Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಕೇಕ್​​​​ನಲ್ಲಿ ಅರಳಿತು ಕಲಾತ್ಮಕತೆ..!

ಟೀಮ್​ ವೈ.ಎಸ್​. ಕನ್ನಡ

ಕೇಕ್​​​​ನಲ್ಲಿ ಅರಳಿತು ಕಲಾತ್ಮಕತೆ..!

Thursday April 20, 2017 , 2 min Read

ಲೈಫ್​ನಲ್ಲಿ ಕೆಲವೊಮ್ಮೆ ಯಾವುದೋ ಘಟನೆಗಳು ಇನ್ಯಾವುದೋ ಆರಂಭಕ್ಕೆ ಕಾರಣವಾಗುತ್ತದೆ. ಅಂತಹ ಕೆಲವು ಆರಂಭಗಳು ನಮ್ಮ ಬದುಕನ್ನು ಬದಲಿಸುವುದಲ್ಲದೇ ನಮ್ಮ ಸುತ್ತಮುತ್ತಲಿನವರ ಬದುಕಿನಲ್ಲೂ ಹೊಸ ಬದಲಾವಣೆ ತರುತ್ತದೆ. ಅವರ ಸಂತೋಷಕ್ಕೆ ನಾವು ಕಾರಣರಾಗುತ್ತೇವೆ. ಈ ಎಲ್ಲಾ ಮಾತುಗಳು ಮೇಘನಾ ಆಶೀಶ್ ಅವರ ಬದುಕಿನಿಂದ ಪ್ರೇರಿತವಾಗಿವೆ ಅಂದ್ರೆ ನೀವು ಅವರ ಸ್ಟಾರ್ಟ್ಅಪ್ ಲೈಫ್ ಜರ್ನಿ ಬಗ್ಗೆ ತಿಳಿದುಕೊಳ್ಳಲೇಬೇಕು.

image


ಕೇಕ್ ಕಮಾಲ್

ಇವತ್ತು ಬೆಂಗಳೂರಿನಲ್ಲಿ ಕೇಕ್​​ಗಳ ದೊಡ್ಡ ಬೇಕರಿಗಳನ್ನು, ಪೇಸ್ಟ್ರೀ ಕ್ಲಬ್, ಕೇಕ್ ಪ್ಲಾಜ್ಹಾಗಳನ್ನು ಕಾಣುತ್ತೇವೆ. ಆದ್ರೆ ಅವು ಗ್ರಾಹಕರ ಬೇಡಿಕೆಯನ್ನು ಪೂರೈಸುವುದನ್ನಷ್ಟೇ ಮಾಡಿಕೊಂಡಿವೆ. ಆದ್ರೆ ಮೇಘನಾ ಅವರು ಇದಕ್ಕೆ ಕೊಂಚ ವಿಭಿನ್ನ. ತರಹೇವರಿ, ನಾನಾ ವಿನ್ಯಾಸದ, ಕ್ರಿಯೆಟಿವ್ ಕೇಕ್​ಗಳನ್ನು ತಮ್ಮ ಮನೆಯಲ್ಲೇ ಮಾಡಿ ಆ ಮೂಕ ಕೇಕ್ ಇಂಡಸ್ಟ್ರಿಯಲ್ಲಿ ತಮ್ಮದೇ ಹೊಸ ಚಾಪು ಮೂಡಿಸಿದ್ದಾರೆ.

image


ಅಮ್ಮನ ಆಶೀರ್ವಾದ

ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಮೇಘನಾ ಅಕಾಲಿಕವಾಗಿ ಅಮ್ಮನನ್ನು ಕಳೆದುಕೊಂಡರು . ಈ ಸಂದರ್ಭದಲ್ಲಿ ನೋವನ್ನು ಮರೆಯಲು ಅಮ್ಮನ ಆಶೀರ್ವಾದದಿಂದ ಪತಿ ಆಶೀಶ್ ಮಾತಿನಂತೆ ಕೇಕ್ ಕಲಿಕೆಯ ಕಡೆಗೆ ಗಮನ ಹರಿಸಿದ್ರು. ಜಿ.ಕೆ.ವಿ.ಕೆ.ಯಲ್ಲಿ 3 ತಿಂಗಳ ಬೇಕಿಂಗ್ ಕ್ಲಾಸ್​ಗಳಿಗೂ ಸೇರಿಕೊಂಡ್ರು. ಅದು ಬೇಕರಿ ಮಾಡಲು ಹೆಚ್ಚು ಪ್ರಯೋಜನಕಾರಿ ಕೋರ್ಸ್ ಆಗಿತ್ತು. ಅಲ್ಲಿನ ಬೇಸಿಕ್ ಕೇಕ್ ಪ್ರಿಪರೇಷನ್ ಅನುಭವದೊಂದಿಗೆ ಮೇಘನಾ ಅವರೇ ಟ್ರಯಲ್ ಅಂಡ್ ಎರರ್ ಮಾಡುವುದಕ್ಕೆ ಮುಂದಾದ್ರು. ಇದಕ್ಕೆ ಆರಂಭಿಕ ಬಂಡವಾಳವಾಗಿ 20,000 ರೂಪಾಯಿಗಳನ್ನು ತೊಡಗಿಸಿದರು. ಇದರಲ್ಲಿ 6000 ರೂಪಾಯಿ ತನಕ ಹಣವನ್ನು ಪ್ರಯೋಗಗಳಿಗೆ ಮೀಸಲಿಟ್ಟಿದ್ರು. ಅದು ಕೂಡ ಟ್ರಯಲ್ ಅಂಡ್ ಎರರ್ ರೀತಿಯಲ್ಲಿ. ಹಾಗೂ ಹೀಗೂ ತಾವು ಅಂದುಕೊಂಡಂತೆ ಕ್ರಿಯೆಟಿವ್ ಕೇಕ್ ಮಾಡುವಲ್ಲಿ ಯಶಸ್ವಿಯಾದ್ರು.

ಇದನ್ನು ಓದಿ: 3 ಗಂಟೆ ಮುಂಚಿತವಾಗಿ ಬುಕ್ ಮಾಡಿ- ಮನೆ ಬಾಗಿಲಿಗೆ ಬರಲಿದೆ ಫ್ರೆಶ್​ ಹಣ್ಣು ತರಕಾರಿ..!

ಥೀಮ್ ಮ್ಯಾಜಿಕ್

ಮೊದಲು 2 ಲೆವೆಲ್​ನ ಬರ್ತ್​ಡೇ ಕೇಕ್ ಅನ್ನು ಅಮ್ಮನ ನೆನಪಿನಲ್ಲಿ ಅಮ್ಮನಿಗಾಗಿ ತಯಾರಿಸಿದ್ರು. ನಂತರ ಸ್ನೇಹಿತರ ಹುಟ್ಟುಹಬ್ಬ, ಮ್ಯಾರೇಜ್ ಆನಿವರ್ಸರಿಗೆ ತಾವೇ ಕೇಕ್​ಗಳನ್ನು ಗಿಫ್ಟ್ ಮಾಡ್ತಿದ್ರು. ಇದು ಮೌತ್ ಪಬ್ಲಿಸಿಟಿಯಾಗಿ ಮೇಘನಾ ಅವರಿಗೆ ಹೆಚ್ಚೆಚ್ಚು ಆರ್ಡರ್ಸ್ ಬರುವುದಕ್ಕೆ ಆರಂಭವಾಯಿತು. ಅಲ್ಲಿಂದ ಅವರು ಮಾಡಿರುವ ವಿಭಿನ್ನ ಕೇಕ್​ಗಳು ಇಂದು ಅವರಿಗೆ ಭಾರಿ ಬೇಡಿಕೆ ಸೃಷ್ಟಿ ಮಾಡಿದೆ. ಫೇಸ್​ಬುಕ್ ಪೇಜ್ ಥೀಮ್, ಜಂಗಲ್ ಥೀಮ್, ಹ್ಯಾಂಡ್ ಪರ್ಸ್, ಲಿಪ್​ಸ್ಟಿಕ್​, ಕ್ಯಾಮೆರಾ, ಸೇರಿದಂತೆ ಭಿನ್ನ ವಿಭಿನ್ನ ಕೇಕ್​ಗಳನ್ನು ತಯಾರಿಸಿದ್ದಾರೆ.

image


ಅಪ್ಪನ ಪ್ರೇರಣೆ

ಮೇಘನಾ ಮೂಲತಃ ಬೆಂಗಳೂರಿನ ಮಲ್ಲೆಶ್ವರಂನವರು. ತಂದೆ ಆರ್ಟಿಸ್ಟ್. ಅವರ ಪ್ರೇರಣೆಯಿಂದಲೇ ಮೇಘನಾ ಚಿಕ್ಕಂದಿನಲ್ಲೇ ರಫ್ ಸ್ಕೆಚ್ ಮಾಡುವುದನ್ನು ಕಲಿತರು. ನಂತರದ ದಿನಗಳಲ್ಲಿ ಇದು ಇವರೊಳಗಿನ ಕ್ರಿಯೆಟಿವಿಟಿಯನ್ನು ಹೊರ ಹಾಕಲು ಸಹಕರಿಸಿತು.

ಲೈಕ್ ಕಮೆಂಟ್ ಅಂಡ್ ಪೋಸ್ಟ್

ಇಂಟರ್ನೆಟ್ ಅನ್ನು ಹೆಚ್ಚು ಬಳಕೆ ಮಾಡುವ ಮೇಘನಾ ತಮ್ಮ ಪೇಜ್ ಮೂಲಕವೇ ಸಾಕಷ್ಟು ಪ್ರಚಾರ ನೀಡುತ್ತಾರೆ. ಅಲ್ಲದೇ ಅಲ್ಲಿಂದಲೇ ಆರ್ಡರ್ಸ್ ಕೂಡ ಪಡೆಯುತ್ತಾರೆ. ನ್ಯೂಸ್ ಪೇಪರ್​ನಲ್ಲಿ ಬರುವ ಲೇಖನಿಗಳಿಂದಲೂ ಸಾಕಷ್ಟು ಆರ್ಡರ್ಸ್ ಸಿಕ್ತಿದೆ ಅಂತಾರೆ ಮೇಘನಾ. ಆರ್ಡರ್ಸ್ ಸಿಕ್ಕ ತಕ್ಷಣ ಅದನ್ನು ನೀಟಾಗಿ ಪ್ರೆಸೆಂಟ್ ಮಾಡಬೇಕು. ಒಂದು ಕೇಕ್ ತಯಾರಿಕೆಗೆ ತುಂಬಾ ಸ್ಟಡಿ ಮಾಡಬೇಕು, ಸಾಕಷ್ಟು ಪ್ರಯೋಗ ಮಾಡಬೇಕು. ಯಾವುದೇ ಒಂದು ಆರ್ಡರ್ ಬಂದ ತಕ್ಷಣ ಆ ವ್ಯಕ್ತಿಯ ಕಂಪ್ಲೀಟ್ ಪ್ರೊಫೈಲ್ ತಿಳಿದುಕೊಂಡು, ಅವರ ಅಭಿರುಚಿ, ಸ್ಪೆಷಲ್ ಕ್ಯಾರೆಕ್ಟರ್​ಗೆ ಅನುಗುಣವಾಗಿ ಕೇಕ್ ತಯಾರಿಸಬೇಕು. ಒಂದು ಕೇಕ್ ಪ್ರಿಪರೇಷನ್ 8-9 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ದಿಢೀರ್ ಆರ್ಡರ್ಸ್ ಬಂದಾಗ ರಾತ್ರಿಯೆಲ್ಲ ಕೆಲಸ ಮಾಡಿದ್ದು ಇದೆ ಅಂತಾರೆ ಮೇಘನಾ.

image


ಬದುಕು ಬದಲಿಸೋ ಮಾತು

ಇನ್ನು ಹೊಸದಾಗಿ ಕೇಕ್ ತಯಾರಿಕಾ ಕ್ಷೇತ್ರಕ್ಕೆ ಬರುವವರು ಹೆಚ್ಚು ಪ್ಯಾಷನೇಟ್ ಆಗಿರಬೇಕು ಅಂತಾರೆ. ಇವತ್ತು ನಾವು ಯಾವುದೋ ಕೋರ್ಸ್ ಓದುತ್ತೇವೆ. ಮತ್ತಿನ್ನೆನೋ ನಮ್ಮನ್ನು ಸೆಳೆಯುತ್ತವೆ. ನಾವು ಓದಿದ್ದನೇ ಮಾಡಬೇಕು ಅನ್ನೋ ಮನಸ್ಥಿತಿಯಿಂದ ಹೊರ ಬಂದು ಹೊಸತನಕ್ಕೆ ಮುನ್ನುಡಿ ಬರೆಯಬೇಕು ಅಂತಾರೆ. ಒಟ್ಟಿನಲ್ಲಿ ಕೇಕ್ ತಯಾರಿಕಾ ಉದ್ಯಮಕ್ಕೆ ಕಾಲಿರಿಸುವವರಿಗೆ ಮೇಘನಾ ಸ್ಪೂರ್ತಿಯಾಗಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ.

ಇದನ್ನು ಓದಿ:

1. ಟ್ರೆಂಡಿಯಾಗಿದೆ, ಸಖತ್​ ಟೇಸ್ಟೀಯಾಗಿದೆ- ಸಮ್ಮರ್​ನಲ್ಲಿ ನೈಟ್ರೋಜನ್​ ಐಸ್​ಕ್ರೀಮ್​ನದ್ದೇ ಮಾತು...!

2. 1000 ಕೋಟಿಯ ವಿಶೇಷ ಪ್ರಾಜೆಕ್ಟ್​- ದಾಖಲೆ ಬರೆಯಲಿದೆ "ದಿ ಮಹಾಭಾರತ್"

3. ನಿರಾಶ್ರಿತರ ಪಾಲಿಗೆ ಸಂಜೀವಿನಿ- 5 ಲಕ್ಷಕ್ಕೂ ಅಧಿಕ ಜನರ ಹಸಿವು ತಣಿಸಿದ "ಯಂಗೀಸ್ತಾನ್"