Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಬಜೆಟ್‌ 2021: 64,180 ಕೋಟಿಯ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆ ಘೋಷಿಸಿದ ವಿತ್ತ ಸಚಿವೆ

2021ರ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ರಕ್ಷಣೆ ಮತ್ತು ಯೋಗಕ್ಷೇಮ ವಲಯಕ್ಕೆ 2,83,846 ಲಕ್ಷ ಕೋಟಿಯನ್ನು ನೀಡುವ ಮೂಲಕ ಅನುದಾನದಲ್ಲಿ 137 ಪ್ರತಿಶತ ಏರಿಕೆಯಾಗಿದೆ.

ಬಜೆಟ್‌ 2021: 64,180 ಕೋಟಿಯ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆ ಘೋಷಿಸಿದ ವಿತ್ತ ಸಚಿವೆ

Monday February 01, 2021 , 2 min Read

ಸಾಂಕ್ರಾಮಿಕ ದೇಶಕ್ಕೆ ಒಡ್ಡಿದ ಸವಾಲುಗಳ ಹಿನ್ನೆಲೆಯಲ್ಲಿ 2021ರ ಬಜೆಟ್‌ನ ಆರು ಪ್ರಮುಖ ಅಂಶಗಳಲ್ಲಿ ಆರೋಗ್ಯ ಮತ್ತು ಯೋಗಕ್ಷೇಮವೂ ಒಂದು ಎಂದರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌.


ಸೋಮವಾರ ಕೇಂದ್ರ ಬಜೆಟ್‌ 2021 ಅನ್ನು ಮಂಡಿಸುತ್ತಾ ನಿರ್ಮಲಾ ಸೀತಾರಾಮನ್‌ 64,180 ಕೋಟಿಯ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಯನ್ನು ಘೋಷಿಸಿದರು.


ಈ ಅನುದಾನವನ್ನು ಮುಂದಿನ ಆರು ವರ್ಷಗಳಲ್ಲಿ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ರಕ್ಷಣಾ ವಲಯಗಳ ಬೆಳವಣಿಗೆಗಾಗಿ ಬಳಸಲಾಗುವುದು ಎಂದರು ಅವರು. ಈ ಉಪಕ್ರಮವು ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಸೇರಿದೆ ಎಂದು ವಿತ್ತ ಸಚಿವೆ ಸ್ಪಷ್ಟಪಡಿಸಿದರು. ಅನುದಾನವನ್ನು ಆರೋಗ್ಯ ರಕ್ಷಣೆಯ ಸಾಮರ್ಥ್ಯ ಅಭಿವೃದ್ಧಿಗಾಗಿ, ಹೊಸ ಬಗೆಯ ಖಾಯಿಲೆಗಳ ಶೋಧ ಮತ್ತು ಚಿಕಿತ್ಸೆಗಾಗಿ ಸಂಸ್ಥೆಗಳನ್ನು ನಿರ್ಮಿಸಲು ಬಳಸಲಾಗುವುದು ಎಂದು ಅವರು ತಿಳಿಸಿದರು.


“ಆರೋಗ್ಯ ಮೂಲಸೌಕರ್ಯ ಕ್ಷೇತ್ರಕ್ಕೆ 2021ರ ಬಜೆಟ್‌ನ ಅನುದಾನದಲ್ಲಿ ಭಾರೀ ಏರಿಕೆಯಾಗಿದೆ. ತಡೆಗಟ್ಟುವ, ರೋಗನಿರೋಧಕ ಆರೋಗ್ಯ ಮತ್ತು ಯೋಗಕ್ಷೇಮ ಸೇರಿದಂತೆ ಮೂರು ವಲಯಗಳಿಗೆ ಬಲ ನೀಡಲಾಗುತ್ತಿದೆ,” ಎಂದರು ಅವರು.

ಲೋಕಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ನಮ್ಮ ಗಮನ 17,000 ಗ್ರಾಮೀಣ ಮತ್ತು 11,000 ನಗರ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ತೆರೆಯುವಲ್ಲಿದೆ. ಪ್ರತಿ ಜಿಲ್ಲೆಯಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಲ್ಯಾಬ್‌ಗಳು ಮತ್ತು 11 ರಾಜ್ಯಗಳಲ್ಲಿ 3,382 ಸಾರ್ವಜನಿಕ ಆರೋಗ್ಯ ಘಟಕ ಸ್ಥಾಪಿಸಲಾಗುವುದು ಎಂದರು.


ಈ ಬಜೆಟ್‌ನಲ್ಲಿ ಆರೋಗ್ಯ ರಕ್ಷಣೆ ಮತ್ತು ಯೋಗಕ್ಷೇಮ ವಲಯಕ್ಕೆ ನೀಡುವ ಅನುದಾನದಲ್ಲಿ 137 ಪ್ರತಿಶತ ಏರಿಕೆಯಾಗಿದ್ದು, ಕೋವಿಡ್‌-19 ಲಸಿಕೆಗಾಗಿ 35 ಸಾವಿರ ಕೋಟಿ ಸೇರಿದಂತೆ 2,83,846 ಲಕ್ಷ ಕೋಟಿಯನ್ನು ನೀಡಲಾಗಿದೆ ಎಂದು ಸಚಿವೆ ತಿಳಿಸಿದರು.


“2021-22 ರಲ್ಲಿ ಕೋವಿಡ್‌-19 ಲಸಿಕೆಗಾಗಿ ನಾನು 35,000 ಕೋಟಿಯನ್ನು ನೀಡಿದ್ದೇನೆ. ಮತ್ತಷ್ಟು ಹಣದ ಅವಷ್ಯಕತೆ ಬಂದಲ್ಲಿ ನೀಡಲು ನಾನು ಬದ್ಧಳಾಗಿದ್ದೇನೆ. 2021-22 ರಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ ವಲಯಕ್ಕೆ ನಿರೀಕ್ಷಿತ 94,452 ಕೋಟಿಯ ಬದಲು 2.23 ಲಕ್ಷ ಕೋಟಿ ಅನುದಾನ ನೀಡಿದ್ದು, ಇದರಿಂದ ಈ ಕ್ಷೇತ್ರದ ಅನುದಾನದಲ್ಲಿ 137 ಪ್ರತಿಶತ ಏರಿಕೆಯಾಗಿದೆ,” ಎಂದರು ಅವರು.


ಸರ್ಕಾರದ ಈ ನಿರ್ಧಾರವನ್ನು ಸ್ಟಾರ್ಟಪ್‌ ಸಮೂಹ ಖುಷಿಯಿಂದ ಬರಮಾಡಿಕೊಂಡಿವೆ.


ಬಜೆಟ್‌ ಮಂಡಿಸುತ್ತಾ ವಿತ್ತ ಸಚಿವೆ ಪ್ರಸ್ತುತವಾಗಿ ಭಾರತ ತಯಾರಿಸಿರುವ ಎರಡು ಕೋವಿಡ್‌-19 ಲಸಿಕೆಗಳು ಲಭ್ಯವಿದ್ದು, ಇವುಗಳನ್ನು ಕೇವಲ ಭಾರತೀಯಷ್ಟೆ ಉಪಯೋಗಿಸದೆ, ಇತರ ದೇಶದಲ್ಲೂ ಬಳಸಲಾಗುತ್ತಿದೆ. ಇವುಗಳ ಹೊರತಾಗಿ ಇನ್ನೂ ಎರಡು ಲಸಿಕೆಗಳು ಸಧ್ಯದಲ್ಲೆ ಬರಲಿವೆ ಎಂದರು.