Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಮುಂಬೈಪ್ರಯಾಣಿಕರ ಸಂಕಷ್ಟಕ್ಕೆ "ಸಿಟಿಫ್ಲೋ" ಪರಿಹಾರ

ಆರ್​​.ಪಿ

ಮುಂಬೈಪ್ರಯಾಣಿಕರ ಸಂಕಷ್ಟಕ್ಕೆ "ಸಿಟಿಫ್ಲೋ" ಪರಿಹಾರ

Monday November 09, 2015 , 3 min Read

ತ್ರಾಸದಾಯಕ ಮತ್ತು ಜನರಿಂದ ತುಂಬಿ ತುಳುಕೋ ಸಾರ್ವಜನಿಕ ಸಾರಿಗೆಗೆ ಬೈಬೈ ಹೇಳಿದ ಮುಂಬೈಕರ್‍ಗಳು ಹೆಚ್ಚಿನ ವೆಚ್ಚವಿಲ್ಲದೇ ಐಷಾರಾಮಿ ಪ್ರಯಾಣವನ್ನು ಸಿಟಿಫ್ಲೋ ಮೂಲಕ ಅಪ್ಪಿಕೊಂಡಿದ್ದಾರೆ.

ಐಐಟಿ ಮುಂಬೈನ ಪದವೀಧರ ಮತ್ತು ಅರ್ನ್​ಸ್ಟ್​​​ ಅಂಡ್ ಯಂಗ್ ನಲ್ಲಿ ಕೆಲಸ ಮಾಡ್ತಿದ್ದ ಜೆರಿನ್ ವೆನಾಡ್ ದಿನಾವೂ ತನ್ನ ಸಹೋಗ್ಯೋಗಿಗಳು ಮುಂಬೈ ಸ್ಥಳೀಯ ಸಾರಿಗೆ ವಿರುದ್ಧ ದೂರು ಹೇಳುತ್ತಿದ್ದುದನ್ನು ನೋಡಿ ಬೇಸರಗೊಂಡಿದ್ದರು.

image


“ಪ್ರಯಾಣದ ಸಮಸ್ಯೆಯಿಂದ ದಿನವೂ ಲಕ್ಷಾಂತರ ಜನ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಮೊದಲಿನ ನನ್ನ ಕೆಲಸ ಸ್ಥಳಕ್ಕೆ ಹೋಗಲು ನನಗೆ ನಿತ್ಯ 2 ಗಂಟೆ ಬೇಕಿತ್ತು. ಮನೆಗೆ ತಲುಪೋಷ್ಟರಲ್ಲಿ ಬಹಳ ಸುಸ್ತಾಗಿ ಬೇಗನೇ ಮಲಗಿಬಿಡುತ್ತಿದ್ದೆ. ಮತ್ತೆ ಏಳುತ್ತಿದ್ದದ್ದು ಮಾರನೇ ದಿನದ ಕೆಲಸ ಕಾರ್ಯಕ್ಕೇ. ಇದು ನನಗೆ ಗೊತ್ತಿರೋ ಬಹುಜನರ ಸಮಸ್ಯೆಯಾಗಿದೆ” ಎಂದು ಹೇಳ್ತಾರೆ ಜೆರಿನ್.

ಇನ್ನು ಆಫೀಸ್‍ಗೆ ಹೊಗುವವರು ದಿನಕ್ಕೆ ಎರಡು ಬಾರಿ ಕ್ಯಾಬ್ ಬಳಸುವುದು ದುಬಾರಿಯಾದ್ರೂ ಹೆಚ್ಚಿನವರು ವಿಧಿಯಿಲ್ಲದೇ ಅದನ್ನೇ ಮಾಡುತ್ತಿದ್ದಾರೆ. ಕ್ಯಾಬ್ ಬಳಕೆಯಲ್ಲಿರುವ ಅರ್ಥಶಾಸ್ತ್ರ ಜೆರಿನ್ ಮತ್ತು ಇತರ ಐಐಟಿ ಸ್ನೇಹಿತರನ್ನು ಒಟ್ಟುಗೂಡಿಸಿ ಮುಂದಿರೋ ಉತ್ತಮ ಆಯ್ಕೆಯ ಬಗ್ಗೆ ಯೋಚಿಸುವಂತೆ ಮಾಡಿತು. ಅದೇ ಸಾರ್ವಜನಿಕ ಸಾರಿಗೆ ಮಾರ್ಗಗಳಲ್ಲಿ ಖಾಸಗೀ ಎಸಿ ಮಿನಿ ಬಸ್ ಓಡಿಸೋದು.

ಜೆರಿನ್ ಈ ವರ್ಷದ ಆರಂಭದಲ್ಲಿ ಅರ್ನ್​ಸ್ಟ್​​ ಅಂಡ್ ಯಂಗ್‍ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ತನ್ನ ಕನಸನ್ನು ನನಸು ಮಾಡೋ ಕೆಲಸವನ್ನು ಪ್ರಾರಂಭಿಸಿದರು. ಕೆಲಸ ಪ್ರದೇಶಕ್ಕೆ ಪ್ರಯಾಣ ಮಾಡುವ ಜನರೊಂದಿಗೆ ಅವರು ಎದುರಿಸುತ್ತಿರೋ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಜೆರಿನ್ ಅದಕ್ಕೆ ಪ್ರತಿಧ್ವನಿಯಾಗಿ ಸೂತ್ರ ಸಿದ್ಧಮಾಡಿಕೊಂಡರು.

ಯಶಸ್ವಿಯಾಗುತ್ತದೆ ಅನ್ನೋ ನಂಬಿಕೆಯಲ್ಲಿ ಅವರು ಮುಂಬೈನಲ್ಲಿ ಸಿಟಿಫ್ಲೋ ಪ್ರಾರಂಭಿಸಿದರು. ಸಂಸ್ಥಾಪಕ ತಂಡದಲ್ಲಿ ಜೆರಿನ್ ಜತೆ ಅಂಕಿತ್ ಅಗರ್ವಾಲ್, ಸುಭಾಷ್ ಸುಂದರವಡಿವೇಲು, ರುಷಭ್ ಷಾ. ಅದ್ವೈತ್ ವಿಶ್ವನಾಥ್ ಹಾಗೂ ಸಂಕಲ್ಪ್ ಕೆಲ್ಷಿಕಾರ್ ಇದ್ದಾರೆ. ಹೌಸಿಂಗ್.ಕಾಂ ನ ಸಹ ಸಂಸ್ಥಾಪಕ ಅದ್ವಿತೀಯ ಶರ್ಮ ಈ ಸ್ಟಾರ್ಟ್‍ಅಪ್‍ಗೆ ಮಾರ್ಗದರ್ಶಕರಾಗಿದ್ದಾರೆ. ಹ್ಯಾಂಡಿಹೋಂಗೆ ಔಪಚಾರಿಕವಾಗಿ ಮಾರ್ಗದರ್ಶಕರಾದ ನಂತ್ರ ಸಿಟಿಫ್ಲೋ ಅದ್ವಿತೀಯಗೆ ಎರಡನೆಯದ್ದು.

“ರಿಯಲ್ ಎಸ್ಟೇಟ್ ಸಮಸ್ಯೆಗಳಂತೆ, ಬಸ್ ಟ್ರಾವಲ್ ವಲಯದಲ್ಲಿ ಸಮಸ್ಯೆಗಳು ಸಾರ್ವತ್ರಿಕವಾಗಿದೆ. ಈ ಸಮಸ್ಯೆಯಿಂದ ಮತ್ತು ಇಲ್ಲಿ ಬದಲಾವಣೆ ಆಗಿಲ್ಲದ ಕಾರಣ ನನಗೆ ಆಸಕ್ತಿ ಹುಟ್ಟಿಸಿತು” ಅಂತಾರೆ ಅದ್ವಿತೀಯ.

ಮುಂಬೈ ವಸತಿ ಪ್ರದೇಶಗಳಿಂದ ಕೆಲಸದ ಸ್ಥಳಗಳನ್ನು ಸೇರುವ 10 ಮಾರ್ಗಗಳಲ್ಲಿ ಸಿಸಿಫ್ಲೋ ಸಂಚಾರ ಪ್ರಾರಂಭಿಸಿದೆ. ಪಶ್ಚಿಮ ಮುಂಬೈ ಉಪನಗರಗಳಾದ ಮಿರಾ ಭಯನ್ದೇರ್, ಬೋರಿವಾಲಿ, ಕಂಡಿವಾಲಿ, ಪೂರ್ವ ಮುಂಬೈ ಉಪನಗರಳಾದ ಥಾಣೆ, ಮುಲುಂದ್ ಮತ್ತು ನವೀ ಮುಂಬೈನ ವಾಶಿ, ಖೋಪರ್ ಖೈರಾಣೆಯಿಂದ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್‍ಗೆ ಸಾರಿಗೆ ಕಲ್ಪಿಸಲಾಗಿದೆ. ಎರಡನೇ ಹಂತದಲ್ಲಿ ಅಂಧೇರಿಗೆ ಸಾರಿಗೆ ಮಾರ್ಗಗಳನ್ನು ಇತ್ತೀಚೆಗೆ ಸೇರಿಸಲಾಗಿದೆ.

ಇದು ಹೊಸ ಕಲ್ಪನೆಯಾಗಿದ್ದು, ಜತೆಗೆ ಹಿಂದಿನ ಮಾಹಿತಿ ಉಪಯೋಗಕ್ಕೆ ಲಭ್ಯವಿಲ್ಲದ ಕಾರಣ, ಸಿಟಿಫ್ಲೋ ತಂಡವು ಹೇಗೆ ಮಾರ್ಗಗಳನ್ನು ನಿರ್ಧಸಿದರು ಅನ್ನೋ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಜೆರಿನ್ ಹೇಳೋದು ಹೀಗೆ, “ಗೂಗಲ್ ಮ್ಯಾಪ್ ನಮಗೆ ಟ್ರಾಫಿಕ್ ಮಾಹಿತಿಯ ಮೂಲವಾಗಿದೆ. ಮಾರ್ಗವÀನ್ನು ಪರಿಚಯಿಸುವ ನಿರ್ಧಾರಕ್ಕೂ ಮೊದಲು ಹೆಚ್ಚಿನ ಜನವಸತಿ ಪ್ರದೇಶ, ಕಾರ್ಪೊರೇಟ್ ವಲಯಗಳು, ಜನಸಾಂದ್ರತೆ ಜಾಗವನ್ನು ಪರಿಗಣಿಸಿದ್ವಿ. ಸಾರಿಗೆ ಸಂಪರ್ಕದಲ್ಲಿ ಅತಿಹೆಚ್ಚಿನ ಸಮಸ್ಯೆ ಇರೋ ಮಾರ್ಗದ ಬಗ್ಗೆ ನಾವು ಗಮನ ಕೇಂದ್ರೀಕರಿಸಿದೆವು. ಜತೆಗೆ ನಮ್ಮ ಮೊಬೈಲ್‍ಆಪ್ ಬಳಕೆದಾರರು ಸೂಚಿಸೋ ಮಾರ್ಗವನ್ನು ಗುರುತುಹಾಕಿಕೊಂಡ್ವಿ”.

ಸಿಟಿ ಫ್ಲೋ ಕೆಲಸ ಮಾಡೋದು ಹೇಗೆ?

ಸಿಟಿಫ್ಲೋ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಜೆರಿನ್ ಹೇಳಬೇಕಾದ್ರೆ, ಮೊದಲು ಹೊಳೆದಿದ್ದು ಇವರು ರೆಡ್ ಬಸ್‍ನ ಫಣೀಂದ್ರ ಶರ್ಮ ಮಾಡಿದ ರೀತಿಯೇ ಪ್ರಯತ್ನಿಸುತ್ತಿದ್ದಾರೆ ಎಂದು. ಆದ್ರೆ ಆ ಕಲ್ಪನೆಯನ್ನು ಬಿಟ್ಟರೆ ಇದು ನಗರಗಳ ಮಧ್ಯದ ಸಂಚಾರ.

ಟಿಕೆಟ್ ಬುಕ್ಕಿಂಗ್ ಕೇವಲ 3 ಹಂತದ ಪ್ರಕ್ರಿಯೆ. ಮಾರ್ಗದ ಆಯ್ಕೆ> ವೇಳೆಯ ಆಯ್ಕೆ> ಬುಕ್ ರೈಡ್. ದಿನವೂ ಪ್ರಯಾಣಿಕರ ಮಾರ್ಗ ಬದಲಾವಣೆ ಇಲ್ಲದ ಕಾರಣ, ಜತೆಗೆ ಆಪ್ ನಲ್ಲಿ ಇತ್ತೀಚೆಗೆ ಮಾಡಿದ ಸವಾರಿ ಮಾಹಿತಿ ಇರೋದ್ರಿಂದ ದೈನಂದಿನ ಪ್ರಯಾಣಿಕರಿಗೆ ಇದು ಸುಲಭವಾಗಿದೆ.

ನಗರದೊಳಗೆ ಖಾಸಗಿ ಬಸ್ ಮಾಲೀಕರು ತಮ್ಮದೇ ಆದ ಮಾರ್ಗವನ್ನು ಹೊಂದಿರುವುದಿಲ್ಲ. ಹೆಚ್ಚಾಗಿ ಅವರು ಕಂಪನಿ ಬಸ್‍ಗಳಾಗಿ ನಗರಗಳ ಮಧ್ಯೆ ಓಡಿಸುತ್ತಾರೆ. ಆದ್ರೆ ದಿನದಲ್ಲಿ ಹೆಚ್ಚಿನ ಮಾರ್ಗದಲ್ಲಿ ಬಸ್ ಓಡಿಸಿ, ಹೆಚ್ಚಿನ ಹಣವನ್ನು ಸಂಪಾದನೆ ಮಾಡಿಕೊಳ್ಳುವಲ್ಲಿ ಸಿಟಿಫ್ಲೋ ಸಹಾಯ ಮಾಡಿದೆ. ಸಧ್ಯ ಸಿಟಿಫ್ಲೋ ಮುಂಬೈನ 10 ಖಾಸಗಿ ಬಸ್ ಆಪರೇಟರ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ವಾರದಿಂದ ವಾರಕ್ಕೆ ಇದು ಹೆಚ್ಚಾಗುತ್ತಿದೆ ಅಂತಾರೆ ಜೆರಿನ್.

ಸಿಟಿಫ್ಲೋ-ಆನ್‍ಲೈನ್ ಟ್ರಾವೆಲ್ ಏಜೆಂಟ್ ರೀತಿ

ಭಾರತೀಯ ಸಾರಿಗೆ ಮತ್ತು ಪ್ರವಾಸೋದ್ಯಮಕ್ಕೆ 42 ಶತಕೋಟಿ ಯುಎಸ್ ಡಾಲರ್ ಮಾರುಕಟ್ಟೆಯಿದೆ. ಮುಂದಿನ 10 ವರ್ಷಗಳಲ್ಲಿ ಇದು ಇನ್ನೂ 10.2% ಬೆಳವಣಿಗೆ ಕಾಣುತ್ತದೆ. ಇದರ ಒಟ್ಟಾರೆ ಬುಕ್ಕಿಂಗ್‍ಗಳಲ್ಲಿ ಆನ್‍ಲೈನ್ ಟ್ರಾವೆಲ್ ಏಜೆಂಟ್‍ಗಳ ಷೇರು 17.5% ಇದೆ. ಇಂತಹ ಸಂದರ್ಭದಲ್ಲಿ ಸಿಟಿಫ್ಲೋ ಆನ್‍ಲೈನ್ ಟ್ರಾವೆಲ್ ಏಜೆಂಟ್‍ಗಳಂತೆ ಕೆಲಸ ಮಾಡಿ ರೆಡ್‍ಬಸ್, ಐಬಿಬೋ, ಕ್ಲಿಯರ್‍ಟ್ರಿಪ್, ಮೇಕ್‍ಮೈಟ್ರಿಪ್ ನಂತಹ ವೇದಿಕೆಯೊಂದಿಗೆ ಸ್ಪರ್ಧೆಯಲ್ಲಿದೆ. ಅಲ್ಲದೇ ಅಂತರ್ ನಗರ ಸಂಚಾರ ಬಸ್ ಬುಕ್ಕಿಂಗ್ ನಲ್ಲಿ ಭಾರತದಲ್ಲಿ ನಾಲ್ಕು ಪ್ರಮುಖ ಆಟಗಾರರಿದ್ದಾರೆ. ಮುಂಬೈನ ಸ್ಪರ್ಧಿ ಆರ್‍ಬಸ್, ಗುರಗಾವ್ ಮೂಲದ ಎರಡು ಸ್ಟಾರ್ಟ್‍ಅಪ್ ಶಟಲ್ ಮತ್ತು ಜಿಪ್‍ಗೋ ಅಲ್ಲದೇ ಕ್ಯಾಬ್ ವಲಯದಲ್ಲಿ ಮುಂಚೂಣಿಯಲ್ಲಿರೋ ಓಲಾ ಇತ್ತೀಚೆಗಷ್ಟೇ ಬಸ್ ಸಂಚಾರಕ್ಕೆ ಕಾಲಿಟ್ಟಿದ್ದು ಓಲಾ ಷಟಲ್ ಮೂಲಕ ಸ್ಪರ್ಧೆಗಿಳಿದಿದೆ.

ಸಿಟಿಫ್ಲೋ ಟಿಕೆಟ್ ಬೆಲೆ ಪ್ರತಿ ಕಿಲೋಮೀಟರ್‍ಗೆ 3 ರೂಪಾಯಿ ಇದ್ದು ಹಾಗೂ ಸರಾಸರಿ ಪ್ರಯಾಣ ವೆಚ್ಚ ಪ್ರತಿವ್ಯಕ್ತಿಗೆ 60 ರೂಪಾಯಿ ಆಗುತ್ತದೆ. ಇದು ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‍ಪೋರ್ಟ್ ಸ್ಥಳೀಯ ಎಸಿ ಬಸ್‍ಗಳಿಗೆ ಪಡೆಯುವ ಟಿಕೆಟ್ ಬೆಲೆಗೆ ಸರಿಸಮವಾಗಿದೆ. ದಿನಕ್ಕೆ ಸರಾಸರಿ 1800 ಮಂದಿ ಪ್ರಯಾಣಿಕರು ಸಿಟಿಫ್ಲೋಲಿ ಟಿಕೆಟ್ ಬುಕ್ ಮಾಡ್ತಾರೆ.

ಜೆರಿನ್ ಹೇಳುವಂತೆ ಈ ಚಿಕ್ಕ ಕಂಪನಿಗೆ ಬಂಡವಾಳ ಹೂಡಲು ಅನೇಕ ಹೂಡಿಕೆದಾರರು ಮುಂದೆ ಬಂದಿದ್ದಾರೆ. ಮೊದಲ ಸುತ್ತಿನ ಹೂಡಿಕೆ ಮುಂದಿನ ಕೆಲ ವಾರಗಳಲ್ಲಿ ಮುಗಿಯುತ್ತದೆ.