Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ವಯಸ್ಸಾದವರ ಕೈ ಹಿಡಿಯುತ್ತದೆ "ಕಿಕ್​ಸ್ಟಾರ್ಟ್​"

ಟೀಮ್​ ವೈ.ಎಸ್​. ಕನ್ನಡ

ವಯಸ್ಸಾದವರ ಕೈ ಹಿಡಿಯುತ್ತದೆ "ಕಿಕ್​ಸ್ಟಾರ್ಟ್​"

Monday May 15, 2017 , 3 min Read

ವಯಸ್ಸು ಹೆಚ್ಚಾದಂತೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಮನಸ್ಸಾಗುವುದಿಲ್ಲ. ಮನೆಯಿಂದ ಹೊರಗಡೆ ಬರಲು ದೇಹ ಕೇಳುವುದಿಲ್ಲ. ಹೀಗಾಗಿ ಸಮಯ ಕಳೆಯುವುದೇ ದೊಡ್ಡ ಕಷ್ಟವಾಗುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಒಂದೈದು ನಿಮಿಷ ಮನೆಯೊಳಗೆ ಕೂರುವುದು ಕಷ್ಟದ ಮಾತೇ ಸರಿ. ವಯಸ್ಸು ಎಷ್ಟು ಬೇಕಾದ್ರೂ ಆಗಿರಲಿ, ಸಿಲಿಕಾನ್​ ಸಿಟಿಯ ಲೈಫ್​ಗೆ ಅಡ್ಜಸ್ಟ್​ ಆಗಬೇಕಾದರೆ ತಿರುಗಾಡಲೇಬೇಕಾಗುತ್ತದೆ. ಅಟ್​ಲೀಸ್ಟ್​ ವಾರಕ್ಕೊಮ್ಮೆಯಾದರೂ ಸಿಟಿಗೆ ಒಂದು ರೌಂಡ್​ ಹೊಡೆಯಲೇ ಬೇಕು.

image


ಆರೋಗ್ಯವಾಗಿದ್ದವರು, ಕೈಕಾಲು ಚೆನ್ನಾಗಿದ್ದವರು ಹೊರಗೆ ಆರಾಮಾಗಿ ಓಡಾಡಿಕೊಂಡಿರುತ್ತಾರೆ. ಆದರೆ ದೈಹಿಕವಾಗಿ ದುಬರ್ಲರಾದವರು ಹೇಗೆ ಹೊರಗೆ ಸುತ್ತಾಡುತ್ತಾರೆ. ಅವರಿಗೂ ನಮ್ಮ ತರಹ ಆಸೆ ಆಕಾಂಕ್ಷೆಗಳಿರುತ್ತವೆ. ಅಂತವರಿಗಾಗಿ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಒಂದು ಕ್ಯಾಬ್‌ ಸಂಸ್ಥೆ ಆರಂಭವಾಗಿದೆ. ಅದಕ್ಕೆ ಕಿಕ್​ಸ್ಟಾರ್ಟ್ ಕ್ಯಾಬ್ ಎಂದು ಹೆಸರಿಡಲಾಗಿದೆ. ಈ ಕಿಕ್​ಸ್ಟಾರ್ಟ್ ಕ್ಯಾಬ್ ಮೂಲಕ ಅಶಕ್ತರನ್ನು, ತೀರಾ ವಯಸ್ಸಾಗಿ ನಡೆಯಲಾಗದವರನ್ನು, ಆಪರೇಷನ್‌ ಆದವರನ್ನು ಎಲ್ಲರಂತೆ ಓಡಾಡಿಸುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಮೊದಲ ಬಾರಿಗೆ ದೈಹಿಕ ದುರ್ಬಲರಿಗಾಗಿ ಇಂಥ ಕ್ಯಾಬ್​ಗಳು ರೋಡಿಗಿಳಿದಿವೆ. ಆಯಾಸವಿಲ್ಲದೆ ದೈಹಿಕ ದುರ್ಬಲರು ಇದರಲ್ಲಿ ಪ್ರಯಾಣಿಸಬಹುದು. ಒಂದೂ ಹೆಜ್ಜೆ ಇಡಲಾಗದವರು, ನಾಲ್ಕು ಗೋಡೆ ನಡುವೆ ನಮ್ಮ ಬದುಕು ಎಂದು ಈಗಾಗಲೇ ಡಿಸೈಡ್ ಮಾಡಿದವರು ಈ ಕ್ಯಾಬ್‌ ಏರಿದರೆ, ಹೊರ ಜಗತ್ತನ್ನೊಮ್ಮೆ ನೋಡಿಬರಬಹುದು. ಸಮಯ ಕಳೆಯಲು ಮತ್ತು ಮನಸ್ಸಿನ ನೆಮ್ಮದಿ ಪಡೆಯಲು ಈ ರೈಡ್​ ಸಹಕಾರಿ ಆಗಬಲ್ಲದು. 

" ದೈಹಿಕ ವಿಕಲಚೇತನರು ಕೂ ನಮ್ಮಂತೆ ಎಲ್ಲವನ್ನು ನೋಡಬೇಕು ಎಂಬ ಆಸೆ ಹೊಂದಿರುತ್ತಾರೆ. ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಕ್ಯಾಬ್‌ ಸೇವೆಯನ್ನು ಆರಂಭಿಸಿದ್ದೇನೆ. ಈ ಮೂಲಕ ದೈಹಿಕ ನ್ಯೂನ್ಯತೆ ಇರುವವರ ನೋವಿಗೆ ದನಿಯಾಗುವ ಸಣ್ಣ ಪ್ರಯತ್ನ ಮಾಡಿದ್ದೇನೆ."
- ವಿದ್ಯಾ, ಕಿಕ್​ಸ್ಟಾರ್ಟ್ ನಿರ್ದೇಶಕಿ

ಓಲಾ, ಉಬರ್​ನಂತೆ ಟ್ಯಾಕ್ಸಿ

ಈ ಕಿಕ್​ಸ್ಟಾರ್ಟ್ ಕ್ಯಾಬ್ ಓಲಾ, ಉಬರ್​ನಂತೆ ಕೆಲಸ ಮಾಡುತ್ತದೆ. ಆದರೆ ಈ ಟ್ಯಾಕ್ಸಿ ಸೇವೆ ಎಲ್ಲರಿಗೂ ಸಿಗುವುದಿಲ್ಲ. ವಯಸ್ಸಾಗಿ ಹೆಜ್ಜೆ ಊರಲೂ ಕಷ್ಟಪಡುವವರಿಗೆ, ಶಸ್ತ್ರಚಿಕಿತ್ಸೆಗೆ ಒಳಪಟ್ಟು ನೋವು ತಿನ್ನುತ್ತಿರುವವರಿಗೆ, ತೀರಾದೈಹಿಕ ದುರ್ಬಲರಿಗೆ ಮಾತ್ರ ಈ ಕಿಕ್​ಸ್ಟಾರ್ಟ್ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತೆ.

image


ಕಿಕ್​ಸ್ಟಾರ್ಟ್ ಕ್ಯಾಬ್ ವಿಶೇಷತೆಗಳು

ವಿವಿಧ ಟ್ಯಾಕ್ಸಿಗೆಳಿಗೆ ಹೋಲಿಸಿದರೆ ಈ ಕಿಕ್​ಸ್ಟಾರ್ಟ್​ ಕ್ಯಾಬ್​ ಸೇವೆಗಳಲ್ಲಿ ಹಲವು ಸ್ಪೆಷಾಲಿಟಿಗಳಿವೆ. ಡ್ರೈವರ್ ಪಕ್ಕದ ಮತ್ತು ಹಿಂಬದಿಯ ಸೀಟುಗಳು ಇಲ್ಲಿ ಮಾಮೂಲಿಯಂತೆ ಇರುವುದಿಲ್ಲ. ಇವು ಅಡ್ಜಸ್ಟಬಲ್ ಸೀಟುಗಳು. ಈ ಸೀಟ್​ಗಳನ್ನು ವಯಸ್ಸಾದವರು ಮತ್ತು ಅಶಕ್ತರು ಅಥವಾ ಪ್ರಯಾಣಿಕರು ಹೇಗೆ ಬೇಕಾದರೂ ಫೋಲ್ಡ್ ಮಾಡಬಹುದು. ದೈಹಿಕ ನ್ಯೂನತೆ ಇರುವ ವ್ಯಕ್ತಿಗೆ ಕಾರೊಳಗೆ ಬಂದು ಕುಳಿತುಕೊಳ್ಳಲಾಗದಿದ್ದರೆ, ಕ್ಯಾಬ್ ನ ಸೀಟನ್ನೇ ಹೊರಗೆಳೆದು, ಅವರನ್ನು ಕೂರಿಸಿಕೊಂಡು, ಪುನಃ ಯಥಾಸ್ಥಿತಿಗೆ ಅಡ್ಜಸ್ಟ್ ಮಾಡಬಹುದು. ಹಂಪ್ ಬಂದಾಗ,ಡ್ರೈವರ್ ಬ್ರೇಕ್ ಒತ್ತಿದಾಗ ಒಳಗಿರುವ ಪ್ರಯಾಣಿಕರು ಹೆದರಿಕೊಳ್ಳುವುದಿಲ್ಲ. ಅಷ್ಟು ಕಂಫರ್ಟ್ ಫೀಲ್ ಕೊಡುತ್ತದೆ ಈ ಟ್ಯಾಕ್ಸಿ. ಕಿಕ್​ಸ್ಟಾರ್ಟ್​ಲ್ಲಿ ಕುಳಿತ ಮೇಲೆ, ಅದರಿಂದ ಕೆಳಗೆ ಇಳಿಯಲು ಮನಸ್ಸಾಗುವುದೇ ಇಲ್ಲ ಎಂದು ಇದರಲ್ಲಿ ಪ್ರಯಾಣ ಮಾಡಿರುವ ಸಾಕಷ್ಟು ಮಂದಿ ಹೇಳಿದ್ದಾರೆ. ಅಂದಹಾಗೆ, ವ್ಹೀಲ್​ಚೇರ್ ಅನ್ನು ಕ್ಯಾಬ್​ನಲ್ಲಿಯೇ ಕೊಂಡೊಯ್ಯುವ ವ್ಯವಸ್ಥೆಯೂ ಇಲ್ಲಿದೆ. ಈ ಕಿಕ್​ಸ್ಟಾರ್ಟ್ ಕ್ಯಾಬ್‌ ಸೇವೆಗೆ ಮಣಿಪಾಲ್ ಹಾಸ್ಪಿಟಲ್, ಐಐಟಿ ಬಿ, ಡಿಇಒಸಿ ಸೇರಿದಂತೆ ಹಲವು ಹೆಸರಾಂತ ಕಂಪನಿಗಳು ಈ ಸೇವೆಗೆ ಸಾಥ್ ನೀಡಿವೆ.

ಇದನ್ನು ಓದಿ: ಮೆಕ್ ಡೊನಾಲ್ಡ್ಸ್​​, ಕೆಎಫ್​ಸಿಗೂ ಭಯ ಹುಟ್ಟಿಸಿದೆ 'ಪತಂಜಲಿ'..! 

ಬುಕ್ ಮಾಡುವುದು ಹೇಗೆ?

ಅಂದಹಾಗೇ, ಈ ಕಿಕ್​ಸ್ಟಾರ್ಟ್​ ಕ್ಯಾಬ್​ ಅನ್ನು ಬುಕ್​ ಮಾಡುವುದು ಹೇಗೆ ಅನ್ನುವುದು ಮುಂದಿರುವ ಪ್ರಶ್ನೆ. ಕಿಕ್​ಸ್ಟಾರ್ಟ್ ತನ್ನದೇ ಆದ ಒಂದು ವೆಬ್‌ಸೈಟ್‌ ಹೊಂದಿದ್ದು, ಅದಕ್ಕೆ ಲಾಗಿನ್‌ ಆಗಿ ಅಲ್ಲಿ ಬುಕ್‌ ಮಾಡಬಹುದು. ಅಷ್ಟೇ ಅಲ್ಲದೆ ಕಿಕ್​ಸ್ಟಾರ್ಟ್​ ಹೆಲ್ಪ್​ ಲೈನ್​ ನಂಬರ್​ ಕೂಡ ಇದೆ. ಈ ಮೂಲಕವೂ ಅವಶ್ಯಕತೆ ಇದ್ದವರು ಕ್ಯಾಬ್​ ಅನ್ನು ಬುಕ್​ ಮಾಡಿಕೊಳ್ಳಬಹುದು.

image


ಪ್ರಯಾಣ ದರ ಹೆಚ್ಚು

ಈ ಕ್ಯಾಬ್ ಬೇರೆ ಕಾರುಗಳಂತೆ ಅಲ್ಲ. ದೈಹಿಕ ನ್ಯೂನತೆ ಉಳ್ಳವರಿಗಾಗಿಯೇ ನಿರ್ಮಿಸಿರುವುದರಿಂದ ಸಾಕಷ್ಟು ಸೌಲಭ್ಯಗಳನ್ನು ಈ ಕ್ಯಾಬ್‌ನಲ್ಲಿ ಒದಗಿಸಲಾಗಿದೆ. ಆದ್ದರಿಂದ ಪ್ರಯಾಣ ದರ ಸ್ವಲ್ಪ ಹೆಚ್ಚು. 4 ಗಂಟೆಯ ಪ್ಯಾಕೇಜ್​ಗೆ 1500ರೂಪಾಯಿ ಆಗುತ್ತದೆ. 1 ತಾಸು ಹೆಚ್ಚು ಬೇಕೆಂದರೆ, ಪ್ರತ್ಯೇಕ 200 ರೂ. ನೀಡಬೇಕಾಗುತ್ತದೆ. 1 ಕಿಲೋಮೀಟರ್​ಗೆ 20 ರೂ.ದರ ಪಡೆಯುತ್ತಾರೆ.

ವ್ಯವಹಾರ ಮತ್ತು ಟಾರ್ಗೆಟ್​

ಸದ್ಯಕ್ಕೆ ಬೆಂಗಳೂರಿನಲ್ಲಿ ಕಿಕ್​ಸ್ಟಾರ್ಟ್​ ಕಾರ್ಯನಿರ್ವಹಿಸುತ್ತಿದೆ. ಈ ಕ್ಯಾಬ್​ ಸೇವೆಗೆ ವಯಸ್ಸಾದವರು ಮಾತ್ರ ಗ್ರಾಹಕರು ಆಗಿರುವುದರಿಂದ, ಉದ್ಯಮ ಈಗಷ್ಟೇ ಚಾಲ್ತಿಗೆ ಬರುತ್ತಿದೆ. ಓಲಾ, ಉಬರ್​ ನಂತಹ ಕ್ಯಾಬ್​ ಸೇವೆಗಳ ಮಧ್ಯೆ ಕಿಕ್​ಸ್ಟಾರ್ಟ್​ ಕ್ಲಿಕ್​ ಆಗಬೇಕಾದರೆ ಹೆಚ್ಚು ಸಮಯವೂ ಬೇಕಾಗಿದೆ. ಆದ್ರೆ ಒಂದಂತೂ ಸತ್ಯ. ಸೇವೆ ಚೆನ್ನಾಗಿದ್ದರೆ, ಗ್ರಾಹಕ ಕೈ ಹಿಡಿದೇ ಹಿಡಿಯುತ್ತಾನೆ.

ಇದನ್ನು ಓದಿ:

1. ಸೊಲಾರ್​ ಉತ್ಪನ್ನಗಳಿಗೆ ಮಾರುಕಟ್ಟೆಯ ಸೃಷ್ಟಿ- ಭವಿಷ್ಯದ ಕನಸು ಕಾಣ್ತಿದೆ "ಸೊಲ್​ಟ್ರಿಕ್ಸ್​​"

2. ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

3. ಆಹಾರ ಪೋಲಾಗುವುದನ್ನು ತಡೆಯುವ ಪ್ಲಾನ್​- ಹಸಿದವರ ಹೊಟ್ಟೆ ತುಂಬಿಸ್ತಾರೆ ಶಿವಕುಮಾರ್​​