Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಉದ್ಯಮ ಯಾವುದು ಅನ್ನುವುದು ಮುಖ್ಯವಲ್ಲ- ಇಂಟರ್​ನೆಟ್​​ಗೆ ಮೊದಲ ಸ್ಥಾನ..!

ಟೀಮ್​ ವೈ.ಎಸ್​. ಕನ್ನಡ

ಉದ್ಯಮ ಯಾವುದು ಅನ್ನುವುದು ಮುಖ್ಯವಲ್ಲ- ಇಂಟರ್​ನೆಟ್​​ಗೆ ಮೊದಲ ಸ್ಥಾನ..!

Wednesday March 01, 2017 , 3 min Read

ಭಾರತ ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಓಡುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​​ಗಳಂತೆ ಜಿಡಿಪಿಯಲ್ಲಿ ಬೆಳೆಯುತ್ತಿದೆ. ದೇಶದ ಒಟ್ಟು ಜಿಡಿಪಿಯ ಮೂರನೇ ಒಂದು ಭಾಗಕ್ಕಿಂತಲೂ ಅಧಿಕ ಆದಾಯ ಸಣ್ಣ ಉದ್ಯಮಗಳಿಂದ ಹುಟ್ಟುತ್ತಿದೆ. ಸುಮಾರು 51 ಮಿಲಿಯನ್​ಗಿಂತಲೂ ಅಧಿಕ ಸಣ್ಣ ಉದ್ದಿಮೆದಾರರಿದ್ದಾರೆ. ದೇಶದ ಶೇಕಡಾ 40ಕ್ಕಿಂತಲೂ ಹೆಚ್ಚು ಕೆಲಸಗಾರರು ಈ ಸಣ್ಣ ಉದ್ದಿಮೆದಾರರ ಬಳಿ ಕೆಲಸ ಮಾಡುತ್ತಿದ್ದಾರೆ. ಮ್ಯಾಕ್ರೋ- ಎಕನಾಮಿಕ್ ವ್ಯವಸ್ಥೆ ಬದಲಾಗುತ್ತಿದೆ. ಹೆಚ್ಚಯ ಬಳಕೆದಾರರು, ಕಡಿಮೆ ಬಡ್ಡಿದರ,ಜೊತೆಗೆ ಸಂಹವನ ವ್ಯವಸ್ಥೆಯಲ್ಲಿನ ಬದಲಾವಣೆ ಭಾರತದ ಆದಾಯದ ಬದಲಾವಣೆಗೆ ಕಾರಣವಾಗಿದೆ. ಡಿಜಿಟಲ್ ವ್ಯವಸ್ಥೆ ಸ್ಟಾರ್ಟ್ ಅಪ್ ಲೋಕವನ್ನು ಹೆಚ್ಚು ಬೆಂಬಲಿಸುತ್ತಿದೆ. ಚಿಕ್ಕ ಮತ್ತು ಮಧ್ಯಮ ಮಟ್ಟದ ಉದ್ಯಮಿಗಳು ಮತ್ತು ಉದ್ದಿಮೆಗಳು ಬದಲಾವಣೆಯ ಜೊತೆಗೆ ಲಾಭದ ಹಾದಿಯನ್ನು ತುಳಿಯುತ್ತಿವೆ.

image


ಭಾರತ ಮೊಬೈಲ್ ಬ್ರಾಂಡ್​ಬ್ಯಾಂಡ್ ಕನೆಕ್ಟಿವಿಟಿಯನ್ನು ಸರಿಯಾಗಿ ಬಳಸಿಕೊಳ್ಳುವ ಹಾದಿಯಲ್ಲಿದೆ. ಸುಮಾರು 1 ಮಿಲಿಯನ್​ಗಿಂತಲೂ ಅಧಿಕ ಜನರು ಪ್ರತಿದಿನ ಹೊಸದಾಗಿ ಮೊಬೈಲ್​ನಲ್ಲಿ ಇಂಟರ್​ನೆಟ್ ಬಳಕೆ ಮಾಡುತ್ತಿದ್ದಾರೆ. 2016ರಲ್ಲಿ ಸುಮಾರು 460 ಮಿಲಿಯನ್ ಮೊಬೈಲ್ ಇಂಟರ್​ನೆಟ್ ಬಳಕೆದಾರರಿದ್ದರು. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆನ್​ಲೈನ್ ಮತ್ತು ಡಿಜಿಟಲ್ ವ್ಯವಸ್ಥೆಗಳಿಗೆ ಹೆಚ್ಚಾಗಿ ಹೊಂದಿಕೊಳ್ಳುತ್ತಿದ್ದಾರೆ. ಹೀಗಾಗಿ ಉದ್ದಿಮೆದಾರರು ಅನ್ಯಮಾರ್ಗವಿಲ್ಲದೆ ಆನ್​ಲೈನ್ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಮಾರ್ಕೆಟಿಂಗ್, ಸೇಲ್ಸ್, ಪೇಮೆಂಟ್ಸ್ ಮತ್ತು ಕಸ್ಟಮರ್ ಸರ್ವೀಸ್​ಗಳೆಲ್ಲವೂ ಬಹುತೇಕವಾಗಿ ಈಗ ಆನ್​​ಲೈನ್ ಆಗಿಬಿಟ್ಟಿದೆ.

ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್ ಇಂಟರ್​ನೆಟ್ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಅಷ್ಟೇ ಅಲ್ಲ ಆನ್​ಲೈನ್ ಮೂಲಕ ಎಷ್ಟು ಹೆಚ್ಚು ಮತ್ತು ಉತ್ತಮವಾಗಿ ಪ್ರಯೋಜನ ಪಡೆಯಬಹುದೋ ಅಷ್ಟು ದೊಡ್ಡದಾಗಿ ಉದ್ದಿಮೆಗಳು ಬೆಳೆಯುತ್ತಿವೆ. ಇವತ್ತಿನ ಚಿಕ್ಕ ಮತ್ತು ಮಧ್ಯಮ ಉದ್ದಿಮೆಗಳು ಭವಿಷ್ಯದಲ್ಲಿ ದೊಡ್ಡ ಉದ್ದಿಮೆಗಳಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿವೆ. ಇದಕ್ಕೆಲ್ಲಾ ಇಂಟರ್​ನೆಟ್​ನ ಬಳಕೆ ಪ್ರಮುಖ ಕಾರಣವಾಗುತ್ತಿದೆ.

ಬದಲಾವಣೆಯ ಹೆಜ್ಜೆ

ಎಕಾನಮಿಕ್ ಸರ್ವೇ ಪ್ರಕಾರ ಭಾರತ 2021ರ ಹೊತ್ತಿಗೆ 20 ರಿಂದ 35 ವರ್ಷದೊಳಗಿನ ಕೆಲಸಗಾರರನ್ನು ಅತಿ ಹೆಚ್ಚು ಹೊಂದಿದ ದಾಖಲೆ ಬರೆಯಲಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಶೇಕಡಾ 64ರಷ್ಟು ಯುವಜನತೆ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಉದ್ಯಮದ ಮಂತ್ರ ಅತಿ ಹೆಚ್ಚು ಲಾಭವನ್ನು ತಂದುಕೊಡಲಿದೆ. ಡಿಜಿಟಲ್ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲ ಯುವಕರ ಸಂಖ್ಯೆಅತೀ ಹೆಚ್ಚಾಗಿರುವುದರಿಂದ ಆನ್​ಲೈನ್ ಮಾರುಕಟ್ಟೆ, ಗ್ರಾಹಕರು ಹಾಗೂ ಉದ್ಯಮದ ವ್ಯಾಪ್ತಿ ದೊಡ್ಡದಾಗಲಿದೆ. ಅಷ್ಟೇ ಅಲ್ಲ ಉದ್ಯಮದ ಪ್ರತಿಯೊಂದು ಹಂತವೂ ಡಿಜಿಟಲ್ ಮುಖಾಂತರ ಮತ್ತು ಯುವ ಕೆಲಸಗಾರರ ಮುಖಾಂತರವೇ ನಡೆಯಲಿದೆ. ಡಿಜಿಟಲ್ ಮಾಧ್ಯಮದ ಮೂಲಕ ಯುವಜನತೆ ಸ್ಫೂರ್ತಿ ಮತ್ತು ಆಕಾಂಕ್ಷೆಗಳನ್ನು ಹೊರಹಾಕಿ ಉದ್ಯಮವನ್ನು ಬೆಳೆಸಲಿದ್ದಾರೆ.

ಇದನ್ನು ಓದಿ: ಬಾಹ್ಯ ಸೌಂದರ್ಯ ಹಾಳಾದಾಗ ಕೈ ಹಿಡಿದಿದ್ದು ಅಂತರಂಗ ಸೌಂದರ್ಯ..!

ಆನ್​ಲೈನ್ ಮತ್ತು ಮೊಬೈಲ್

ಇವತ್ತು ಸಣ್ಣ ಉದ್ಯಮ ಕೂಡ ಇಂಟರ್​ನೆಟ್ ಮತ್ತು ಅದ್ರಲ್ಲಿರುವ ಟೂಲ್ಸ್​​ಗಳನ್ನು ಉಪಯೋಗಿಸಿಕೊಂಡು ಮುಂದಿನ ಹಂತಕ್ಕೆ ಹೋಗಬಹುದು. ಅಪ್ಲಿಕೇಷನ್​ಗಳು ಉದ್ಯಮವನ್ನು ಮತ್ತಷ್ಟು ದೊಡ್ಡದಾಗಿ ಮಾಡುತ್ತಿವೆ. ಬ್ರಾಂಡಿಂಗ್ ಮಾಡುವುದರಿಂದ ಹಿಡಿದು, ಉತ್ತಮ ಮಾರ್ಕೆಟಿಂಗ್ ಕ್ಯಾಂಪೇನ್ ಸೇರಿದಂತೆ ಗ್ರಾಹಕರ ಡೆಲಿವರಿ ಆಕಾಂಕ್ಷೆಗಳನ್ನು ಕೇವಲ ಇಂಟರ್​ನೆಟ್ ಮೂಲಕವೇ ತಲುಪಲು ಸಾಧ್ಯವಿದೆ. ಚೀನಾದ ಬಳಿಕ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಉದ್ಯಮ ಮತ್ತು ಆನ್​ಲೈನ್ ಬೆಳವಣಿಗೆಯ ಲೆಕ್ಕಾಚಾರದಲ್ಲಿ ಅತ್ಯುತ್ತಮ ಅಭಿವೃದ್ಧಿಯನ್ನು ಕಾಣುತ್ತಿದೆ.

ಇತ್ತೀಚೆಗೆ ನೀಲ್ಸನ್ ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಶೇಕಡಾ 50ರಷ್ಟು ಗ್ರಾಹಕರು ಯಾವುದಾದರು ಒಂದು ವಸ್ತುವನ್ನು ಖರೀದಿ ಮಾಡುವ ಮುನ್ನ ಇಂಟರ್​ನೆಟ್​ನಲ್ಲಿ, ಖರೀದಿಸಬೇಕು ಎಂದಿರುವ ವಸ್ತುವಿನ ಬಗ್ಗೆ ಕೂಲಂಕುಷವಾಗಿ ಮಾಹಿತಿ ಸಂಗ್ರಹಿಸಿಡುತ್ತಾರೆ. ಅಷ್ಟೇ ಅಲ್ಲ ವಸ್ತುವನ್ನು ತುಲನೆ ಮಾಡಿಯೇ ಅಂತಿಮ ನಿರ್ಧಾರ ಮಾಡುತ್ತಾರೆ. ಇದು ಚಿಕ್ಕ ಉದ್ಯಮಕ್ಕೆ ಹೆಚ್ಚು ಲಾಭದಾಯಕವಾಗಿದೆ. ವಸ್ತುವಿನ ಗುಣಮಟ್ಟ ಚೆನ್ನಾಗಿದ್ದರೆ ಸಹಜವಾಗೇ ಹೆಚ್ಚು ಲಾಭವಿರುತ್ತದೆ. ಹೀಗಾಗಿ ಇಂಟರ್​ನೆಟ್ ಭಾರತೀಯರ ದೊಡ್ಡ ಬೇಡಿಕೆಯ ಕೇಂದ್ರವಾಗಿ ಪರಿವರ್ತನೆ ಕಾಣುತ್ತಿದೆ. ಉದ್ಯಮಿಯ ಅಥವಾ ಉದ್ಯಮದ ವೆಬ್ ಸೈಟ್ ಇದ್ದರೆ, ಆ ಉದ್ಯಮದ ಬಗ್ಗೆ ಹೆಚ್ಚು ವಿಶ್ವಾಸಾರ್ಹತೆ ಹುಟ್ಟುತ್ತದೆ. ಅಷ್ಟೇ ಅಲ್ಲ ಆ ಉದ್ಯಮಕ್ಕೆ ಒಂದು ವೃತ್ತಿಪರ ಟಚ್ ಕೂಡ ಸಿಗುತ್ತದೆ. ಅಷ್ಟೇ ಅಲ್ಲ ಭಾರತ ಮೊಬೈಲ್- ಫಸ್ಟ್ ದೇಶವಾಗಿ ಬೆಳೆಯುತ್ತಿರುವುದರಿಂದ ಮೊಬೈಲ್ ಆ್ಯಪ್ ಬಗ್ಗೆ ಕೂಡ ಹೆಚ್ಚು ಆಸಕ್ತಿ ಬೆಳೆಯುತ್ತಿದೆ. ಅಚ್ಚರಿ ಅಂದ್ರೆ ಭಾರತದಲ್ಲಿ ಹೆಚ್ಚು ಹೆಚ್ಚು ಜನರು ಆನ್​ಲೈನ್ ಅನುಭವವನ್ನು ಪಡೆದುಕೊಳ್ಳುವುದು ಮೊಬೈಲ್ ಮೂಲಕವೇ ಅನ್ನುವುದು ಹೆಚ್ಚು ಆಸಕ್ತಿಕರವಾಗಿದೆ.

ಇವತ್ತಿನ ಜಮನಾದಲ್ಲಿ ವೆಬ್​ಸೈಟ್ ರೂಪಿಸಲು ವಿವಿಧ ರೀತಿಯ ಪ್ಲಾಟ್​ಫಾರಂಗಳು ಲಭ್ಯವಿದೆ. ಉದ್ಯಮದ ಲಾಭ ಮತ್ತು ಅದರ ವ್ಯಾಪ್ತಿಯನ್ನು ಇಟ್ಟುಕೊಂಡು ವೆಬ್​ಸೈಟ್ ರೂಪಿಸಲು ಅವಕಾಶಗಳಿವೆ. ಚಿಕ್ಕ ಉದ್ಯಮವಾಗಿದ್ದರೆ, ಅವರು ತನ್ನ ಲಾಭದ ಮತ್ತು ಗ್ರಾಹಕರಿಗೆ ತಕ್ಕಂತೆ ವೆಬ್​ಸೈಟ್ ರೂಪಿಸಿಕೊಳ್ಳುತ್ತಾರೆ. ಉದ್ಯಮ ದೊಡ್ಡದಾಗುತ್ತಾ ಹೋದಂತೆ ವಿಶ್ವಾಸಾರ್ಹತೆ ದೊಡ್ಡದಾಗುತ್ತದೆ. ಅಷ್ಟೇ ಅಲ್ಲ ವೆಬ್​ಸೈಟ್ ಮತ್ತು ಅಪ್ಲಿಕೇಷನ್​ಗಳು ಕೂಡ ಗ್ರಾಹಕರನ ಮನಸ್ಸು ಗೆಲ್ಲುತ್ತವೆ.

ಸಾಮಾಜಿಕವಾಗಿರಲಿ

ಇವತ್ತಿನ ಜಮಾನದಲ್ಲಿ ಸೋಷಿಯಲ್ ಮೀಡಿಯಾಗಳಿಗಿಂತ ಹೆಚ್ಚು ಪ್ರಭಾವ ಬೀರುವ ಮಾಧ್ಯಮ ಬೇರೋಂದಿಲ್ಲ. ಹೀಗಾಗಿ ಸಾಮಾಜಿಕ ಜಾಲಾತಾಣಗಳು ಅದರಲ್ಲೂ ಜನರು ಹೆಚ್ಚು ತಲ್ಲೀನರಾಗುವ ಸೋಶಿಯಲ್ ಮೀಡಿಯಾಗಳಲ್ಲಿ ಉದ್ಯಮ ಮತ್ತು ಉದ್ದಿಮೆ ತಲ್ಲೀನರಾಗಿದ್ದರೆ ಆದಷ್ಟು ಬೇಗನೆ ಜನರ ಮನಸ್ಸು ಗೆಲ್ಲಬಹುದು.

ಕ್ಲೌಡ್ ಸರ್ವೀಸ್ ಕಡೆ..

ಈ ವರ್ಷ ಕ್ಲೌಡ್ ಬೇಸ್ಡ್ ಟ್ರಾನ್ಸಿಷನ್​ಗಳು ಹೆಚ್ಚು ಗಮನ ಸೆಳೆಯಲಿವೆ. ಚಿಕ್ಕ ಉದ್ಯಮಗಳು ಕೂಡ ಸಾಫ್ಟ್​ವೇರ್ ಅಭಿವೃದ್ಧಿಯಾದಂತೆ ತಾಂತ್ರಿಕವಾಗಿ ಬದಲಾಗಲಿವೆ. ಪೇಮೆಂಟ್ ಸರ್ವೀಸ್​​ಗಳಲ್ಲೂ ಹೆಚ್ಚೆಚ್ಚು ಡಿಜಿಟಲ್ ಮಾರ್ಗಗಳು ಕಾಣಸಿಗಲಿವೆ. ಆರಂಭದ ವೆಚ್ಚ ಹೆಚ್ಚಾದ್ರೂ ತಾಂತ್ರಿಕ ಅಂಶಗಳು ಅಭಿವೃದ್ಧಿಯಾಗುವುದು ತುಂಬಾ ಅನಿವಾರ್ಯ ಎನಿಸಿದರೂ ಅಚ್ಚರಿ ಇಲ್ಲ. ಭಾರತದ ಸುಮಾರು 12 ಮಿಲಿಯನ್ ಅಧಿಕ ಉದ್ಯಮಗಳು ತಾಂತ್ರಿಕವಾಗಿ ಅಭಿವೃದ್ಧಿಯಾಗುವ ಸೂಚನೆಗಳು ಸಿಕ್ಕಿವೆ.

ಭದ್ರತೆ ಬಗ್ಗೆ ಗಮನ

ಆನ್​ಲೈನ್ ಉದ್ಯಮಗಳು ಹೆಚ್ಚಾದಂತೆ ಭದ್ರತೆ ಬಗ್ಗೆಯೂ ಗಮನಕೊಡಬೇಕಾಗುತ್ತದೆ. ಹೀಗಾಗಿ ಅಗತ್ಯವಾಗಿ ಭದ್ರತೆಯ ಮಟ್ಟವನ್ನು ಹೆಚ್ಚಿಸಬೇಕಾಗುತ್ತದೆ. ಆನ್​ಲೈನ್ ಮೋಸ, ವಂಚನೆಗಳಿಂದಲೂ ಗ್ರಾಹಕರನ್ನು ಕಾಪಾಡುವ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಚಿಕ್ಕ ಮತ್ತು ಮಧ್ಯಮ ಮಟ್ಟದ ಉದ್ಯಮಗಳು ಈ ಅಂಶಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುವುದು ಗ್ಯಾರೆಂಟಿ.

ಈ ಎಲ್ಲಾ ವಿಷಯಗಳ ಜೊತೆ ಡೇಟಾ ಸಂಗ್ರಹಣೆ, ವಿಶ್ಲೇಷಣೆ ಬಗ್ಗೆ ಗ್ರಾಹಕರ ಬೇಕು ಬೇಡಗಳ ನಡುವೆ ಸಾಕಷ್ಟು ಪೈಪೋಟಿ ನಡೆಯಲಿದೆ. ಇಂಟರ್​ನೆಟ್ ಎಲ್ಲದಕ್ಕೂ ಪರಿಹಾರವಾಗಲಿದೆ. ಹೀಗಾಗಿ ಬೇಡಿಕೆಗಳ ಪಟ್ಟಿಯಲ್ಲಿ ಇಂಟರ್​ನೆಟ್ ಮೊದಲ ಸ್ಥಾನಕ್ಕೆ ಏರುವುದು ಖಚಿತ.

ಇದನ್ನು ಓದಿ:

1. ಕನ್ನಡ ಶಾಲೆಗಳಿಗೆ "ಶ್ರೀನಿವಾಸ"ಕೃಪೆ..!

2. ರಂಗಭೂಮಿಯಲ್ಲಿ ಪ್ರಯೋಗದ ಕಿಕ್​​- "ವಿ ಮೂವ್"​ನಿಂದ ಹೊಸತನದ ಟಚ್​

3. ಕೃಷಿಕ ಎಸಿಪಿ ಆಗಿದ್ದು ಹೇಗೆ..? ಧಿಘವ್​​ಕರ್ ಕಥೆ ಕೇಳಿ..!