Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಉತ್ತಮ ಸಂಬಳವಿರುವ ಐಟಿ ಕೆಲಸವನ್ನು ತ್ಯಜಿಸಿ ಕೃಷಿಯತ್ತ ತಿರುಗಿದ ವ್ಯಕ್ತಿ ಈಗ 20 ಕೋಟಿ ರೂ ಒಡೆಯ

ಕೇವಲ ಐದು ವರ್ಷಗಳಲ್ಲಿ 18 ಯೋಜನೆಗಳನ್ನು ಪಡೆದು 30 ಎಕರೆ ಪ್ರದೇಶದಲ್ಲಿ ಶುರುಮಾಡಿ 800 ಎಕರೆ ಭೂಮಿಯಷ್ಟು ಹರಡಿ ಹೊಸಚಿಗುರು ಕೃಷಿ ಪ್ರಾರಂಭಿಸಿದ ಕಥೆ ಇಲ್ಲಿದೆ.

ಉತ್ತಮ ಸಂಬಳವಿರುವ ಐಟಿ ಕೆಲಸವನ್ನು ತ್ಯಜಿಸಿ ಕೃಷಿಯತ್ತ ತಿರುಗಿದ ವ್ಯಕ್ತಿ ಈಗ 20 ಕೋಟಿ ರೂ ಒಡೆಯ

Wednesday January 22, 2020 , 5 min Read

ಹೊಸಚಿಗುರು ಸಂಸ್ಥೆಯ ಸಹಸಂಸ್ಥಾಪಕ ಅಶೋಕ್ ಜೆ


ಹತ್ತು ವರ್ಷಕ್ಕೂ ಹೆಚ್ಚು ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅಶೋಕ್ ಜೆ ಮತ್ತು ಶ್ರೀರಾಮ್ ಚಿಟ್ಲೂರ್ ತಮ್ಮ 30ನೇ ವಯಸ್ಸಿನ ಮಧ್ಯಭಾಗದಲ್ಲಿ ತಾವು ನಿವೃತ್ತಿ ಹೊಂದಿದ ನಂತರ ಏನು ಮಾಡಬೇಕು ಎಂದು ಯೋಚಿಸುತ್ತಿದ್ದರು. ಆದರೆ ಒಂದು ವಿಷಯ ನಿಶ್ಚಿತವಾಗಿತ್ತು, ಅದೇನೆಂದರೆ ಅವರು ಏನೇ ಮಾಡಿದರೂ ಅದು ಪ್ರಕೃತಿಗೆ/ಪರಿಸರಕ್ಕೆ ಸಂಬಂಧಪಟ್ಟದ್ದಾಗಿರಬೇಕೆಂಬುದು, ಹಾಗಾಗಿ ಅಂತಹ ಕೆಲಸಗಳನ್ನು ಅವರು ಹುಡುಕುತ್ತಿದ್ದರು.


2008ರಲ್ಲಿ ಸರ್ಕಾರ ಶ್ರೀಗಂಧದ ಕೃಷಿಯ ಮೇಲಿನ ನಿಯಮಗಳನ್ನು ಸರಳಗೊಳಿಸಿದ ನಂತರ ಶ್ರೀಗಂಧದ ಮರ ಬೆಳೆಸುವ ಬಗ್ಗೆ ಅವರು ಯೋಚನೆ ಮಾಡಿದರು.


ಅದಕ್ಕಾಗಿ ಭೂಮಿಯನ್ನು ಹುಡುಕಲಾರಂಭಿಸಿ, ಗ್ರಾಮೀಣ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದರು. ಎರಡು ವರ್ಷಗಳ ಶ್ರಮದ ನಂತರ ಭೂಮಿಯನ್ನು ಪಡೆದುಕೊಂಡು ಆಂಧ್ರಪ್ರದೇಶದ ರಾಯದುರ್ಗದಲ್ಲಿ ಶ್ರೀಗಂಧದ ಕೃಷಿಯನ್ನು ಪ್ರಾರಂಭಿಸಿದರು.


ಹೊಸಚಿಗುರು ಸಂಸ್ಥೆಯ ಮಾರಾಟ ಮತ್ತು ಗ್ರಾಹಕರ ಬೆಂಬಲವನ್ನು ನಿರ್ದೇಶಿಸಲು 2014 ರಲ್ಲಿ ಸೇರಿಕೊಂಡ ಶ್ರೀನಾಥ್ ಸೆಟ್ಟಿ (37), ಯುವರ್‌ ಸ್ಟೋರಿಯೊಂದಿಗೆ ಮಾತನಾಡುತ್ತಾ,


“ಅಶೋಕ ಮತ್ತು ಶ್ರೀರಾಮ್ ಪ್ರಕೃತಿಯನ್ನು ಪ್ರೀತಿಸುತ್ತಾರೆ. ಅವರು ನಿವೃತ್ತಿ ಹೊಂದಿದ ನಂತರ ಏನೆಂದು ಯೋಚಿಸುತ್ತಿದ್ದಾಗ ಕೃಷಿಯನ್ನು ಮಾಡುವುದಕ್ಕೆ ಒಂದು ದೊಡ್ಡ ಅವಕಾಶ ಸಿಕ್ಕಿತು. ಅವರು ಹೆಚ್ಚು ಮರಗಳನ್ನು ಬೆಳೆಸಲು ಬಯಸಿದ್ದರು. ಕೃಷಿಯನ್ನು ಮಾಡಲು ಬಯಸುವವರಿಗೆ ಸಹಾಯ ಕೂಡ ಮಾಡುತ್ತಾರೆ," ಎಂದರು.

ಬೀಜಗಳ ಬಿತ್ತನೆ

ಅಶೋಕ್ (55) ಮತ್ತು ಶ್ರೀರಾಮ್ (44) ತಾವು ಉಳಿತಾಯ ಮಾಡಿದ 1 ಕೋಟಿ ರೂ. ಯಿಂದ ತಮ್ಮ ಪಯಣವನ್ನು ಆರಂಭಿಸಿದರು. ಶ್ರೀಗಂಧದ ಬೀಜಗಳನ್ನು ಅಶೋಕ ಅವರ ಪೂರ್ವಜರ ಆಸ್ತಿಯ 30 ಎಕರೆ ಭೂಮಿಯಲ್ಲಿ ಬಿತ್ತಲಾಯಿತು.


"ಇಬ್ಬರೂ ಪೂರ್ಣ ಸಮಯದ ಉದ್ಯೋಗದಲ್ಲಿದ್ದ ಕಾರಣ ಕೃಷಿಭೂಮಿಗೆ ಭೇಟಿ ನೀಡಲು ಅವರಿಗೆ ಸಮಯವಿರಲಿಲ್ಲ ಆದ್ದರಿಂದ ಅವರು ಸುಮಾರು 15 ವರ್ಷಗಳ ಗರ್ಭಾವಸ್ಥೆಯನ್ನು ಹೊಂದಿರುವ ಅಂದರೆ 15 ವರ್ಷಕ್ಕೆ ಬೆಳೆಯುವ ಸುಧೀರ್ಘ ಸಮಯದ ಶ್ರೀಗಂಧದ ಮರವನ್ನು ಬೆಳೆಯಲು ನಿರ್ಧರಿಸಿದರು."


ಬೆಳೆಯಲು ದೀರ್ಘಾವಧಿಯ ಸಮಯ ತೆಗೆದುಕೊಳ್ಳುವ ಈ ಕೃಷಿ ಹೆಚ್ಚಿನ ಆದಾಯವನ್ನು ಹೊಂದಿದೆ ಎಂದು ಶ್ರೀನಾಥ್ ಹೇಳುತ್ತಾರೆ. ಇದಲ್ಲದೆ ಇತರ ಬೆಳೆಗಳನ್ನು ಬೆಳೆಯುವುದರಲ್ಲಿ ಮಣ್ಣಿನ ಸೂಕ್ತತೆ, ರಸಗೊಬ್ಬರದಂತಹ ಇನ್ನೂ ಅನೇಕ ಸವಾಲುಗಳಿವೆ. ಸರಿಯಾದ ಯೋಜನೆಯನ್ನು ಹೊಂದಿದ್ದರಿಂದ ಇಬ್ಬರೂ ಸುರಕ್ಷಿತವಾಗಿ ಕೃಷಿ ಮಾಡಲು ಬಯಸಿದ್ದೇವು ಎನ್ನುತ್ತಾರೆ ಶ್ರೀನಾಥ.


ಆಧುನಿಕ ಕೃಷಿಗಾಗಿ ಸರ್ಕಾರದಿಂದ 40 ಲಕ್ಷ ರೂ.ಗಳ ಅನುದಾನವನ್ನು ಪಡೆದು ಶ್ರೀಗಂಧದ ಮರಕ್ಕಾಗಿ ಖಾಸಗಿ ನರ್ಸರಿಯನ್ನು ಖರೀದಿಸಿದರು.


ಕೆಲಸಗಳನ್ನು ಸುಗಮವಾಗಿ ನಡೆಸುತ್ತಿದ್ದರೂ, ಜನರು ಪ್ರಕೃತಿಗೆ ಹೇಗೆ ಕೊಡುಗೆ ನೀಡಿ ಸಹಾಯ ಮಾಡಬಹುದು ಎಂಬುದರ ಬಗ್ಗೆ ಅವರಿಗೆ ಸರಿಯಾಗಿ ತಿಳಿದಿರಲಿಲ್ಲ.


ಸುಮಾರು ಐದು ವರ್ಷಗಳ ನಂತ‌ರ ಕೃಷಿಭೂಮಿ ನಿರ್ವಹಣಾ ಕಂಪನಿಯನ್ನು ಸ್ಥಾಪಿಸಲು ಯೋಚಿಸಿದರು. ಅದು ದೊಡ್ಡ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅವುಗಳನ್ನು ಬೆಳೆನೀಡುವ ಹೊಲಗಳಾಗಿ ಪರಿವರ್ತಿಸುವಂತಹ ಕಂಪನಿಯಾಗಿತ್ತು. ಭೂಮಾಲೀಕರ ಆಯ್ಕೆಯಂತೆ ಮರಮುಟ್ಟುಗಳನ್ನು ಮತ್ತು ಇತರ ಉಪ-ಉಷ್ಣವಲಯದ ಬೆಳೆಗಳನ್ನು ಬೆಳೆಯಲಾಗುತ್ತದೆ ಮತ್ತು ಇದರಿಂದಾಗಿ ದೀರ್ಘ ಕಾಲೀನ ಸಂಪತ್ತು ಸೃಷ್ಟಿ ಅಥವಾ ಆದಾಯದಲ್ಲಿ ನಷ್ಟ ಹೊಂದದಿರುವುದನ್ನು ಸರಿಯಾದ ರೀತಿಯಲ್ಲಿ ಸಾಧಿಸಬಹುದು.


2013 ರಲ್ಲಿ ಕೃಷಿ ತಂತ್ರಗಳ ಬಗ್ಗೆ ತಿಳಿದುಕೊಂಡ ನಂತರ ಹೊಸಚಿಗುರು ಎಂಬ ಕಂಪಯನ್ನು ಸ್ಥಾಪಿಸಿದರು. ನಂತರ ಶ್ರೀನಾಥ್ ಅವರು ಈ ತಂಡದಲ್ಲಿ ಸೇರಿಕೊಂಡರು.


ಶ್ರೀನಾಥ್ ಸೆಟ್ಟಿ, ಶ್ರೀರಾಮ್ ಚಿಟ್ಲೂರ್ ಹಾಗೂ ಅಶೋಕ್ ಜೆ (ಎಡದಿಂದ ಬಲಕ್ಕೆ)


ಕಾರ್ಯಾಚರಣೆಗಳನ್ನು ವೈವಿಧ್ಯಗೊಳಿಸುವುದು

ಹೊಸಚಿಗುರು ಕೃಷಿ-ಅರಣ್ಯವನ್ನು ಕೇಂದ್ರೀಕರಿಸುತ್ತದೆ. ಜನರು ಹೊಸಚಿಗುರುವಿನೊಂದಿಗೆ ವ್ಯವಹರಿಸಲು ಎರಡು ಮಾರ್ಗಗಳಿವೆ. ಮೊದಲನೆಯದಾಗಿ, ಕೃಷಿಭೂಮಿಯನ್ನು ಖರೀದಿಸಲು ಬಯಸುವ ಜನರು ತಾವಾಗೇ ಅಥವಾ ಕಂಪನಿಯ ಸಹಾಯದಿಂದ ಅಭಿವೃದ್ಧಿಪಡಿಸುವ ಆಯ್ಕೆಗಳೊಂದಿಗೆ ಹೊಸಚಿಗುರುವಿನಿಂದ ಕೃಷಿಭೂಮಿಯನ್ನು ಖರೀದಿಸಬಹುದು. ಎರಡನೆಯದಾಗಿ, ಅಸ್ತಿತ್ವದಲ್ಲಿರುವ ಕೃಷಿಭೂಮಿಯ ಅಭಿವೃದ್ಧಿ ಮತ್ತು ನಿರ್ವಹಣೆಗೆ ವ್ಯಕ್ತಿಗಳು ಹೋಗಬಹುದು (ಇದು 50+ ಎಕರೆಗಳ ಪ್ರಮಾಣವನ್ನು ಹೊಂದಿದ್ದರೆ ಮತ್ತು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಕೃಷಿ-ಅರಣ್ಯ ಯೋಜನೆಯನ್ನು ಸ್ಥಾಪಿಸಲು ಸಂಪನ್ಮೂಲಗಳನ್ನು ತರಲು ಭೂಮಾಲೀಕರು ಸಿದ್ಧರಿದ್ದರೆ ಮಾತ್ರ)


ಈ ಕಲ್ಪನೆಯು ಜನರಲ್ಲಿ ಪ್ರಮುಖವಾಯಿತು ಮತ್ತು ಕೇವಲ ಐದು ವರ್ಷಗಳಲ್ಲಿ ಹೊಸಚಿಗುರು 800 ಎಕರೆ ಕೃಷಿಭೂಮಿಯಲ್ಲಿ ಶ್ರೀಗಂಧದ ಮರ, ಮಹೋಗಾನಿ ಮತ್ತು ಮೆಲಿಯಾ ದುಬಿಯಾದಂತಹ 18 ಯೋಜನೆಗಳನ್ನು ಪಡೆದುಕೊಂಡರು. ಈಗ ಕಂಪನಿಯು ವರ್ಷಕ್ಕೆ 20 ಕೋಟಿ ರೂ. ಲಾಭವನ್ನು ಗಳಿಸುತ್ತಿದೆ.


ಹೊಸಚಿಗುರು ಭೂಮಿಯನ್ನು ಪ್ರತಿ ಚದರ ಅಡಿಗೆ ಸುಮಾರು 60 ರಿಂದ 65 ರೂ. ಗೆ ಮಾರಾಟ ಮಾಡುತ್ತದೆ ಮತ್ತು ಅವರ ಯೋಜನೆಗಳು ಭೂಮಿಯನ್ನು ಖರೀದಿಸಿದ ಮೂರು-ನಾಲ್ಕು ತಿಂಗಳಲ್ಲಿ ಅಥವಾ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮೊದಲೇ ಮಾರಾಟವಾಗುತ್ತವೆ ಎಂದು ಶ್ರೀನಾಥ್ ಹೇಳುತ್ತಾರೆ. ಯೋಜನೆಯ ಪ್ರಮುಖ ಉದ್ದೇಶ ಹೊಸಚಿಗುರು ಗ್ರಾಹಕರು ಕೃಷಿಭೂಮಿಯನ್ನು ನಿರ್ವಹಿಸಬೇಕು ಎಂಬುದನ್ನು ಒಳಗೊಂಡಿದೆ.


ಕಂಪನಿಯು ಸಣ್ಣ ಟಿಕೆಟ್ ಗಾತ್ರವನ್ನು ಸಹ ನಿರ್ವಹಿಸುತ್ತದೆ, ಇದರ ಪರಿಣಾಮವಾಗಿ ಅಸ್ತಿತ್ವದಲ್ಲಿರುವ ಗ್ರಾಹಕರಿಂದ ಬರುವ ಯೋಜನೆಯೊಂದರ ಆರಂಭಿಕ ಮಾರಾಟದ ಗಮನಾರ್ಹ ಭಾಗವಾಗಿದೆ.


“ಇದೊಂದು ದೊಡ್ಡ ಸಾಧನೆಯೇ ಆಗಿದೆ. ಒಂದು ತುಂಡು ಭೂಮಿಯಲ್ಲಿ ಕೃಷಿಯನ್ನು ಪ್ರಾರಂಭಿಸಿದರು, ಆದರೆ ಈಗ ಅವರ ಕಂಪನಿಯು 18 ಯೋಜನೆಗಳನ್ನು ಪಡೆದು, 800 ಎಕರೆಯಲ್ಲಿ ಮರಗಳನ್ನು ಬೆಳೆಸುತ್ತಿದೆ. ಇಷ್ಟು ಕಡಿಮೆ ಸಮಯದಲ್ಲಿ ಬಹುದೂರ ಬೆಳೆದು ಬಂದಿದ್ದಾರೆ," ಎಂದು ಶ್ರೀನಾಥ ಹೇಳುತ್ತಾರೆ.


ಕಂಪನಿಯು ಕೃಷಿಭೂಮಿಯನ್ನು ಹೊಂದಿದ್ದು, ಅದರಲ್ಲಿ ಈಗಾಗಲೇ ಪ್ಲೈವುಡ್ ತಯಾರಿಕೆಯಲ್ಲಿ ತೊಡಗಿರುವ ಮೈಸೂರಿನ ವ್ಯಾಪಾರಿಗಳಿಗೆ ಮೆಲಿಯಾ ಡುಬಿಯಾವನ್ನು ಮಾರಾಟ ಮಾಡುತ್ತಿದ್ದಾರೆ.


ಈ ಭೂಮಿಯು ಬೆಂಗಳೂರಿಗೆ ಸಮೀಪದಲ್ಲಿದೆ ಶೀಘ್ರದಲ್ಲೇ ಹೈದರಾಬಾದ್ ಮತ್ತು ಹೊಸೂರಿನಂತಹ ಪ್ರದೇಶಗಳಿಗೆ ಕಾರ್ಯಾಚರಣೆಯನ್ನು ವಿಸ್ತರಿಸಲು ಉದ್ದೇಶಿಸಿದೆ ಎಂದು ಸಂಸ್ಥಾಪಕರು ಹೇಳುತ್ತಾರೆ. ಅವರು ಪ್ರೆಸ್ಟೀಜ್ ಗ್ರೂಪ್‌ನ ಸಿಇಒ ವೆಂಕಟ್ ನಾರಾಯಣ್ ಅವರಿಂದ ಹಣವನ್ನು ಸಂಗ್ರಹಿಸಿದ್ದಾರೆ.


ಹೊಸಚಿಗುರುವಿನ ಕೃಷಿಭೂಮಿಯಲ್ಲಿ ಎರಡು ವರ್ಷದ ಅಂಗಾಂಶ ಸಂಸ್ಕೃತಿಯ ತೇಗ


ಆದಾಯ ಮಾದರಿಯ ವಿವರಗಳನ್ನು ಹಂಚಿಕೊಂಡ ಶ್ರೀನಾಥ್ ಅವರು ನಾಲ್ಕು ಆದಾಯ ಮಾದರಿಗಳನ್ನು ಹೊಂದಿದ್ದಾರೆ ಎಂದು ಹೇಳುತ್ತಾರೆ. ಮೊದಲಿಗೆ, ಅವರು ಸಂಪೂರ್ಣವಾಗಿ ಸ್ಥಾಪಿಸಿದ ಭೂಮಿಯನ್ನು ಮಾರಾಟ ಮಾಡುತ್ತಾರೆ. ನಂತರ ತಮ್ಮ ನರ್ಸರಿಯಲ್ಲಿ ಬೆಳೆದ ಸಸಿಗಳನ್ನು ಮಾರಾಟ ಮಾಡುತ್ತಾರೆ. ಮೂರನೆಯದಾಗಿ ಹೊಲಗಳನ್ನು ಹೊಂದಿರುವ ಜನರಿಗೆ ತೋಟವನ್ನು ಮಾಡಿ, ಯೋಜನೆಯ ಶುಲ್ಕವನ್ನು ವಿಧಿಸುತ್ತಾರೆ. ಕೊನೆಯದಾಗಿ, ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ಮತ್ತು ನಿರ್ವಹಣೆಗಾಗಿ ಶುಲ್ಕ ವಿಧಿಸುತ್ತಾರೆ. ಇದು ಖರ್ಚಾಗಿರುವ ಎಲ್ಲಾ ವೆಚ್ಚಗಳನ್ನು ಮೂಲಭೂತವಾಗಿ ಒಳಗೊಳ್ಳುತ್ತದೆ. ಯಶಸ್ಸಿನ ಶುಲ್ಕವಾಗಿ, ಅವರು ಉತ್ಪನ್ನದ ಶೇಕಡಾ 30 ರಷ್ಟು ತೆಗೆದುಕೊಳ್ಳುತ್ತಾರೆ.


ಈ ಅಂತರ್ಜಾಲ ಯುಗದಲ್ಲಿ ಡಿಜಿಟಲೀಕರಣಕ್ಕೆ ಹೊಂದಿಕೊಳ್ಳುತ್ತಿರುವ ಹೊಸಚಿಗುರು ತಮ್ಮ ಗ್ರಾಹಕರಿಗೆ ವಿವಿಧ ಉಪಕ್ರಮಗಳು ಮತ್ತು ಕೊಡುಗೆಗಳ ಮಾಹಿತಿಯನ್ನು ಹಂಚಿಕೊಳ್ಳಲು ಡಿಜಿಟಲ್ ಮಾಧ್ಯಮವನ್ನು ಬಳಸುತ್ತಾರೆ. ಕಂಪನಿಯು ಬಲವಾದ ಆಸ್ತಿ ನಿರ್ವಹಣಾ ವೇದಿಕೆಯನ್ನು ಇರಿಸಿದೆ, ಅದು ಜಮೀನಿನಲ್ಲಿನ ಚಟುವಟಿಕೆಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಒದಗಿಸುತ್ತದೆ.


ಹವಾಮಾನ ಕೇಂದ್ರಗಳು, ತೇವಾಂಶ ಸಂವೇದಕಗಳು ಮತ್ತು ಅತ್ಯಾಧುನಿಕ ಹನಿ ನೀರಾವರಿ, ಯಾಂತ್ರೀಕೃತಗೊಂಡ ವ್ಯವಸ್ಥೆಗಳನ್ನು ಕೃಷಿಯ ವಿವಿಧ ಅಂಶಗಳನ್ನು ವಿಶ್ಲೇಷಿಸಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲು ಎಲ್ಲಾ ಹೊಲಗಳಲ್ಲಿ ಸ್ಥಾಪಿಸಲಾಗಿದೆ.


ಪ್ರಕೃತಿ ಮತ್ತು ಸಮಾಜವನ್ನು ಸಶಕ್ತಗೊಳಿಸುವುದು

ತಮ್ಮ ವಿವಿಧ ಯೋಜನೆಗಳೊಂದಿಗೆ ಹೊಸಚಿಗುರು ವಾತಾವರಣದಲ್ಲಿಯ ಇಂಗಾಲವನ್ನು ತೆಗೆದುಹಾಕಲು ಪರಿಣಾಮಕಾರಿಯಾಗಿ ಕೊಡುಗೆ ನೀಡುತ್ತಿದೆ. ಸಾವಯವ ಪದ್ಧತಿಗಳನ್ನು ಅನುಸರಿಸುವ ಮೂಲಕ ಇದು ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಂಪನಿಯು ಅಂತರ್ಜಲ ಪುನರ್ಭರ್ತಿ ಮಾಡುವುದಕ್ಕು ಸಹಕರಿಸುತ್ತದೆ. ಇದನ್ನು ಮಾಡಲು ಸಹಾಯ ಮಾಡುವ 10 ಕ್ಕೂ ಹೆಚ್ಚು ವಿಭಿನ್ನ ಕಾರ್ಯಾಚರಣೆಗಳನ್ನು ಹೊಂದಿದೆ.


ಅಲ್ಲದೆ, ಹೊಸಚಿಗುರು 100 ಕ್ಕೂ ಹೆಚ್ಚು ಸ್ಥಳೀಯ ರೈತರಿಗೆ ಉದ್ಯೋಗ ಸೃಷ್ಟಿಸಿ ಕೊಟ್ಟಿದೆ. ಕಂಪನಿಯು ಈ ರೈತ ಕುಟುಂಬದ ಸದಸ್ಯರಿಗೆ ವಸತಿ ಸೌಲಭ್ಯವನ್ನು ಒದಗಿಸಿದೆ.


ಪ್ರಮುಖ ಸವಾಲುಗಳು ಮತ್ತು ಸ್ಪರ್ಧೆ

ಕೃಷಿಯಲ್ಲಿನ ಒಂದು ಪ್ರಮುಖ ಸವಾಲೆಂದರೆ ಭೂಮಾಲೀಕರ ನಿರೀಕ್ಷೆ ಆದಾಯದ ದೃಷ್ಟಿಯಿಂದ ಹೆಚ್ಚಿರುತ್ತದೆ ಎಂದು ಶ್ರೀನಾಥ್ ಹೇಳುತ್ತಾರೆ.


“ಕೃಷಿ ನಮಗೆ ಕಲಿಸುವ ಒಂದು ಪಾಠವೆಂದರೆ, ಅದು ‘ತಾಳ್ಮೆ’ ಅದನ್ನು ಷೇರು ಮಾರುಕಟ್ಟೆಯಲ್ಲಿ ಅಥವಾ ಚಿನ್ನದ ಹೂಡಿಕೆಗೆ ಹೋಲಿಸಲಾಗುವುದಿಲ್ಲ. ಸಾಂಪ್ರದಾಯಿಕವಾಗಿ, ಕೃಷಿಭೂಮಿಗಳು ಸ್ಟಾಕ್ ಅಥವಾ ಚಿನ್ನಕ್ಕಿಂತ ಹೆಚ್ಚಾಗಿ ಪ್ರಶಂಸಿಸಿವೆ. ಆದಾಗ್ಯೂ, ಕೃಷಿ ಉತ್ಪಾದನೆ ಮತ್ತು ಕೃಷಿಯಿಂದ ಬರುವ ಇಳುವರಿ ಯಾವಾಗಲೂ ಏರಿಳಿತವನ್ನು ಹೊಂದಿರುತ್ತದೆ. ಕೇವಲ ಮೆಚ್ಚುಗೆಯ ಸಲುವಾಗಿ ಕೃಷಿಭೂಮಿಯನ್ನು ಖರೀದಿಸುವ ಕಲ್ಪನೆಗೆ ನಾವು ಚಂದಾದಾರರಾಗಿಲ್ಲ. ಮರಗಳನ್ನು ನೆಡುವುದು ಮತ್ತು ಇಂಗಾಲವನ್ನು ಸರಿದೂಗಿಸುವುದು ಒಬ್ಬರ ಕರ್ತವ್ಯವೆಂದು ನಂಬುತ್ತೇವೆ. ಮರಗಳು ಮೌಲ್ಯಯುತವಾಗಿವೆ, ಆದರೆ ಅವು ಬೆಳೆಯಲು ಸಮಯ ಬೇಕಾಗುತ್ತದೆ,” ಎನ್ನುತ್ತಾರೆ ಶ್ರೀನಾಥ.


ಮತ್ತೊಂದು ದೊಡ್ಡ ಸವಾಲೆಂದರೆ ದೊಡ್ಡ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅದರ ವೆಚ್ಚವನ್ನು ಕಾಯ್ದುಕೊಳ್ಳುವುದು. ಕಂಪನಿಯು ಸ್ಕೇಲೆಬಲ್ ಭೂಮಿಯನ್ನು ಹೊಂದಿಲ್ಲದಿದ್ದರೆ, ಸೆಟಪ್ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.


ಕೃಷಿ ವ್ಯವಹಾರವೆಂದರೆ ಪ್ರಕೃತಿ, ಪರಿಸರಕ್ಕೆ ಹೊಂದಿಕೊಂಡ ನಮ್ಮ ಮೂಲಭೂತ ಪದ್ಧತಿಗಳಿಗೆ ಹಿಂತಿರುಗಿ ಹೋಗುವುದು. ಇಲ್ಲಿ ಬಂಡವಾಳ ತೀವ್ರವಾಗಿರುತ್ತದೆ ಮತ್ತು ಬೆಳೆ ಬರುವ ಸಮಯವು ಸುದೀರ್ಘವಾಗಿರುತ್ತದೆ. ಉತ್ಸಾಹದಿಂದ ಕೃಷಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರವೇಶಿಸುತ್ತಾರೆ. ಕೆಲವರು ತ್ವರಿತವಾಗಿ ಹಣ ಸಂಪಾದಿಸುವುದಕ್ಕಾಗಿ ಬಂದು ಬಲೆಗೆ ಬೀಳುವುದನ್ನು ಸಂಸ್ಥಾಪಕರು ಗಮನಿಸಿದ್ದಾರೆ.


ಈ ಕ್ಷೇತ್ರಕ್ಕೆ ಬರಲು ಬಯಸುವ ದೊಡ್ಡ ಜೇಬಿನ ರಿಯಲ್‌ ಎಸ್ಟೆಟ್‌ ಏಜೆಂಟ್‌ಗಳು ಬೆಳೆ ಬರಲು ದೀರ್ಘ ಅವಧಿ ತೆಗೆದುಕೊಳ್ಳುವುದರಿಂದ ಇದರಲ್ಲಿ ಆಸಕ್ತಿ ಹೊಂದಿಲ್ಲ. ನಗರದ ಉದ್ಯಮಗಳಿಗೆ ಹೋಲಿಸದರೆ ಬಂಡವಾಳಕ್ಕೆ ಬರುವ ಆದಾಯವು ಆಕರ್ಷಕವಾಗಿಲ್ಲ. ಉತ್ಸಾಹಿಗಳಿಗೆ, ಹಣಕಾಸು ನಿರ್ವಹಣೆ ಒಂದು ಸವಾಲಾಗಿದೆ ಮತ್ತು ಹೆಚ್ಚಿನ ಜನರು ಒಂದು ಅಥವಾ ಎರಡು ಯೋಜನೆಗಳಿಗೆ ಸಾಕಾಗಿ ಹೋಗುತ್ತಾರೆ.


ಹೊಸಚಿಗುರು ಸಾಲದಿಂದ ದೂರವಿರುವ ಸರಳ ವ್ಯವಹಾರ ಮಾದರಿಯಾಗಿದೆ.


ಹೊಸಚಿಗುರುವಿನ ಕೃಷಿಭೂಮಿ


ಕಂಪನಿಯು ತಾವು ಬೆಳೆದ ಮರಗಳಿಂದ ಬರುವ ಉತ್ಪನ್ನಗಳಿಂದಲೇ ಹೆಚ್ಚು ಹಣವನ್ನು ಪಡೆಯುತ್ತದೆ ಮತ್ತು ಇತರ ಕೆಲಸಗಳಲ್ಲಿ ಆದಾಯ ಕನಿಷ್ಟವಾಗಿದೆ ಎಂದು ಹೇಳಿಕೊಂಡಿದೆ. ಗ್ರಾಹಕರು ಭೂಮಿಯನ್ನು ಖರೀದಿಸುವಾಗ ಅಥವಾ ನಿರ್ವಹಿಸುವಾಗ ಕಂಪನಿ ತುಸು ಕಡಿಮೆ ಲಾಭವನ್ನು ತಾ ಪಡೆದು, ಅವರಿಗೆ ಉತ್ತಮ ಮೌಲ್ಯವನ್ನು ದೊರಕಿಸಲು ಪ್ರಯತ್ನಿಸುತ್ತದೆ. ತುಸು ಕಡಿಮೆ ಲಾಭದ ಈ ಮಾದರಿ ಗ್ರಾಹಕರಿಗೆ ಉತ್ತಮವಾಗಿ ಸಹಾಯ ಮಾಡುವುದಲ್ಲದೆ ಹೊಸಚಿಗುರು ತ್ವರಿತವಾಗಿ ಬೆಳೆಯಲು ಸಹಾಯ ಮಾಡುತ್ತದೆ.


ಮುಂದಿನ ಯೋಜನೆ

ಕಂಪನಿಯ ಭವಿಷ್ಯದ ಯೋಜನೆಗಳ ಕುರಿತು ಮಾತನಾಡುತ್ತಾ ಅವರು,


"ಹೊಸಚಿಗುರುವಿನೊಂದಿಗೆ ಜನರು ಆಸ್ತಿಯನ್ನು ತಮ್ಮ ಜೀವನಶೈಲಿ ಮತ್ತು ದೀರ್ಘಕಾಲೀನ ಅಗತ್ಯಗಳಿಗೆ ಪಡೆಯಬಹುದಾಗಿದೆ. ಗ್ರಾಹಕರಿಗೆ ಹಣದ ಅಗತ್ಯವಿರುವಾಗ ಅದನ್ನು ಸುಲಭವಾಗಿ ಮಾರಾಟ ಮಾಡುವಂತೆ ನಾವು ಮಾಲೀಕತ್ವವನ್ನು ಸಾಧ್ಯವಾದಷ್ಟು ಸುಲಭಗೊಳಿಸುವತ್ತ ಕೆಲಸ ಮಾಡುತ್ತಿದ್ದೇವೆ,” ಎನ್ನುತ್ತಾರೆ ಶ್ರೀನಾಥ.


ಅವರ ಮುಂಬರುವ ಯೋಜನೆ ಬೆಂಗಳೂರಿನಿಂದ 90 ನಿಮಿಷಗಳ ಪ್ರಯಾಣದ ಹಿಂದೂಪುರದ ರಾಜ್ಯ ಹೆದ್ದಾರಿಯಲ್ಲಿರುವ ಅಭಿವೃದ್ಧಿ ಫಾರ್ಮ್ಸ್. ಈ ಯೋಜನೆಯು 108 ಎಕರೆ ಯೋಜಿತ ಅರಣ್ಯವಾಗಿದ್ದು 5,000 ಮಾವಿನ ಮರಗಳಿಂದ ಸಮೃದ್ಧವಾಗಿದೆ. ವೀಕೆಂಡ್ ಹೌಸ್ ಮತ್ತು ಕುಟೀರಗಳು, ಸೈಕ್ಲಿಂಗ್ ಟ್ರ್ಯಾಕ್‌ಗಳು, ಓದುವ ಪಾಡ್‌ಗಳು, ವೀಕ್ಷಣಾ ಡೆಕ್‌ಗಳು ಮತ್ತು ಬಹು-ಹಂತದ ಕ್ಯಾಂಪಿಂಗ್ ಸೌಲಭ್ಯಗಳು ಸೇರಿದಂತೆ (ಕೃಷಿ ಮಾಲೀಕರು) ಪ್ರಕೃತಿಯೊಂದಿಗೆ ಸಂಪರ್ಕ ಹೊಂದಲು ಹಲವಾರು ಸೌಲಭ್ಯಗಳನ್ನು ನೀಡಲಿದ್ದಾರೆ.