Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

115 ವರ್ಷಗಳ ಸಂಪ್ರದಾಯ ಹೊಂದಿರುವ "ಮದರ್ಸ್ ರೆಸೆಪಿ"ಯ ಕಥೆ ಕೇಳಿ

ಟೀಮ್​ ವೈ.ಎಸ್​. ಕನ್ನಡ

115 ವರ್ಷಗಳ ಸಂಪ್ರದಾಯ ಹೊಂದಿರುವ "ಮದರ್ಸ್ ರೆಸೆಪಿ"ಯ ಕಥೆ ಕೇಳಿ

Monday March 20, 2017 , 6 min Read

ಅದು 1901ರ ಕಥೆ. ಕುದುರೆಗಾಡಿಗಳು ಮತ್ತು ಮೊಟಾರ್ ಕಾರುಗಳು ಆಗಷ್ಟೇ ಭಾರತದ ಕಚ್ಚಾರಸ್ತೆಗಳಲ್ಲಿ ಕಾರುಬಾರು ಆರಂಭಿಸಿದ್ದ ದಿನಗಳು ಅದು. ಬ್ರಿಟಿಷ್ ಆಡಳಿತದ ವಿರುದ್ಧ ದೇಶಕ್ಕೆ ದೇಶವೇ ಹೋರಾಟ ಆರಂಭಿಸಿತ್ತು. ಆದ್ರೆ ದೇಸಾಯಿ ಬ್ರದರ್ಸ್ ಲಿಮಿಟೆಡ್ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ತಂಬಾಕಿನಲ್ಲಿ ಒಂದು ಉದ್ಯಮವಿದೆ ಅನ್ನುವುದನ್ನು ಅರಿತುಕೊಂಡಿತ್ತು.

ಬ್ರಿಟಿಷರು ಭಾರತದಲ್ಲಿ ತಮ್ಮ ತರಹೇವಾರಿ ಪೈಪ್​ಗಳ ಮೂಲಕ ಧೂಮಾಪಾನ ಮಾಡುತ್ತಿದ್ದರು. ಆದ್ರೆ ಹರಿಭಾಯಿ ವಿ ದೇಸಾಯಿ ಬ್ರಿಟಿಷ್ ಅಧಿಕಾರಿಗಳ, ಉದ್ಯಮಿಗಳ ವಿರುದ್ಧ ಈಜುವ ಸಾಹಸ ಮಾಡಿದ್ರು. "ದೇಸಾಯಿ ಬೀಡಿ" ಅನ್ನುವ ಕಂಪನಿಯನ್ನು ಸ್ಥಾಪನೆ ಮಾಡಿದ್ರು. ಕಳೆದ 115 ವರ್ಷಗಳಲ್ಲಿ ದೇಸಾಯಿ ಬ್ರದರ್ಸ್ ಲಿಮಿಟೆಡ್ ಉದ್ಯಮದ ಎಲ್ಲಾ ಮುಖಗಳನ್ನು ಕಂಡಿದೆ. ತನ್ನ ಉದ್ಯಮವನ್ನು ವಿಸ್ತರಣೆ ಮಾಡಿದೆ. ಲಾಜಿಸ್ಟಿಕ್, ಹೊಟೇಲ್, ಕೆಮಿಕಲ್ಸ್, ಹಾಸ್ಪಿಟಲ್ಸ್ ಮತ್ತು ಆಹಾರ ಸಂಸ್ಕರಣೆ ಸೇರಿದಂತೆ ದೇಸಾಯಿ ಬ್ರದರ್ಸ್ ಲಿಮಿಟೆಡ್ ಮಾಡದೇ ಇರುವ ಉದ್ಯಮ ಯಾವುದೂ ಉಳಿದುಕೊಂಡಿಲ್ಲ.

ಇವತ್ತು ದೇಸಾಯಿ ಬ್ರದರ್ಸ್ ಸುಮಾರು 1 ಲಕ್ಷದ 25000 ಉದ್ಯೋಗಿಗಳನ್ನು ಹೊಂದಿದೆ. ನಾಲಿಗೆಯಲ್ಲಿ ನೀರೂರಿಸುವ ಉಪ್ಪಿನಕಾಯಿ, ಮದರ್ಸ್ ರೆಸಿಪಿಯ ಮೂಲ ಕಂಪನಿಯೂ ಇದಾಗಿದೆ. 17 ವರ್ಷದ ಹಿಂದೆ ಉಪ್ಪಿನ ಕಾಯಿ ಉದ್ಯಮವನ್ನು ಆರಂಭಿಸಿದ ದೇಸಾಯಿ ಬ್ರದರ್ಸ್ ಇವತ್ತು ರುಚಿಗೆ ಫೇಮಸ್.

image


ಯಶಸ್ಸಿನ ಪಯಣ..

ಮದರ್ಸ್ ರೆಸಿಪಿ ಆರಂಭವಾಗಿದ್ದು 2002ರಲ್ಲಿ. ಆದ್ರೆ ಇವತ್ತು ಅತ್ಯುತ್ತಮ ರುಚಿಗಳಿಂದ ಇದು ಜನಪ್ರಿಯವಾಗಿಬಿಟ್ಟಿದೆ.

“ ಆ ಸಮಯದಲ್ಲಿ ಮಹಾರಾಷ್ಟ್ರ ಮತ್ತು ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಉಪ್ಪಿನಕಾಯಿ ಮಾರುಕಟ್ಟೆಯಲ್ಲಿ ಸಿಗುತ್ತಿತ್ತು. ನಮ್ಮ ಕುಟುಂಬ ಉದ್ಯಮವನ್ನು ವಿಸ್ತರಿಸುವ ಯೋಜನೆ ಮಾಡಿತ್ತು. ಆಹಾರೋದ್ಯಮದಲ್ಲಿ ಹೆಚ್ಚಿನ ಲಾಭ ಮತ್ತು ಹೆಚ್ಚು ಬೇಡಿಕೆ ಇದೆ ಅನ್ನುವುದನ್ನು ಅರಿತುಕೊಂಡಿದ್ದೆವು. ನನ್ನ ತಂದೆ ಈ ಉದ್ಯಮವನ್ನು ಮೊದಲು ಆರಂಭಿಸಿದ್ರು. ದಿನಕ್ಕೆ ನಾಲ್ಕು ಬಾರಿ ಮಾವಿನಕಾಯಿ ಮಂಡಿಗಳಿಗೆ ಹೋಗುತ್ತಿದ್ದರು. ಅತ್ಯುತ್ತಮವಾದ ಮಾವಿನಕಾಯಿಗಳನ್ನು ಆಯ್ಕೆ ಮಾಡಿ ತರುತ್ತಿದ್ದರು. ನಮ್ಮ ಉಪ್ಪಿನಕಾಯಿಗಳು ರುಚಿಕರವಾಗಲು ಆರಂಭಿಸಿದವು. ”
- ಸಂಜನಾ ದೇಸಾಯಿ, ಬ್ಯುಸಿನೆಸ್ ಡೆವಲಪ್​ಮೆಂಟ್ ಹೆಡ್, ಫುಡ್ ಡಿವಿಷನ್

ಸಂಜನಾ ಮದರ್ಸ್ ರೆಸಿಪಿಗೆ ಚಿಕ್ಕವಯಸ್ಸಿನಲ್ಲೇ ಎಂಟ್ರಿಕೊಟ್ಟಿದ್ದರು. ತಾನು ಇಷ್ಟಪಟ್ಟ ಫೀಲ್ಡ್​ನಲ್ಲೇ , ತನ್ನ 18ನೇ ವರ್ಷದಲ್ಲೇ ಕೆಲಸ ಆರಂಭಿಸಿದವರು ಸಂಜನಾ. ಸಂಜನಾ ಕನಸುಗಳಿಗೆ ಅವರ ತಂದೆ ಕೂಡ ಪ್ರೋತ್ಸಾಹ ನೀಡಿದ್ದರು. ಫ್ಯಾಮಿಲಿ ಬ್ಯುಸಿನೆಸ್​​ನಲ್ಲಿದ್ದರೂ, ಮೊದಲು ನನ್ನ ಅಕೌಂಟ್​​ಗಳನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡು ಅಂತ ಸಂಜನಾ ತಂದೆ ಕಿವಿಮಾತು ನೀಡಿದ್ದರು.

“ ತಂದೆಯ ಸಲಹೆಗಳು ನನ್ನ ಯೋಚನೆಗಳನ್ನು ಬದಲಿಸಿದ್ದವು. ನಾನು ಯು.ಎಸ್.ನ ರೋಡ್ಸ್ ಐಲೆಂಡ್​ನಲ್ಲಿ ಫೈನಾನ್ಸ್ ಮತ್ತು ಎಕಾನಾಮಿಕ್ಸ್​ನಲ್ಲಿ ಪದವಿ ಪಡೆದೆ. ಅಷ್ಟೇ ಅಲ್ಲ ಇಂಟರ್​ನ್ಯಾಷನಲ್ ಬ್ಯುಸಿನೆಸ್​ನಲ್ಲೂ ಪದವಿ ಪಡೆದುಕೊಂಡಿದೆ. ಅಷ್ಟೇ ಅಲ್ಲ ಲಾಸ್ ಏಂಜಲೀಸ್​​ನಲ್ಲಿ ಫ್ಯಾಷನ್ ಸ್ಕೂಲ್​ಗೆ ಸೇರಿಕೊಂಡು ನನ್ನಲ್ಲಿದ್ದ ಕೌಶಲ್ಯಗಳಿಗೆ ಮತ್ತಷ್ಟು ರಂಗು ತುಂಬಿದೆ. ಈ ಶಿಕ್ಷಣಗಳು ನನ್ನನ್ನು ಮತ್ತಷ್ಟು ಯೋಚನೆ ಮಾಡುವಂತೆ ಮಾಡಿತು. ಉದ್ಯಮವನ್ನು ತಿಳಿದುಕೊಳ್ಳಲು ಸಾಥ್ ನೀಡಿತು. ಅಷ್ಟೇ ಅಲ್ಲ ಫ್ಯಾಮಿಲಿ ಬ್ಯುಸಿನೆಸ್​ಗೆ ಎಂಟ್ರಿಕೊಡುವಂತೆ ಮಾಡಿ, ಅದನ್ನು ಬೆಳೆಸಲು ಮತ್ತು ನಾನು ಬೆಳೆಯಲು ಅವಕಾಶ ನೀಡಿತು. ”
- ಸಂಜನಾ ದೇಸಾಯಿ, ಬ್ಯುಸಿನೆಸ್ ಡೆವಲಪ್​ಮೆಂಟ್​​ ಹೆಡ್, ಫುಡ್ ಡಿವಿಷನ್

ಉತ್ಪಾದನಾವಲಯದಲ್ಲಿ ಮೊದಲ ಹೆಜ್ಜೆ

ದೇಸಾಯಿ ಕುಟುಂಬದ ನಾಲ್ಕು ತಲೆಮಾರುಗಳ ಪೈಕಿ ಉದ್ಯಮಕ್ಕೆ ಕಾಲಿಟ್ಟ ಮೊದಲ ಮಹಿಳೆ ಅನ್ನುವ ಖ್ಯಾತಿಯನ್ನು ಸಂಜನಾ ಪಡೆದುಕೊಂಡ್ರು. ಪದವಿಗಳನ್ನು ಪಡೆದುಕೊಂಡ ಮೇಲೆ ಫುಲ್​ಟೈಮ್ ಆಗಿ ಕಂಪನಿ ಸೇರಿಕೊಂಡ ಸಂಜನಾ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಮೆರಿಟ್ ಮೇಲೆ ಹುದ್ದೆ ಪಡೆದುಕೊಂಡಿದ್ದರೂ, ದೇಸಾಯಿ ಅನ್ನುವ ಸರ್​ನೇಮ್ ಅನ್ನು ಮೆಟ್ಟಿ ನಿಲ್ಲಬೇಕಾದ ಸ್ಥಿತಿ ಸಂಜನಾ ಎದುರಿಗಿತ್ತು.

“ ಮ್ಯಾನೇಜ್​ಮೆಂಟ್​ನ ಉನ್ನತ ಹುದ್ದೆಯಲ್ಲಿದ್ದ ಅತ್ಯಂತ ಕಿರಿಯ ಸದಸ್ಯೆ ನಾನಾಗಿದ್ದೆ. ನನ್ನ ಕೆಲಸ ನನ್ನ ಸರ್​ನೇಮ್​ಗಿಂತ ಹೆಚ್ಚು ಮಾತನಾಡಬೇಕು ಎಂದು ನಾನು ಬಯಸಿದ್ದೆ.”

ಹೀಗಾಗಿ ಸಂಜನಾ ಅತ್ಯಂತ ಕೆಳಸ್ತರದಿಂದಲೇ ಉದ್ಯಮವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದ್ರು. ಅತ್ಯುತ್ತಮ ಕ್ವಾಲಿಟಿಯ ಸರಕುಗಳನ್ನು ಪಡೆಯುವುದು, ತಯಾರಿಕೆಯ ವೇಳೆ ತೆಗೆದುಕೊಳ್ಳಬೇಕಾದ ಅಗತ್ಯಕ್ರಮಗಳು ಮತ್ತು ಯಾವಯಾವ ಸೀಸನ್​ನಲ್ಲಿ ಎಷ್ಟೆಷ್ಟು ಉತ್ಪಾದನೆ ಮಾಡಬೇಕು ಅನ್ನುವುದನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು. ತಂದೆಯ ಸಲಹೆಯಂತೆ ಸಂಜನಾ ಪ್ರತಿನಿತ್ಯ ಫ್ಯಾಕ್ಟರಿಗಳಿಗೆ ತೆರಳಿ ಅಲ್ಲಿನ ಕೆಲಸಗಳನ್ನು ಖುದ್ದಾಗಿ ಗಮನಿಸಲು ಆರಂಭಿಸಿದ್ರು. ಇದು ಅವರಿಗೆ ಉದ್ಯಮದಲ್ಲಿನ ಆಳ, ವಿಸ್ತಾರವನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು. 2004ರಲ್ಲಿ ಮೊದಲ ಬಾರಿಗೆ ಸಂಜನಾ ತನ್ನ ಕಂಪನಿಯ ಉತ್ಪನ್ನದೊಂದಿಗೆ ಸ್ಟೇಜ್ ಮೇಲೆ ಕಾಣಿಸಿಕೊಂಡರು.

ಉದ್ಯಮದಿಂದ ಕಲಿತ ಪಾಠಗಳು

ಉದ್ಯಮದ ಆರಂಭದಲ್ಲಿ ಸಂಜನಾ ಮತ್ತು ತಂಡ ಜಾಹೀರಾತು ಮತ್ತು ಪ್ರಾಡಕ್ಟ್ ಲಾಂಚ್​ಗೆ ಸಾಕಷ್ಟು ಹಣ ಖರ್ಚು ಮಾಡಿದ್ದರು. ಆದ್ರೆ ಇದರಿಂದ ಯಾವ ಲಾಭವೂ ಇಲ್ಲ ಅನ್ನುವುದು ಬೇಗನೆ ಅರಿವಾಯಿತು. ಹೊಸತನಕ್ಕಿಂತ ಹಳೆಯ ಪ್ಯಾಕೇಜಿಂಗ್​ಗಳನ್ನೇ ಜನರು ಒಪ್ಪುತ್ತಾರೆ ಅನ್ನುವುದು ಸಂಜನಾ ಮತ್ತು ತಂಡಕ್ಕೆ ಅರಿವಾಯಿತು.

“ ಇದು ನಾನು ಉದ್ಯಮದಲ್ಲಿ ಕಲಿತ ಮೊದಲ ಪಾಠ. ಸರಿಯಾದ ಸಮಯಕ್ಕೆ ಸರಿಯಾದ ಉತ್ಪನ್ನಗಳನ್ನು ತಯಾರಿಸುವುದು ಮೂಲ ಉದ್ದೇಶವಾಗಿರಬೇಕು. ಈ ಪಾಠ ಕಲಿತ ಮೇಲೆ ನಾನು ಇಲ್ಲಿ ತನಕ ಮಾರ್ಕೆಟ್​ನಿಂದ ಒಂದೇ ಒಂದು ಉತ್ಪನ್ನವನ್ನು ಹಿಂದಕ್ಕೆ ಪಡೆದಿಲ್ಲ. ”
- ಸಂಜನಾ ದೇಸಾಯಿ, ಬ್ಯುಸಿನೆಸ್ ಡೆವಲಪ್​ಮೆಂಟ್ ಹೆಡ್, ಫುಡ್ ಡಿವಿಷನ್

ಈಗ ಮದರ್ಸ್ ರೆಸಿಪಿ ಸುಮಾರು 50 ವಿವಿಧ ರೀತಿಯ ಉಪ್ಪಿನಕಾಯಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವತ್ತು ನನ್ನ ತಂಡ ಅತ್ಯುತ್ತಮ ಕ್ವಾಲಿಟಿಯ ರುಚಿಗಳನ್ನು ತಯಾರಿಸಲು ಶ್ರಮಿಸುತ್ತಿದೆ ಅಂತ ಹೆಮ್ಮೆಯಿಂದ ಹೇಳುತ್ತಾರೆ ಸಂಜನಾ ದೇಸಾಯಿ. ಇವತ್ತು ಮದರ್ಸ್ ರೆಸಿಪಿ' ಹೆಸರು ಕೇಳಿದ್ರೇನೆ ಅಮ್ಮನ ಕೈಯ್ಯಡುಗೆ ನೆನಪಾಗುತ್ತದೆ. ಅದೇ ರುಚಿ, ಶುಚಿ. ಅಮ್ಮ ವಾತ್ಸಲ್ಯದಿಂದ ನಿಮಗಿಷ್ಟವಾದ ತಿನಿಸುಗಳನ್ನ ಮಾಡಿ ಬಡಿಸಿದಂತೆ `ಮದರ್ಸ್ ರೆಸಿಪಿ' ಕೂಡ ಅದ್ಭುತವಾ ಟೇಸ್ಟ್ ಹೊಂದಿದೆ ಎಂದು ಹೆಮ್ಮೆಯಿಂದ ಸಂಜನಾ ಹೇಳುತ್ತಾರೆ.

ಉದ್ಯಮದ ಬಗ್ಗೆ

ಕೆಲವರ್ಷಗಳ ಕಾಲ ADF ಜೊತೆ ಉತ್ಪಾದನೆಯಲ್ಲಿ ಕಾಂಟ್ರಾಕ್ಟ್ ಮಾಡಿಕೊಂಡ ಬಳಿಕ ಈಗ ಮದರ್ಸ್ ರೆಸಿಪಿ ತನ್ನದೇ ಉತ್ಪಾದನಾ ಘಟಕವನ್ನು ಹೊಂದಿದೆ. ಆರಂಭದಲ್ಲಿ ಭಾರತದ ಪಶ್ಚಿಮ ಭಾಗದ ಮಾರುಕಟ್ಟೆಯಲ್ಲಿ ಮಾತ್ರ ಮದರ್ಸ್ ರೆಸಿಪಿಯ ಪಾರುಪತ್ಯವಿತ್ತು. ಈಗ ದೆಹಲಿ ಮತ್ತು ಬೆಂಗಳೂರು ಮಾರುಕಟ್ಟೆಗೂ ವಿಸ್ತರಣೆ ಆಗಿದೆ. ದುಬೈ, ಸಿಂಗಪೂರ ಮತ್ತು ಮಲೇಷಿಯಾಗಳಿಗೂ ಮದರ್ಸ್ ರಿಸಿಪಿ ರಫ್ತಾಗುತ್ತಿದೆ.

ಮದರ್ಸ್ ರೆಸಿಪಿಯ ಮತ್ತೊಂದು ವಿಶೇಷತೆ ಅಂದ್ರೆ ಆಯಾ ಪ್ರದೇಶಗಳಿಗೆ ತಕ್ಕಂತೆ ರುಚಿಗಳನ್ನು ತಯಾರು ಮಾಡುತ್ತದೆ. ಉದಾಹರಣೆಗೆ ಕೇರಳ ಶೈಲಿಯ ಆಹಾರ ಉತ್ಪನ್ನಗಳನ್ನು ತಯಾರು ಮಾಡಿದ ಮೇಲೆ ಅದು ಸರಿಯಾಗಿದೆಯಾ ಅನ್ನುವುದನ್ನು ಪರೀಕ್ಷೆ ಮಾಡಲು ಕೇರಳದ R&D ತಂಡಕ್ಕೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿಂದ ಗ್ರೀನ್ ಸಿಗ್ನಲ್ ಬಂದಮೇಲೆಯೇ ಅದನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ.

“ ಆಯಾ ಪ್ರದೇಶಗಳಲ್ಲಿ ಬೇಡಿಕೆ ಇರುವ ಆಹಾರ ಉತ್ಪನ್ನಗಳ ಬಗ್ಗೆ ಅಧ್ಯಯನ ಮಾಡಿ ಕೊನೆಗೆ ಆ ಆಹಾರವನ್ನು ತಯಾರಿಸುವ ನಿರ್ಧಾರ ಮಾಡಲಾಗುತ್ತದೆ. ಅಲ್ಲಿರುವ ರುಚಿ ಮತ್ತು ಅಲ್ಲಿ ಉಪಯೋಗಿಸುವ ಉತ್ಪನ್ನಗಳ ಬಗ್ಗೆ ಅಧ್ಯಯನ ಮಾಡಿಯೇ ನಾವು ಮಾರುಕಟ್ಟೆ ಪ್ರವೇಶಿಸುತ್ತೇವೆ. ಅಲ್ಲಿ ಬಳಸುವ ಎಣ್ಣೆ, ತಯಾರಿಸುವ ಬಗೆಗಳು, ರುಚಿ, ಖಾರ ಮತ್ತು ಇತರೆ ಅಂಶಗಳನ್ನು ಕೂಡ ನಮ್ಮಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಲ್ಲಿನ ರುಚಿಗೆ ತಕ್ಕಂತೆ ನಮ್ಮ ಉತ್ಪನ್ನ ತಯಾರಾದರೆ ಮಾತ್ರ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಇರುತ್ತದೆ. ”
- ಸಂಜನಾ ದೇಸಾಯಿ, ಬ್ಯುಸಿನೆಸ್ ಡೆವಲಪ್​ಮೆಂಟ್​ ಹೆಡ್, ಫುಡ್ ಡಿವಿಷನ್

2003ರಲ್ಲಿ ಮದರ್ಸ್ ರೆಸಿಪಿ ಅಗ್ರೆಸ್ಸಿವ್ ಆಗಿ ತನ್ನ ಬ್ರಾಂಡ್ ವಿಸ್ತರಣೆಯನ್ನು ಆರಂಭಿಸಿತ್ತು. ಭಾರತದ ಎಲ್ಲಾ ಭಾಗಗಳಲ್ಲೂ ಮದರ್ಸ್ ರೆಸಿಪಿಗೆ ಮಾರುಕಟ್ಟೆ ಸಿಗುವಂತೆ ಮಾಡುವ ಯೋಜನೆ ಆರಂಭವಾಗಿತ್ತು. ಅಷ್ಟೇ ಅಲ್ಲ ವಿದೇಶಗಳಿಗೆ ರಫ್ತು ಮಾಡುವ ಯೋಜನೆಯನ್ನೂ ಮಾಡಲಾಗಿತ್ತು.

ಮನೆಯಲ್ಲೇ ತಯಾರಾಗುವ ಉತ್ಪನ್ನಗಳು ಇದಾಗಿರುವುದರಿಂದ ಹೆಚ್ಚು ರುಚಿಕರವಾದ ಖಾದ್ಯಗಳು ಇದಾಗಿವೆ. ಸೀಸನ್​ಗಳಲ್ಲಿ ನಾವು ಹೆಚ್ಚು ಉತ್ಪಾದನೆ ಮಾಡುತ್ತೇವೆ. ಉಪ್ಪಿನಕಾಯಿ ತಯಾರಿಕೆಯನ್ನು ಹೆಚ್ಚು ಶುದ್ಧವಾಗಿ ಮತ್ತು ರುಚಿಕರವಾಗಿ ಮಾಡಲಾಗುತ್ತದೆ. ಮಾವಿನ ಕಾಯಿಗಳನ್ನು ಅಥವಾ ಇತರೆ ವಸ್ತುಗಳನ್ನು ಮಷಿನ್ ಮೂಲಕ ಅಥವಾ ಅಗತ್ಯಬಿದ್ದಲ್ಲಿ ಕೈಯಿಂದಲೇ ತುಂಡು ಮಾಡಲಾಗುತ್ತದೆ. ಎಣ್ಣೆ ಮತ್ತು ಮಸಾಲೆ ಪದಾರ್ಥಗಳನ್ನು ಕೂಡ ಆಯಾ ಪ್ರದೇಶಗಳಿಗೆ ತಕ್ಕಂತೆ ಮಾಡಲಾಗುತ್ತದೆ. ಪ್ರತೀತಿಂಗಳು ಆರ್ಡರ್​ಗಳು ಬಂದಮೇಲೆಯೇ ಬಾಟಲಿಂಗ್ ಮತ್ತು ಪ್ಯಾಕೇಜಿಂಗ್​ಗಳನ್ನು ಮಾಡಲಾಗುತ್ತದೆ.

image


ಸಂಖ್ಯೆಗಳ ಲೋಕದಲ್ಲಿ

ಉತ್ಪನ್ನಗಳ ಅಭಿವೃದ್ಧಿಯ ಜೊತೆಯಲ್ಲಿ ಸಂಜನಾ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಪ್ಲಾಟ್​ಫಾರ್ಮ್ ಅನ್ನು ತನ್ನ ಯೋಜನೆಯಲ್ಲಿ ಸೇರಿಸಿಕೊಂಡಿದ್ದರು. ಆನ್​ಲೈನ್ ಮಾರ್ಕೆಟಿಂಗ್ ಕ್ಷೇತ್ರವಾದ ಬಿಗ್​ಬಾಸ್ಕೆಟ್, ಗ್ರೋಫರ್ಸ್, ಅಮೆಜ್ಹಾನ್, Aaramshop, Farm2kitchen, MyGrahak, Callandorder, and FreshnDaily ಜೊತೆಗೆ ಮದರ್ಸ್ ರಿಸಿಪಿ ತನ್ನದೇ ಆದ ಆನ್​ಲೈನ್ ಪೋರ್ಟಲ್ ಹೊಂದಿದೆ.

2014-2015ರಲ್ಲಿ ಮದರ್ಸ್ ರೆಸಿಪಿ 200 ಕೋಟಿ ರೂಪಾಯಿ ಆದಾಯ ಪಡೆದುಕೊಂಡಿದ್ದರೆ, 2015-16ರಲ್ಲಿ ಇದು 250 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. ಪ್ರತೀವರ್ಷ ಶೇಕಡಾ 25ರಷ್ಟು ಹೆಚ್ಚುವರಿ ಆದಾಯ ಪಡೆಯಲು ಮದರ್ಸ್ ರೆಸಿಪಿ ಪ್ಲಾನ್ ಮಾಡಿದೆ. ಮುಂದಿನ 3 ವರ್ಷಗಳಲ್ಲಿ 500 ಕೋಟಿ ರೂಪಾಯಿ ವಹಿವಾಟು ನಡೆಸುವ ಗುರಿ ಹೊಂದಿದೆ.

ಯೂರೊಮಾನಿಟರ್ ವರದಿಯ ಪ್ರಕಾರ ಮದರ್ಸ್ ರೆಸಿಪಿ 400 ಕೋಟಿ ರೂಪಾಯಿ ಮೌಲ್ಯದ ಉಪ್ಪಿನಕಾಯಿ ಮಾರುಕಟ್ಟೆಯಲ್ಲಿ ಶೇಕಡಾ 25ರಷ್ಟು ಷೇರುಗಳನ್ನು ಹೊಂದಿದೆ. ಕುಕ್ಕಿಂಗ್ ಪೇಸ್ಟ್ ಇಂಡಸ್ಟ್ರಿಯ 300 ಕೋಟಿ ಮಾರುಕಟ್ಟೆ ಪೈಕಿ ಶೇಕಡಾ 20ರಷ್ಟು ಪಾಲು ಪಡೆದುಕೊಂಡಿದೆ. ರೆಡಿ ಟು ಕುಕ್ ಮಾರ್ಕೆಟ್ ವಿಭಾಗದ 400 ಕೋಟಿ ಮೌಲ್ಯದಲ್ಲಿ ಶೇಕಡಾ 10ರಷ್ಟು ಮಾರುಕಟ್ಟೆಯನ್ನು ಮದರ್ಸ್ ರೆಸಿಪಿ ಹೊಂದಿದೆ.

ಸದ್ಯ ಮದರ್ಸ್ ರೆಸಿಪಿ ಭಾರತ, ಮಿಡಲ್ ಈಸ್ಟ್, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ ಡಂ, ಅಮೆರಿಕಾ, ಯೂರೋಪ್, ಕೆನಡಾ ಮತ್ತು ಆಫ್ರಿಕಾದಲ್ಲಿ ಮಾರುಕಟ್ಟೆ ಹೊಂದಿದೆ. ಭಾರತೀಯ ಆಹಾರೋತ್ಪನ್ನ ವಿಭಾಗದಲ್ಲಿ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ವಿಶ್ವದ 42 ದೇಶಗಳಲ್ಲಿ ಮದರ್ಸ್ ರೆಸಿಪಿ ಲಭ್ಯವಿದೆ.

ಸದ್ಯ ಮದರ್ಸ್ ರೆಸಿಪಿ ಉಪ್ಪಿನಕಾಯಿ, ಕಾಂಡಿಮೆಂಟ್ ಪೇಸ್ಟ್, ಮಾವಿನಕಾಯಿ ಚಟ್ನಿ, ರೆಡಿ ಟು ಈಟ್ ಮೀಲ್ಸ್, ಪಾಪಡ್, ರೆಡಿ ಟು ಈಟ್ ಕುಕ್ ಮಸಾಲೆ ಪದಾರ್ಥಗಳು, instant ಮಿಕ್ಸ್​​ಗಳನ್ನು ತಯಾರು ಮಾಡುತ್ತಿದೆ. ಆಹಾರ ಸಂರಕ್ಷಕಗಳನ್ನು ಕಡಿಮೆ ಉಪಯೋಗಿಸಿ, ಹೆಚ್ಚು ಪ್ರಾಕೃತಿಕ ಸಂರಕ್ಷಕಗಳನ್ನು ಬಳಸಿಕೊಳ್ಳುವುದೇ ಮದರ್ಸ್ ರೆಸಿಪಿಯ ಮೂಲ ಉದ್ದೇಶವಾಗಿದೆ.

2015ರ ನವೆಂಬರ್​​ನಲ್ಲಿ ಮದರ್ಸ್ ರೆಸಿಪಿ ಕೊಲ್ಕತ್ತಾ ಮೂಲದ ಎಲ್ಮಾಕ್ ಆಗ್ರೋ ಮಾನ್ಯುಫಾಕ್ಚರಿಂಗ್ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಎಲ್ಮಾಕ್ ಬ್ರಾಂಡ್​ಗಾಗಿ ಮದರ್ಸ್ ರೆಸಿಪಿ 30 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು. ಈ ಮೂಲಕ ಮದರ್ಸ್ ರಿಸಿಪಿ ಪೂರ್ವ ಭಾಗದಲ್ಲಿ ಮಾರುಕಟ್ಟೆ ವಿಸ್ತರಣೆ ಆರಂಭಿಸಿತ್ತು.

ಇದನ್ನು ಓದಿ: ಗಾನ ನೃತ್ಯದ "ಆರಾಧನ" ಅಪರ್ಣಾ 

ಎಲ್ಮಾಕ್ ವರ್ಷವೊಂದಕ್ಕೆ ಸುಮಾರು 40 ರಿಂದ 50 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿತ್ತು. ಈ ಪೈಕಿ ದೇಶೀಯ ಮಾರುಕಟ್ಟೆಯಿಂದಲೇ ಎಲ್ಮಾಕ್ 10 ಕೋಟಿ ರೂಪಾಯಿ ಬಾಚಿಕೊಳ್ಳುತ್ತಿತ್ತು. ದೇಸಾಯಿ ಬ್ರದರ್ಸ್ ಭಾರತದಲ್ಲಿ 40-50 ಕೋಟಿ ವೆಚ್ಚ ಮಾಡಿ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದಲ್ಲಿದೆ. ಇತರೆ ಕಂಪನಿಗಳನ್ನು ತೆಕ್ಕೆಗೆ ತೆಗೆದುಕೊಳ್ಳಲು 50 ರಿಂದ 100 ಕೋಟಿ ರೂಪಾಯಿಗಳನ್ನು ತನ್ನಲ್ಲೇ ಇಟ್ಟುಕೊಂಡಿದೆ.

ಮದರ್ಸ್ ರೆಸಿಪಿ ವಾರ್ಷಿಕ ವಹಿವಾಟಿನಲ್ಲಿ ಶೇಕಡಾ 40ರಷ್ಟನ್ನು ರಫ್ತುನಿಂದಲೇ ಪಡೆಯುತ್ತಿದೆ. ಮದರ್ಸ್ ರೆಸಿಪಿ ದಕ್ಷಿಣ ಭಾರತದಲ್ಲಿ MTR ಮತ್ತು ಪ್ರಿಯಾ ಪಿಕಲ್ ನಿಂದ ಹೆಚ್ಚಿನ ಸ್ಪರ್ಧೆಯನ್ನು ಎದುರಿಸುತ್ತಿದೆ.

ಈಗ ಸಂಜನಾ ಮದರ್ಸ್ ರೆಸಿಪಿ ಮೂಲಕ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಸಂಜನಾ ಹಿಂದೆ ಅವರ ತಾತ, ಮುತ್ತಾತಂದಿರು ಸಾಗಿ ಹೋದ ಯಶಸ್ಸಿನ ಕಥೆಗಳಿವೆ. ಹೀಗಾಗಿ ಸಂಜನಾ ಉದ್ಯಮದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳುತ್ತಾ ಮಾತು ಮುಗಿಸುತ್ತಾರೆ. 

ಇದನ್ನು ಓದಿ:

1. ಉಚಿತ ಯೋಗ ಕಲಿಸುವ"ಪ್ರಿಯಾ"ಗುರು..!

2. ಇಳಿವಯಸ್ಸಿನಲ್ಲೂ ದೇಶ ಸುತ್ತುವ ಸಾಹಸಿ : ವಿಶ್ವಪರ್ಯಟನೆ ಮಾಡ್ತಿದ್ದಾರೆ 95ರ ಅಮ್ಮಾಚಿ 

3. ಹೈ-ವೇನಲ್ಲೇ ಡಾಬಾಕ್ಕೆ ಹೋಗಬೇಕಿಲ್ಲ- ಸಿಟಿಗೂ ಎಂಟ್ರಿಯಾಗಿದೆ..!