Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ದೂರಾದ ಪ್ರೇಮಿಗಳಿಗೂ ಬಂತು, 30 ಡೇ ರಿಲೇಷನ್‍ಶಿಪ್ ಆ್ಯಪ್..!

ವಿಸ್ಮಯ

ದೂರಾದ ಪ್ರೇಮಿಗಳಿಗೂ ಬಂತು, 30 ಡೇ ರಿಲೇಷನ್‍ಶಿಪ್ ಆ್ಯಪ್..!

Saturday February 13, 2016 , 2 min Read

ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ ಎಲ್ಲಾ ಹುಡುಗ ಹುಡುಗಿಯರಲ್ಲಿ ಕಾತರ ಇದ್ದೇ ಇರುತ್ತೆ. ಯಾವ ರೀತಿ ಈ ಬಾರಿ ಸ್ಪೆಷಲ್ ಡೇ ಆಗಿ ಮಾಡೋದು ಅಂತ ಯೋಚನೆ ಮಾಡತ್ತಿತ್ತಾರೆ. ವ್ಯಾಲೆಂಟೈನ್ಸ್ ಡೇಗಾಗಿ ಪ್ರೇಮಿಗಳು ಮನಸ್ಸಿನಲ್ಲೇ ಲೆಕ್ಕಾಚಾರಗಳನ್ನ ಹಾಕಿಕೊಂಡು ಇರುತ್ತಾರೆ. ಕೆಲವರು ತಮ್ಮ ಸಂಗಾತಿಯ ಬಳಿ ಪ್ರೇಮ ನಿವೇದನೆ ಮಾಡಿಕೊಂಡ್ರೆ, ಇನ್ನು ದೂರಾದ ಪ್ರೇಮಿಗಳು ಮತ್ತೆ ಒಂದಾಗುವ ಬಗ್ಗೆ ಯೋಚನೆ ಮಾಡ್ತಿರುತ್ತಾರೆ. ಇಂಥ ಲವರ್​ಗಾಗಿಯೇ ಹೊಸದೊಂದು ಆ್ಯಪ್ ಬಂದಿದೆ. ಅರೇ ಇದೇನಾಪ್ಪ ಆ್ಯಪ್ ಇದ್ದೀಯಾ ಅಂತ ಆಶ್ಚರ್ಯ ಆಗಬಹುದು. ಆದ್ರೆ ಇದು ನಿಜ.

image


ಯಾವ ಆ್ಯಪ್..?

30 ದಿನಗಳಲ್ಲಿ ಇಂಗ್ಲೀಷ್ ಕಲಿಯಿರಿ. 30 ದಿನಗಳಲ್ಲಿ ನಿಮ್ಮ ದೇಹ ತೂಕವನ್ನ ಇಳಿಸಿಕೊಳ್ಳಿ ಅನ್ನೋ ಪುಸ್ತಕಗಳನ್ನ ನೋಡಿರ್ತೀರಾ, ಕೇಳಿರ್ತೀರಾ. ಇದಕ್ಕಾಗಿ ಆ್ಯಪ್‍ಗಳನ್ನೂ ನೋಡಿರ್ತೀರಾ. ಆದ್ರೆ ಯಾವುದೋ ಮನಸ್ತಾಪಗಳಿಂದ ದೂರಾದ ಜೋಡಿಗಳನ್ನು ಹತ್ತಿರ ಮಾಡುವುದಕ್ಕೂ ಆ್ಯಪ್‍ವೊಂದು ಇದೆ. ಅದರ ಹೆಸರು `30 ಡೇ ರಿಲೇಷನ್‍ಶಿಪ್ ಚಾಲೆಂಜ್’ ಎಂಬ ಮೊಬೈಲ್ ಅಪ್ಲಿಕೇಶನ್..!

ಇದನ್ನು ಓದಿ

'ದೇವರು ಮತ್ತು ಕನಸಿನಲ್ಲಿ ನಂಬಿಕೆಯಿಟ್ರೆ ಜಯ ಶತಸಿದ್ಧ' ಯೆಸ್ ಬ್ಯಾಂಕ್​ನ ರಾಣಾ ಕಪೂರ್ ಯಶಸ್ಸಿನ ಮಂತ್ರ

ಯಾವ ರೀತಿಯಲ್ಲಿ ಆ್ಯಪ್ ಸಹಾಯಕ?

ಈ ಅಪ್ಲಿಕೇಶನ್ ಬಿಗ್‍ಬಾಸ್ ರಿಯಾಲಿಟಿ ಶೋನಂತೆ ದಿನಕ್ಕೊಂದು ಟಾಸ್ಕ್ ನೀಡುತ್ತೆ. ಆ ಮೂಲಕ 30 ದಿನಗಳಲ್ಲಿ ವಿಶೇಷ ಸವಾಲುಗಳನ್ನು ನೀಡಿ, ದೂರಾದ ಜೋಡಿಯನ್ನು ಹತ್ತಿರ ಸೇರಿಸಲು ಪ್ರಯತ್ನಿಸುತ್ತೆ. ಈ ಅಪ್ಲಿಕೇಶನ್‍ನಲ್ಲಿ ಹಲವು ಸಣ್ಣ ಪುಟ್ಟ ಟಾಸ್ಕ್‍ಗಳಿವೆ. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಮಂದಿ `30 ಡೇ ರಿಲೇಷನ್‍ಶಿಪ್ ಚಾಲೆಂಜ್’ ಆ್ಯಪ್ ಬಳಕೆ ಮಾಡ್ತಿದ್ದಾರೆ. ಇನ್ನು ಇದ್ರ ಮೊದಲ. ಟಾಸ್ಕ್ ಫೇಸ್‍ಬುಕ್, ಟ್ವಿಟರ್‍ನಿಂದ ಆರಂಭಗೊಳ್ಳುತ್ತೆ. ಈ ಮೂಲಕ ತಮ್ಮ ಸಂಗಾತಿಯನ್ನ ಹೊಗಳುವುದು.. ಅವಳು ಅಥವಾ ಅವನಿಗೆ ಗೊತ್ತಿಲ್ಲದಂತೆ ಇಷ್ಟದ ತಿಂಡಿಗಳನ್ನು ಕೊಡಿಸುವುದು. ಪರಸ್ಪರ ಭೇಟಿಯಾದಾಗ ಪ್ರೀತಿಯ ಅಪ್ಪುಗೆ, ಹಣೆಗೊಂದು ಮುತ್ತು ನೀಡುವುದು ಸೇರಿದಂತೆ ವಿವಿಧ ರೀತಿಯ ಟಾಸ್ಕ್‍ಗಳಿರುತ್ತವೆ.

ಹೇಗೆ ಡೌನ್‍ಲೋಡ್ ಮಾಡೋದು..?

ನಿಮ್ಮ ಸ್ಮಾರ್ಟ್​ ಮೊಬೈಲ್‍ನಲ್ಲಿ 30 Day Relationship Challenge ಅಂತ ಟೈಪ್ ಮಾಡಿದ್ರೆ ಆ್ಯಪ್ ನಿಮಗೆ ಕಾಣಸಿಗುತ್ತೆ. ಅದನ್ನ ಡೌನ್‍ಲೋಡ್ ಮಾಡಿಕೊಳ್ಳಬೇಕು.. ಇಲ್ಲವಾದ್ರೆ https://play.google.com/store/apps/details?id=com.fivehellions.android.spark ಈ ಲಿಂಕ್‍ಗೆ ಹೋದ್ರೆ ನಿಮಗೆ ಈ ಆ್ಯಪ್ ಸಿಗುತ್ತೆ. ಇದು ಫ್ರೀ ಡೌನ್‍ಲೋಡ್ ಆಗಿದೆ..

image


ಈ ಲವ್ ಆ್ಯಪ್ ಯಾರ್ ಯಾರಿಗೆ?

`30 ಡೇ ರಿಲೇಷನ್‍ಶಿಪ್ ಚಾಲೆಂಜ್’ ಅಪ್ಲಿಕೇಶನ್ ಕೇವಲ ದೂರಾದ ಪ್ರೇಮಿಗಳಿಗೆ ಮಾತ್ರವಲ್ಲ.. ಮದುವೆ ಆಗಿರೋ ದಂಪತಿಗಳಿಗೂ ಕೂಡ ಅನುಕೂಲವಾಗುತ್ತೆ. ತಾವು ತಮ್ಮ ಸಂಗಾತಿಯನ್ನ ಎಷ್ಟು ಇಷ್ಟ ಪಡ್ತಿದ್ದೇವೆ ಎಂಬುದನ್ನು ತೋರಿಸಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತೆ. ದಾಂಪತ್ಯ ಜೀವನಕ್ಕೆ ಕಾಲಿಡುವ ಜೋಡಿಗಳು ಕೂಡ ಈ ಆ್ಯಪ್‍ನ್ನ ಹೆಚ್ಚು ಇಷ್ಟ ಪಡ್ತಿದ್ದಾರಂತೆ. ಆ್ಯಪ್ ಬಳಸಿ ತಮ್ಮ ಸಂಗಾತಿಗೆ ವಿಶಿಷ್ಟ ಸಪ್ರ್ರೈಸ್‍ಗಳನ್ನ ನೀಡೋ ಮೂಲಕ ಇನ್ನಷ್ಟು ಹತ್ತಿರ ಆಗ್ತಿದ್ದಾರಂತೆ.

ಇದ್ರ ಬಳಕೆ ದಾರರು ಏನ್ ಹೇಳ್ತಾರೆ?

ಕೆಲಸದ ಒತ್ತಡಗಳ ಮಧ್ಯೆ ನಮ್ಗೆ ಎಲ್ಲವೂ ಮರೆತು ಹೋಗಿರುತ್ತೆ. ನಾನು ನನ್ನ ಪತಿ ಇಬ್ಬರು ಕೆಲ್ಸದಲ್ಲಿ ಬ್ಯುಸಿಯಾಗಿರುತ್ತೇವೆ. ಒಬ್ಬರಿಗೊಬ್ಬರು ಸಿಗುವುದೇ ಅಪರೂಪ.. ನಾನು ಅವ್ರನ್ನು ತುಂಬಾ ಇಷ್ಟ ಪಡುತ್ತೇನೆ. ಆದ್ರೆ ಅದನ್ನ ವ್ಯಕ್ತಪಡಿಸುವುದು ಹೇಗೆ ಅನ್ನೋದು ಗೊತ್ತಾಗುತ್ತಿರಲಿಲ್ಲ. ಆ ಟೈಮ್‍ನಲ್ಲಿ ನನಗೆ ನನ್ನ ಗೆಳತಿ 30 ಡೇ ರಿಲೇಷನ್‍ಶಿಪ್ ಆ್ಯಪ್ ಬಗ್ಗೆ ತಿಳಿಸಿದ್ದಳು. ನಂತ್ರ ನಾನು ಅದನ್ನ ಡೌನ್‍ಲೋಡ್ ಮಾಡಿಕೊಂಡು, ರಿಜಿಸ್ಟಾರ್ ಅದೇ. ನಂತ್ರ ವಿಶೇಷವಾಗಿರೊ ಟಾಸ್ಕ್‍ಗಳ ಮಾಡುತ್ತಾ, ನನ್ನ ಪ್ರೇಮ ನಿವೇದನೆಯನ್ನ ಮಾಡಿಕೊಂಡೆ. 30 ದಿನಗಳ ಈ ಟಾಸ್ಕ್ ಕೂತುಹಲವಾಗಿರುತ್ತೆ. ನಾನು ಎಂಜಾಯ್ ಮಾಡದೇ ಅಂತಾರೆ ಬೆಂಗಳೂರು ನಿವಾಸಿ ರಷ್ಮಿ.

ಒಟ್ನಲ್ಲಿ ದೂರಾದ ಜೋಡಿಗಳು ಮತ್ತೆ ಒಂದಾಗಲು, ಪ್ರೀತಿಯ ಸೇತುವೆಯನ್ನ ಗಟ್ಟಿಗೊಳಿಸಲು, ತಮ್ಮ ಪ್ರೀತಿಯ ಆಳವನ್ನು ವ್ಯಕ್ತಪಡಿಸಲು ಈ ಆ್ಯಪ್ ಯೂಸ್‍ಫುಲ್.. ಸದ್ಯ ಈ ವ್ಯಾಲೆಂಟೈನ್ಸ್ ಡೇ ಈ ಅಪ್ಲಿಕೇಶನ್ ಹೆಚ್ಚು ಸಹಕಾರಿಯಾಗ್ತಿದೆ. ಇದು ಯುವಜನರನ್ನ ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಪ್ರೇಮಿಗಳ ದಿನದಂದು ಬೇರೆ ಬೇರೆ ರೀತಿಯಲ್ಲಿ ಪ್ರಪೋಸ್ ಮಾಡಬೇಕು ಅನ್ನತಾ ಇರೋರು ಈ ಆ್ಯಪ್ ಬಳಕೆ ಮಾಡ್ತಿದ್ದಾರೆ. ಅದೇನೆ ಇರಲಿ 30 ದಿನಗಳಲ್ಲಿ ಇಂಗ್ಲಿಷ್ ಕಲಿಯೋದು ಕಷ್ಟ ಅದ್ರೂ, 30 ದಿನಗಳಲ್ಲಿ ರಿಲೇಷನ್‍ಶಿಪ್ ಚಾಲೆಂಜ್ ಅಂತೂ ಎಂಜಾಯ್ ಮಾಡ್ತಾ ಮಾಡಬಹುದು ಬಿಡಿ.

ಇದನ್ನು ಓದಿ

1. ಪಿಡ್ಜಾ ಐಸ್‍ಕ್ರಿಮ್..24 ಕ್ಯಾರೆಟ್ ಗೋಲ್ಡ್ ಐಸ್‍ಕ್ರೀಮ್!!!

2. ಮಕ್ಕಳ ನೃತ್ಯದಲ್ಲಿ ಕನಸು ನನಸಾಗಿಸಿಕೊಳ್ತಿರೋ ಮೀರಾ

3. ಬದುಕಿನ ದಿಕ್ಕು ಬದಲಾಯಿಸಿದ ಡ್ರೈವಿಂಗ್