಗತಿಗೆ ಶಾಲೆ ಬಿಟ್ಟ ಪೋರ : 13 ವರ್ಷಕ್ಕೆ ಉದ್ಯಮಿಯಾದ ಧೀರ 

2. ಸ್ಮಾರ್ಟ್​ಶಿಫ್ಟ್​​ನಲ್ಲಿದೆ ಭವಿಷ್ಯದ ಕನಸು- ಉದ್ಯಮಿ ಮತ್ತು ಟ್ರಕ್ ಮಾಲೀಕರ ನಡುವಿನ ಸಂಬಂಧಕ್ಕೆ ಹೊಚ ಟಚ್..!

3. ಸ್ಮಾರ್ಟ್​ಶಿಫ್ಟ್​​ನಲ್ಲಿದೆ ಭವಿಷ್ಯದ ಕನಸು- ಉದ್ಯಮಿ ಮತ್ತು ಟ್ರಕ್ ಮಾಲೀಕರ ನಡುವಿನ ಸಂಬಂಧಕ್ಕೆ ಹೊಚ ಟಚ್..!