Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಪ್ಲಾಸ್ಟಿಕ್‌ ಸುತ್ತಿದ್ದ ಹೂಗುಚ್ಛ ನೀಡಿದ್ದಕ್ಕಾಗಿ ದಂಡ ವಿಧಿಸಿದ ಐಎಎಸ್‌ ಅಧಿಕಾರಿ

ಮಹಾರಾಷ್ಟ್ರಾದ ಔರಂಗಾಬಾದ್‌ನ ಪುರಸಭೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಶ್ರೀ ಆಸ್ತಿಕ್‌ ಕುಮಾರ್‌ ಪಾಂಡೆ ನಗರಾಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಪ್ಲಾಸ್ಟಿಕ್‌ ಸುತ್ತಿದ್ದ ಹೂಗುಚ್ಛ ನೀಡಿದ್ದಕ್ಕಾಗಿ 5,000 ರೂಪಾಯಿ ದಂಡ ವಿಧಿಸಿದ್ದಾರೆ.

ಪ್ಲಾಸ್ಟಿಕ್‌ ಸುತ್ತಿದ್ದ ಹೂಗುಚ್ಛ ನೀಡಿದ್ದಕ್ಕಾಗಿ ದಂಡ ವಿಧಿಸಿದ ಐಎಎಸ್‌ ಅಧಿಕಾರಿ

Sunday December 15, 2019 , 1 min Read

ಎರಡು ತಿಂಗಳ ದೀರ್ಘರಜೆಯ ನಂತರ ತೆರೆದುಕೊಂಡ ಪುರಸಭಾ ಕಛೇರಿಗೆ ಹೊಸ ಆಯುಕ್ತರಾಗಿ ನೇಮಕಗೊಂಡ ಆಸ್ತಿಕ್‌ ಅವರಿಗೆ ಸ್ವಾಗತ ಕೋರಿ ಎಲ್ಲ ಇತರೆ ಅಧಿಕಾರಿಗಳು, ಕಂಟ್ರಾಕ್ಟರ್‌ಗಳು ಹೂಗುಚ್ಛ, ಹಣ್ಣುಗಳನ್ನು ನೀಡಿ ತಮ್ಮ ಹೊಸ ಆಯುಕ್ತರನ್ನು ಸ್ವಾಗತಿಸಿದರು.


ಆಸ್ತಿಕ್‌ ಕುಮಾರ್‌ ಪಾಂಡೆ (ಚಿತ್ರಕೃಪೆ : ವರ್ಡ್‌ ಟು ವರ್ಡ್‌)


ನಗರಾಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ಮಹಾಜನ್‌ ಸಹ ಆಸ್ತಿಕ್‌ ಅವರಿಗೆ ಬೊಕ್ಕೆಯನ್ನು ನೀಡಿ ಸ್ವಾಗತ ಕೋರಲು ಬಂದರು. ಒಕ್ಕೆಯನ್ನು ಸ್ವೀಕರಿಸಿದ ನಂತರ ಆಸ್ತಿಕ್‌, ಘನತ್ಯಾಜ್ಯ ನಿರ್ವಹಣಾ ವಿಭಾಗ ಅಧಿಕಾರಿಗಳಿಗೆ ರಾಮಚಂದ್ರ ಮಹಾಜನ್‌ಗೆ ದಂಡ ವಿಧಿಸುವಂತೆ ಸೂಚನೆ ನೀಡಿದರು.


ರಾಮಚಂದ್ರ ಅವರಿಂದ 5000 ರೂಪಾಯಿಗಳ ದಂಡವನ್ನು ವಸೂಲಿ ಮಾಡಲು ಕಾರಣ ಅವರು ನೀಡಿದ್ದ ಹೂ ಬೊಕ್ಕೆಯ ಸುತ್ತ ಸುತ್ತಿದ್ದ ಪ್ಲಾಸ್ಟಿಕ್!‌


ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಗಳು ಸ್ಥಳದಲ್ಲಿಯೇ ಮಹಾಜನ್‌ರಿಂದ ದಂಡ ವಸೂಲಿ ಮಾಡಿದರು.


“ಆದಾಗ್ಯೂ, ಮಹಾಜನ್ ಆಯುಕ್ತರಿಗೆ ನೀಡಿದ ಹೂವಿನ ಪುಷ್ಪಗುಚ್ಛದಲ್ಲಿ ಪ್ಲಾಸ್ಟಿಕ್ ಇತ್ತು. ಸ್ಥಳದಲ್ಲೇ ಮಹಾಜನ್‌ರಿಂದ 5,000 ರೂ.ಗಳ ದಂಡವನ್ನು ವಸೂಲಿ ಮಾಡುವಂತೆ ಪಾಂಡೆ ಘನತ್ಯಾಜ್ಯ ನಿರ್ವಹಣಾ ವಿಭಾಗದ ತಮ್ಮ ಅಧಿಕಾರಿಗಳನ್ನು ಕೇಳಿಕೊಂಡರು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತಮ್ಮ ಸ್ವಾಂತತ್ರ್ಯ ದಿನಾಚರಣೆಯ ಭಾಷಣದಲ್ಲಿ ಪುರಸಭೆ, ನಗರಸಭೆಯ ಅಧಿಕಾರಿಗಳು ಏಕಬಳಕೆಯ ಪ್ಲಾಸ್ಟಿಕ್‌ನ ಬಳಕೆಗೆ ತಡೆ ನೀಡಬೇಕೆಂಬುದನ್ನು ಪ್ರಸ್ತಾಪಿಸಿದ್ದರು. ಅದನ್ನು ಮನಗಂಡು ಆಯುಕ್ತರು ಈ ಕ್ರಮವನ್ನು ಕೈಗೊಂಡಿದ್ದಾರೆ.


ಇದೇ ಮೊದಲಲ್ಲ

ಈ ಮುಂಚೆ ಮಹಾರಾಷ್ಟ್ರದ ಭಿಡೆಯಲ್ಲಿ ಜಿಲ್ಲಾ ಆಯುಕ್ತರಾಗಿದ್ದ ಪಾಂಡೆ, ಒಂದು ಸಭೆಯಲ್ಲಿ ಪ್ಲಾಸ್ಟಿಕ್‌ ಲೋಟಗಳನ್ನು ಚಹಾ ನೀಡಲು ಬಳಸಿದ್ದರು. ತಾವೇ ದಂಡವನ್ನೂ ಕಟ್ಟಿದ್ದರು!


ನಂತರ, ಐಎಎಸ್ ಅಧಿಕಾರಿ ತಮ್ಮ ಕ್ರಿಯೆಯ ಮೂಲಕ, ಇತರ ಸರ್ಕಾರಿ ಇಲಾಖೆಗಳು ಸಹ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಳ್ಳುತ್ತವೆ ಎಂದು ಆಶಿಸಿದ್ದರು. ನಿರೀಕ್ಷೆಯಂತೆ, ಪುರಸಭೆ ಆಯುಕ್ತರ ಕ್ರಮವು ನಾಗರಿಕ ಸಂಸ್ಥೆಯ ಎಲ್ಲ ಅಧಿಕಾರಿಗಳು ಮತ್ತು ನೌಕರರನ್ನು ಎಚ್ಚರಿಸಿದೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.