Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ವೀಕೆಂಡ್​ಗೂ ಒಂದೇ ದರ, ವೀಕ್​ಡೇಸ್​ನಲ್ಲೂ ಅದೇ ರೇಟ್​​..!

ಟೀಮ್​ ವೈ.ಎಸ್​. ಕನ್ನಡ

ವೀಕೆಂಡ್​ಗೂ ಒಂದೇ ದರ, ವೀಕ್​ಡೇಸ್​ನಲ್ಲೂ ಅದೇ ರೇಟ್​​..!

Sunday July 31, 2016 , 2 min Read

ಬುಲೆಟ್​ ಓಡಿಸಬೇಕು... ಹಾರ್ಲೆ ಡೆವಿಡ್ಸನ್​ ಬೈಕ್​ ಮೇಲೆ ಒಂದ್ಸಾರಿ ರೈಡ್​ ಮಾಡ್ಬೇಕು. ಆದ್ರೆ ಜೇಬಲ್ಲಿರುವ ದುಡ್ಡು ಅದಕ್ಕೆಲ್ಲಾ ದಾರಿ ಮಾಡಿಕೊಡುವುದಿಲ್ಲ. ಹಾಗಂತ ಬೈಕ್​ ಖರೀದಿ ಮಾಡಿಯೇ ರೈಡ್​ ಮಾಡ್ಬೇಕು ಅನ್ನೋ ಕಾಲ ಮುಗಿದಿದೆ. ಈಗೇನಿದ್ರೂ ಬಾಡಿಗೆಯ ಬೈಕ್​ ಓಡಿಸುವ ಕಾಲ. ಆದ್ರೆ ಈಗ ಬಾಡಿಗೆ ಬೈಕ್​ ಕೂಡ ವಾರಪೂರ್ತಿ ಒಂದೇ ರೇಟ್​ನಲ್ಲಿ ಸಿಗುತ್ತಿದೆ.​

image


ಸಿಲಿಕಾನ್ ಸಿಟಿ ಮಂದಿಗೆ ವಿಕೇಂಡ್ ಬಂತೆಂದರೆ ಲಾಂಗ್ ರೈಡ್ ಹೋಗುವುದು ಒಂದು ಕ್ರೇಜ್ ಆಗಿದೆ. ಅದರಲ್ಲೂ ದುಬಾರಿ ಬೈಕ್​ನಲ್ಲಿ ಹೋಗಲು ಎಲ್ಲರೂ ತಯಾರಿ ನಡೆಸುತ್ತಾರೆ. ಎಲ್ಲರ ಬಳಿಯೂ ದುಬಾರಿ ಬೈಕ್ ಇರುವುದಿಲ್ಲ. ಅಂಥವರಿಗಾಗಿ ಬಾಡಿಗೆಗೆ ಬೈಕ್​ಗಳನ್ನು ಕೊಡಲು ಬೆಂಗಳೂರಿನಲ್ಲಿ ಸಾಕಷ್ಟು ಕಂಪನಿಗಳು ಇವೆ, ಆದರೆ ಅಲ್ಲಿ ವೀಕೆಂಡ್​ನಲ್ಲಿ ಒಂದು ರೇಟ್, ವೀಕ್ ಡೇಸ್​ನಲ್ಲಿ ಒಂದು ರೇಟ್, ಆದರೆ ಇಲ್ಲೊಬ್ಬರು ಎಲ್ಲ ದಿನಗಳಲ್ಲೂ ಒಂದೇ ರೀತಿಯ ಬಾಡಿಗೆ ದರದಲ್ಲಿ ಬೆಂಗಳೂರಿಗರಿಗೆ ಬೈಕ್ ಒದಗಿಸುತ್ತಿದ್ದಾರೆ.

ಹೌದು, ಎನ್.ಕಶ್ಯಪ್ ಎಂಬುವವರು ಬೆಂಗಳೂರಿನಲ್ಲಿ ಅನೇಕ ಕಡೆ ಬೈಕ್, ಕಾರು ಬಾಡಿಗೆ ಕೊಡುವುದನ್ನು ನೋಡಿದ್ದರು. ಆದರೆ ಸೋಮವಾರದಿಂದ ಗುರುವಾರ ತನಕ ಒಂದು ರೇಟ್, ವಾರದ ಕೊನೆಯಲ್ಲಿ ಅಂದ್ರೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಒಂದು ರೇಟ್ ಇರುವುದನ್ನು ಅವರು ಗಮನಿಸಿದ್ದರು. ಇದರಿಂದ ಸಾಕಷ್ಟು ಯುವಕರು ತಮ್ಮ ಲಾಂಗ್ ರೈಡ್ ಆಸೆಯನ್ನು ಕೈಬಿಡುತ್ತಿದ್ದರು. ಇದನ್ನು ಗಮನಿಸಿದ ಕಶ್ಯಪ್ ಎಲ್ಲಾ ದಿನ ಅಂದರೆ ಸೋಮವಾರದಿಂದ ಭಾನುವಾರದ ತನಕ ಒಂದೇ ದರ ಇರುವ ಬೈಕ್​ನ್ನು ಯುವಕರಿಗೆ ಯಾಕೆ ನೀಡಬಾರದು ಎಂದು ಯೋಚಿಸಿದಾಗ ಹುಟ್ಟಿಕೊಂಡಿದ್ದೆ ‘ಸ್ವಿಚ್ ರೈಡ್ಸ್​​ ಡಾಟ್ ಇನ್’(switchrides.in) ಬೆಂಗಳೂರಿನ ಆರ್​ಟಿ ನಗರದಲ್ಲಿ ಕೆಲ ದಿನಗಳ ಹಿಂದೆ ಆರಂಭವಾಗಿರುವ ಈ ಸ್ವಿಚ್ ರೈಡ್ಸ್​ ಡಾಟ್ ಇನ್​ಗೆ(switchrides.in) ನೀವು ಲಾಗ್ ಇನ್ ಆದರೆ ನಿಮಗೆ ಹೊಸದೊಂದು ಲೋಕವೇ ತೆರೆದುಕೊಳ್ಳೂತ್ತದೆ. 

image


ಸ್ವಿಚ್​ ರೈಡ್ಸ್​ ಸೇವೆ ಹೇಗೆ..?

ಸ್ವಿಚ್​ ರೈಡ್ಸ್​ ಸೇವೆ ಪಡೆಯಲು ನೀವು ಆನ್​ಲೈನ್​ನಲ್ಲಿ ಬೈಕ್ ಬುಕ್ ಮಾಡಿದರೆ ನಿಮ್ಮ ವಿಳಾಸವನ್ನು ಅದರಲ್ಲಿ ನಮೂದಿಸಬೇಕು. ನೀವು ಬಾಡಿಗೆಗೆ ಪಡೆದ ಬೈಕ್​ಗಳ ಹೆಲ್ಮೆಟ್​​ಗಳಿಗೆ ಹೆಚ್ಚುವರಿ ಹಣ ಕಟ್ಟಬೇಕಿಲ್ಲ, ಪ್ರತಿ ಗಾಡಿ ಪಡೆಯುವಾಗಲೂ ಬ್ರೇಕ್ ಆಯಿಲ್, ಗೇರ್ ಇತ್ಯಾದಿಗಳ ಕಂಡೀಶನ್ ಪರಿಶೀಲಿಸಲು ಸ್ಥಳದಲ್ಲಿಯೇ ಒಬ್ಬ ಮೆಕಾನಿಕ್ ಇರುತ್ತಾರೆ. ಇನ್ನು ವಾಹನಗಳು ಪ್ರಯಾಣಿಸುತ್ತಿರುವಾಗ ಏನಾದರೂ ತೊಂದರೆ ಆದರೆ, ಸ್ವಿಚ್ ರೈಡ್ ಕಂಪನಿ ಬೈಕ್​ಗಳ ನಿರ್ವಹಣೆಗಾಗಿ ರೆಸ್ಕ್ಯೂ ಅಸಿಸ್ಟ್ ಎಂಬ ಮತ್ತೊಂದು ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅಲ್ಲಿನ ನೌಕರರು ನೀವಿದ್ದಲ್ಲಿಗೆ ಬಂದು ಸಮಸ್ಯೆ ಇರುವ ಬೈಕ್​ನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಾರೆ. ಇದು ವಾರದ ಏಳು ದಿನಗಳು ಮತ್ತು ೨೪*7 ಗಂಟೆಗಳ ಕೆಲಸ ಮಾಡುತ್ತದೆ.

ಇದನ್ನು ಓದಿ: ಶಾಲೆಗೆ ಹೋಗಿ ಮಕ್ಕಳ ಫೀಸ್​ ಕಟ್ಟುವ ಚಿಂತೆ ಇಲ್ಲ- ಕುಳಿತಲ್ಲೇ ಶಾಲಾ ಶುಲ್ಕ ಭರಿಸಲು ಇದೆ ಇನ್ಸ್ಟಾಫೀಸ್​..!

ಸ್ವಿಚ್​ರೈಡ್ಸ್​ ಕಚೇರಿ ಆರ್​ಟಿ ನಗರದಲ್ಲಿದ್ದರೂ ಹೆಬ್ಬಾಳ, ಯಲಹಂಕ ನ್ಯೂ ಟೌನ್, ಸಹಕಾರ ನಗರ, ಸದಾಶಿವನಗರ, ಕೋರಮಂಗಲ, ಆಡುಗೋಡಿ, ಲಾವೆಲ್ಲೆ ರಸ್ತೆ, ಬನ್ನೇರುಘಟ್ಟ, ಬಿಟಿಎಂ ಲೇಔಟ್, ವಿದ್ಯಾರಣ್ಯಪುರ, ರಾಜಾಜಿನಗರ, ಇಂದಿರಾನಗರ, ಕಮ್ಮನಹಳ್ಳಿ, ಕಲ್ಯಾಣನಗರಗಳಲ್ಲಿ ಪಿಕಪ್ ಪಾಯಿಂಟ್​ನ್ನು ಹೊಂದಿದೆ. ನಿಮಗೆ ಬೈಕ್ ಬೇಕಾದರೆ ಆನ್​ಲೈನ್​ ಮೂಲಕ ಬುಕ್ ಮಾಡಿ ಈ ಮೇಲಿರುವ ಯಾವುದೇ ಪ್ರದೇಶಕ್ಕೆ ಹೋಗಿ ಬೈಕ್ ಪಡೆಯಬಹುದು.

ಬೈಕ್​ಗಳು ಎಷ್ಟಿವೆ..?

ಸದ್ಯ ಕಶ್ಯಪ್ ಅವರ ಸ್ವಿಚ್​ ರೈಡ್ಸ್​ ಬಳಿ 9 ಬೈಕ್​ಗಳಿವೆ. ಸದ್ಯದಲ್ಲೇ ಇದನ್ನು 20ಕ್ಕೆ ಏರಿಸುವ ಪ್ಲಾನ್ ಇದೆ. ಮುಂದಿನ ದಿನಗಳಲ್ಲಿ ಪಿಕಪ್​ಪಾಯಿಂಟ್​ಗಳನ್ನು ಮತ್ತು ಸಿಬ್ಬಂದಿಗಳನ್ನು ಹೆಚ್ಚಿಸುವ ಐಡಿಯಾ ಅವರಲ್ಲಿದೆ.

ಜಿಪಿಎಸ್ ವ್ಯವಸ್ಥೆ

ಸ್ವಿಚ್​ರೈಡ್ಸ್​ನಲ್ಲಿರುವ ಬೈಕ್​ಗಳಿಗೆ ಜಿಪಿಎಸ್ ವ್ಯವಸ್ಥೆ ಇರುವುದರಿಂದ ಯಾವುದೇ ಕಾರಣಕ್ಕೂ ಬೈಕ್ ಕಳ್ಳತನವಾಗುವುದಿಲ್ಲ. ಇನ್ನು ಬೈಕು ಪ್ರತೀ ಗಂಟೆಗೆ 90 ಕಿಲೋಮಿಟರ್​ ದಾಟುತ್ತಿದ್ದಂತೆ ಕಂಪನಿಗೆ ಎಚ್ಚರಿಕೆಯ ಅಲರ್ಟ್ ಬರುತ್ತದೆ. ನೂರಕ್ಕೆ ಮೀರಿ ಬೈಕ್ ಚಲಾಯಿಸಿದರೆ ದಂಡ ಕಟ್ಟಬೇಕಾದ ಅನಿವಾರ್ಯತೆ ಗ್ರಾಹಕರಿಗೆ ಇರುತ್ತದೆ. ಸುರಕ್ಷತೆ ಮತ್ತು ಕಂಫರ್ಟ್​ ಜೊತೆಗೆ ಗ್ರಾಹಕರಿಗೆ ಸ್ವಿಚ್​ ರೈಡ್ಸ್​ ದುಡ್ಡಿನ ಉಳಿತಾಯವನ್ನು ಕೂಡ ಮಾಡುತ್ತದೆ. ಹೀಗಾಗಿ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇದನ್ನು ಓದಿ:

1. ಕೆಎಸ್​ಆರ್​ಟಿಸಿಯಲ್ಲಿ"ಮಿಡಿಬಸ್​" ಮ್ಯಾಜಿಕ್​- ಸಾರಿಗೆ ಸಂಸ್ಥೆಗೆ ಹೊಸ ಕಿಕ್​

2. 24x7 ಆರೋಗ್ಯಕ್ಕಾಗಿ 24x7 ಸೇವೆ ನೀಡುವ ಆ್ಯಪ್..!

3. ಅಂದು ಕೂಲಿ, ಇಂದು 5 ಕಂಪನಿಗಳ ಒಡೆಯ!